ಮಂಗಳವಾರ ಯಾರಿಗೆ ಮಂಗಳ? ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರಿಗಾಗಿ ಕಾಯುತ್ತಿರುವ ಶಾಸಕರು!

ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ  ಮಂಗಳವಾರ ನಡೆಯಲಿದ್ದು, ಯಾರ್ಯಾರು ಯಡಿಯೂರಪ್ಪ ಸಂಪುಟಕ್ಕೆ ಸೇರಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ...
ಯಡಿಯೂರಪ್ಪ
ಯಡಿಯೂರಪ್ಪ

ಬೆಳಗಾವಿ:  ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ  ಮಂಗಳವಾರ ನಡೆಯಲಿದ್ದು, ಯಾರ್ಯಾರು ಯಡಿಯೂರಪ್ಪ ಸಂಪುಟಕ್ಕೆ ಸೇರಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಅಂತಿಮ ಪಟ್ಟಿಯಲ್ಲಿ ಯಾರ ಹೆಸರಿದೆ ಎಂಬುದು ಇದುವರೆಗೂ ತಿಳಿದಿಲ್ಲ. ಇಡೀ ಸಂಪುಟ ವಿಸ್ತರಣೆ ಪ್ರಹಸನ ಸಸ್ಪೆನ್ಸ್ ಡ್ರಾಮಾವಾಗಿದೆ, ಪಕ್ಷೇತರ ಶಾಸಕ ಎಚ್ ನಾಗೇಶ್ ಸೇರಿದಂತೆ ಬಿಜೆಪಿಯ 105 ಶಾಸಕರಲ್ಲಿ ಶೇ, ಅರ್ಧದಷ್ಟು ಮಂದಿ ತಮ್ಮ ಹೆಸರು ಅಂತಿಮ ಪಟ್ಟಿಯಲ್ಲಿರಲಿದೆ ಎಂಬ ಆಶಾವಾದದಿಂದ್ದಿದ್ದಾರೆ.

2008ಕ್ಕಿಂತ ಈ ಬಾರಿ ಸಂಪುಟ ವಿಸ್ತಚರಣೆ ಚೆನ್ನಾಗಿರಲಿದೆ ಎಂದು ಕೆಲವರು ಭಕವಸೆ ವ್ಯಕ್ತ ಪಡಿಸಿದ್ದಾರೆ,2008 ರಲ್ಲಿ ಎಲ್ಲಾ ಅಂತಿಮ  ಆಯ್ಕೆ ಯಡಿಯೂರಪ್ಪ ಅವರದ್ದೇ ಆಗಿತ್ತು, ಆದರೆ ಇಂದು ಪರಿಸ್ಥಿತಿ ವಿಭಿನ್ನವಾಗಿದೆ, ಯಡಿಯೂರಪ್ಪ ಅವರ ಪರಮ ವಿರೋಧಿ ಅನಂತ್ ಕುಮಾರ್ ಸಿಎಂಗೆ ದೊಡ್ಡ ಸವಾಲಾಗಿದ್ದರು. ಯಡಿಯೂರಪ್ಪ ಅವರ ಹಲವು ಮೆಚ್ಚಿನ ಕೆಲಸಗಳಿಗೆ ಅನಂತ್ ಕುಮಾರ್ ಕೇಂದ್ರ ನಾಯಕರ ಮೂಲಕ ಬ್ರೇಕ್ ಹಾಕಿಸುತ್ತಿದ್ದರು.

2008 ರಲ್ಲಿ ಜಗದೀಶ್ ಶೆಟ್ಟರ್ ಮತ್ತು  ಕೆ.ಎಸ್ ಈಶ್ವರಪ್ಪ ಅವರ ಸಂಪುಟ ಸದಸ್ಯರಾಗಿದ್ದರೂ ಪಕ್ಷದ ಹಲವು ಜವಾಬ್ದಾರಿಗಳನ್ನೂ ಅವರಿಗೆ ವಹಿಸಿರಲಿಲ್ಲ, ಯಡಿಯೂರಪ್ಪ ಅವರ ನಿರ್ಧಾರದಿಂದಾಗಿ, ಆದರೆ ಅಂತಹ ಘಟನೆಗಳು ಈಗ ಮರುಕಳಿಸುವುದಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಹಾಗೂ ಸಂಘಟನಾ ಕಾರ್ಯದರ್ಶಿ ಬಿ,ಎಲ್ ಶಂಕರ್,ಸಂಪುಟ ಸೇರುವ ಪ್ರತಿಯೊಬ್ಬರ ಹೆಸರನ್ನು ಪರಿಶೀಲಿಸಿ ಫೈನಲೈಸ್ ಮಾಡಲಿದ್ದಾರೆ,ಆದರೆ ಯಾರ್ಯಾರು ಎಂಬುದು ಇನ್ನೂ ನಿಗೂಡ, ಆದರೆ ಸದ್ಯಕ್ಕೆ ಸಂಪೂರ್ಣ  ಮಂತ್ರಿ ಮಂಡಲ ಇರುವುದಿಲ್ಲ, 18ರಿಂದ 20 ಶಾಸಕರಿಗೆ ಮಾತ್ರ ಅವಕಾಶವಿರುತ್ತದೆ, ಯಡಿಯೂರಪ್ಪ ಗೂ ಕೂಡ ಅಂತಿಮ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ಎಂಬುದು ತಿಳಿದಿಲ್ಲ ಎಂದು ಕೆಲವು ಮೂಲಗಳು ಹೇಳಿವೆ. 

ಸೋಮವಾರ ಸಂಜೆ ಅಥವಾ ಮಂಗಳವಾರ ಬೆಳಗ್ಗೆ ಪಟ್ಟಿ ಬಹಿರಂಗ ಪಡಿಸಲಾಗುವುದು, ಪ್ರತಿಯೊಬ್ಬರು ಎಲ್ಲವನ್ನು ರಹಸ್ಯವಾಗಿಡಬೇಕೆಂದು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ, ಏಕೆಂದರೇ ಅತೃಪ್ತರನ್ನು ಸೂಕ್ಷ್ಮವಾಗಿ ನಿಭಾಯಿಸಲು ಪಕ್ಷ ಹಲವು ತಂತ್ರಗಳನ್ನು ಅನುಸರಿಸಲಿದೆ, ಏಕೆಂದರೆ ಯಾರೋಬ್ಬರು ಬಂಡಾಯ ಏಳುವುದು ಅಥವಾ ಅಸಮಾಧಾನ ಹೊರಹಾಕುವುದು ಬಿಜೆಪಿ ಹೈಕಮಾಂಡ್ ಗೆ ಬೇಕಿಲ್ಲ,. ಪ್ರಮಾಣ ವಚನ ಸ್ವೀಕರಿಸುವವರೆಗೂ ಎಲ್ಲವೂ ಗೌಪ್ಯವಾಗಲಿದೆ.

ಸಂಪುಟ ಸಚಿವರನ್ನು ವಿವಿಧ ಭಾಗ ಮತ್ತು ಜಾತಿಯ ಆಧಾರದ ಮೇಲೆ  ಆಯ್ಕೆ ಮಾಡಲಾಗಿದೆ, ಸಚಿವ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ಇನ್ನೂ 24 ಗಂಟೆಗಳು ಬಾಕಿಯಿದ್ದರೂ ಯಾರಿಗೆ ಸ್ತಾನ ಸಿಗಲಿದೆ ಎಂಬ ಊಹೆ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com