ಮುಖ್ಯಮಂತ್ರಿ ಹುದ್ದೆಯಿಂದ ಸಚಿವ ಸ್ಥಾನ-ಇದು ಹಿನ್ನಡೆಯಲ್ಲ ಎಂದ ಶೆಟ್ಟರ್

ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಜಗದೀಶ್ ಶೆಟ್ಟರ್ ಮಂಗಳವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ,
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಂಗಳೂರು: ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಜಗದೀಶ್ ಶೆಟ್ಟರ್ ಮಂಗಳವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. , ಇದು ಕರ್ನಾಟಕದ ಇತಿಹಾಸದಲ್ಲಿ ಎರಡನೇ ಬಾರಿ ನಡೆದಿರುವ ಅಪರೂಪದ ಘಟನೆಯಾಗಿದೆ. 

ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಶೆಟ್ಟರ್ "ಇದು ನನ್ನ ಪುನರಾಗಮನ" ಎಂದಿದ್ದಾರೆ."ನಾನು ಮುಜುಗರಕ್ಕೊಳಗಾಗುವುದಿಲ್ಲ ಏಕೆಂದರೆ ಬಿಎಸ್ ಯಡಿಯೂರಪ್ಪ ರಾಜ್ಯದ ಅತ್ಯಂತ ಶ್ರೇಷ್ಠ ನಾಯಕ. ಅವರಡಿಯಲ್ಲಿ ನಾನು ಸಚಿವರಾಗಿ ಸೇವೆ ಸಲ್ಲಿಸಲು ನನಗೆ ಯಾವ ಬೇಸರವಿಲ್ಲ"  ಅವರು ಹೇಳಿದ್ದಾರೆ.

"ಇದರರ್ಥ ರಾಜಕೀಯದಲ್ಲಿ ನನ್ನ ಸ್ಥಾನ ಕೆಳಗಿಳಿಯಿತೆಂದಲ್ಲ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿಡಿ ಜತ್ತಿ ಸಹ ಸಿಎಂ ಆದ ನಂತರ ಉಪಾಧ್ಯಕ್ಷ ಹುದ್ದೆ ನಿರ್ವಹಿಸಿದ್ದರು.ಮಧ್ಯಪ್ರದೇಶದ ಮಾಜಿ ಸಿಎಂಗಳಾದ ಬಾಬುಲಾಲ್ ಗೌರ್ ಶಿವರಾಜ್ ಸಿಂಗ್ ಚೌಹಾನ್ ಅವರ ಅಡಿಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.ಒ. ಪನ್ನೀರ್ ಸೆಲ್ವಂ ಸಿಎಂ ಆದವರು ಜಯಲಲಿತಾ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು." ಶೆಟ್ಟರ್ ವಿವರಿಸಿದ್ದಾರೆ.

ಪ್ರಸ್ತುತ ಸ್ಪೀಕರ್ ಆಗಿರುವ  ವಿಶ್ವೇಶ್ವರ ಹೆಗಡೆ ಕಾಗೇರಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಆರು ಅವಧಿಯ ಶಾಸಕರಾದ ಶೆಟ್ಟರ್ ಸುಮಾರು 30 ವರ್ಷಗಳ ವೃತ್ತಿಜೀವನದಲ್ಲಿ ಪ್ರತಿಯೊಂದು ಪ್ರಮುಖ ಸ್ಥಾನದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ತವರು ಜಿಲ್ಲೆ ಧಾರವಾಡ ಮತ್ತು ಇತರೆಡೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ತಾವು ಇಂದಿನಿಂದಲೇ ಪ್ರವಾಹ ಪೀಡಿತ ಸ್ಥಳಗಳಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಶೆಟ್ಟರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com