ಅಂದು ಅಮಿತ್ ಶಾ ಬಂಧಿಸಿದ್ದ ಕಾರಣಕ್ಕಾಗಿಯೇ ಇಂದು ಚಿದಂಬರಂ ಬಂಧನ - ಎಚ್ ಡಿ ದೇವೇಗೌಡ

ಅಂದು ಅಮಿತ್ ಷಾ ಅವರನ್ನು ಬಂಧಿಸಿದ್ದ ಕಾರಣಕ್ಕಾಗಿಯೇ ಇಂದು ಚಿದಂಬರಂ ಅವರ ಬಂಧನವಾಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

Published: 22nd August 2019 05:10 PM  |   Last Updated: 22nd August 2019 05:10 PM   |  A+A-


HD Devegowda

ದೇವೇಗೌಡ

Posted By : Vishwanath S
Source : UNI

ಬೆಂಗಳೂರು: ಅಂದು ಅಮಿತ್ ಷಾ ಅವರನ್ನು ಬಂಧಿಸಿದ್ದ ಕಾರಣಕ್ಕಾಗಿಯೇ ಇಂದು ಚಿದಂಬರಂ ಅವರ ಬಂಧನವಾಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ. 

ಬೆಂಗಳೂರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿ.ಚಿದಂಬರಂ ಯುಪಿಎ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಸಂದರ್ಭದಲ್ಲಿ  ಗುಜರಾತ್ ನ ಗೃಹಸಚಿವರಾಗಿದ್ದ ಅಮಿತ್ ಷಾ ಅವರನ್ನು ಸೋಹ್ರಾಬುದ್ಧೀನ್ ಶೇಖ್ ಎನ್ ಕೌಂಟರ್ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು. ಅಮಿತ್ ಷಾ ಈಗ ಕೇಂದ್ರದಲ್ಲಿ ಗೃಹಸಚಿವರಾಗಿದ್ದಾರೆ. ಹೀಗಾಗಿ ಸಿಬಿಐ ಚಿದಂಬರಂ ಅವರನ್ನು ಬಂಧಿಸಿದೆ ಎಂದು ಹೇಳಲಾಗುತ್ತಿದೆ ಎಂದರು.   

ಐಎನ್‍ಎಕ್ಸ್ ಮೀಡಿಯಾ ಹಗರಣ  ಹಳೆಯ ಪ್ರಕರಣ. ಈ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರಕರಣ ಹಾಗೂ ತಂದೆಯ ಬಂಧನದ ಕುರಿತು ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಬುಧವಾರ ಮಾತನಾಡಿರುವುದನ್ನು ಕೇಳಿದ್ದೇನೆ ಅಷ್ಟೆ. ಹಳೆಯ ಪ್ರಕರಣ ಈಗ ಏಕೆ ಈ ಹಂತಕ್ಕೆ ಹೋಗಿದೆಯೋ, ಇದು ಮುಂದೆ ಯಾವ ರೀತಿಯ ತಾರ್ಕಿಕ ಅಂತ್ಯ ಕಾಣುತ್ತದೆಯೋ ಗೊತ್ತಿಲ್ಲ ಎಂದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp