ಸಚಿವರ ಖಾತೆ ಹಂಚಿಕೆ ಪಟ್ಟಿ ಅಂತಿಮ, ಇಂದೇ ರಾಜ್ಯಪಾಲರಿಗೆ ರವಾನೆ: ಬಿಎಸ್ ವೈ

 ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಸಚಿವ ಸಂಪುಟ ಇದಾಗಲೆ ಸಿದ್ದವಾಗಿದೆ. ಇನ್ನು ಖಾತೆ ಹಂಚಿಕೆ ಪಟ್ಟಿ ಸಹ ಅಂತಿಮಗೊಂಡಿದ್ದು ಭಾನುವಾರ ಅಂತಿಮ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ.
ಬಿ.ಎಸ್.ಯಡಿಯುರಪ್ಪ
ಬಿ.ಎಸ್.ಯಡಿಯುರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಸಚಿವ ಸಂಪುಟ ಇದಾಗಲೆ ಸಿದ್ದವಾಗಿದೆ. ಇನ್ನು ಖಾತೆ ಹಂಚಿಕೆ ಪಟ್ಟಿ ಸಹ ಅಂತಿಮಗೊಂಡಿದ್ದು ಭಾನುವಾರ ಅಂತಿಮ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಶನಿವಾರವೇ ಪಟ್ಟಿ ಸಿದ್ಧವಾಗಿದೆ ಆದರೆ ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿಯವರ ನಿಧನದ ಕಾರಣ ಅದನ್ನು ತಡೆಹಿಡಿಯಲಾಗಿದೆ. "ಯಾವುದೇ ಗೊಂದಲವಿಲ್ಲ, ನಾವು ಖಾತೆ ಹಂಚಿಕೆ ಕುರಿತಂತೆ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ್ದೇವೆ ಮತ್ತು ಹೆಸರುಗಳನ್ನು ಅಂತಿಮಗೊಳಿಸಿದ್ದೇವೆ" ಎಂದು ಅವರು ಹೇಳಿದರು.

ಆಗಸ್ಟ್ 20 ರಂದು 17 ಮಂದಿ ಸಚಿವರನ್ನೊಳಗೊಂಡ ಮಂತ್ರಿಮಂಡಲವನ್ನು ಯಡಿಯೂರಪ್ಪ ಸರ್ಕಾರದಿಂದ ರಚಿಸಲಾಗಿತ್ತು. ಇನ್ನು ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳಿರಲಿದ್ದಾರೆ ಎನ್ನಲಾಗಿದ್ದು ಕೆ.ಎಸ್.ಈಶ್ವರಪ್ಪ, ಅಶ್ವತ್ನಾರಾಯಣ್, ಗೋವಿಂದ್ ಕಾರಜೋಳ ಹಾಗೂ ಆರ್ ಅಶೋಕ ಅವರಂತಹ ನಾಯಕರ ಹೆಸರುಗಳು ಡಿಸಿಎಂ ಹುದ್ದೆಗೆ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಈಶ್ವರಪ್ಪ ಸೇರಿ ಯಾರೂ ಸ್ಪಷ್ತಪಡಿಸಿಲ್ಲ. ಏತನ್ಮಧ್ಯೆ ಶೀಘ್ರದಲ್ಲೇ ಇನ್ನೂ ಮೂವರು ಮಂತ್ರಿಗಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂಬ ಸುದ್ದಿ ಇದೆ.ಇವುಗಳಲ್ಲಿ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ ಹೆಸರುಗಳು ಕೇಳಿಬರುತ್ತಿದೆ. ರಂಭಿಕ ಕ್ಯಾಬಿನೆಟ್ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಬಿಟ್ಟ ನಂತರ ಉಭಯ ನಾಯಕರ ಅನುಯಾಯಿಗಳು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.

ಲಿಂಬಾವಳಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಾಗುವುದು ಎನ್ನಲಾಗಿತ್ತಾದರೂ ಕಡೇ ಕಷಣದಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದ್ದ ಕಾರಣ ಲಿಂಬಾಳಿ ಬೆಂಬಲಿಗರಿಗೆ ನಿರಾಶೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com