ಕಟೀಲ್ ನಮ್ಮ ನಾಯಕರಲ್ಲ: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಭುಗಿಲೆದ್ದ ಆಕ್ರೋಶ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಕಟೀಲ್ ಒಬ್ಬ ಸಮರ್ಥ ನಾಯಕ, ಕಾಸರಗೋಡು ಜಿಲ್ಲೆ ಚುನಾವಣೆ ಉಸ್ತುವಾರಿ ನೀಡಿದಾಗಲೇ ಅವರು ಎಷ್ಟು ಸಮರ್ಥರು ಎಂಬುದು ತಿಳಿದಿದೆ ಎಂದು  ಬೆಳ್ತಂಗಡಿ ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ,

ಜಿಲ್ಲೆಯಲ್ಲಿ ಕಟೀಲ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು,  ಆದರರೆ ನರೇಂದ್ರ ಮೋದಿ ಹೆಸರಲ್ಲಿ ಮತ್ತೆ ಗೆದ್ದು ಬಂದಿದ್ದಾರೆ.  ಮೋದಿ ಹೆಸರಿಲ್ಲದಿದ್ದರೇ ಕಟೀಲ್ ಸೋಲನುಭವಿಸುತ್ತಿದ್ದರು ಎಂದು ಮತ್ತೊಬ್ಬ ಕಾರ್ಯಕರ್ತನ ಅಭಿಪ್ರಾಯ.

ಮೂರು ಬಾರಿ ಸಂಸದರಾಗಿದ್ದರೂ ಕಟೀಲ್ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡಲಿಲ್ಲ, ಆದರೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ,  ಆದರೆ ಇದು ದಕ್ಷಿಣ ಕನ್ನಡಕ್ಕೆ ಅನ್ವಯಿಸುವುದಿಲ್ಲ, ಕಟೀಲ್ ನಮ್ಮ ಅಧ್ಯಕ್ಷರಲ್ಲ, ಅವರು ಕೇವಲ ರಬ್ಬರ್ ಸ್ಟಾಂಪ್ ಆಗಿರುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯ ಅಸ್ಥಿತ್ವದಲ್ಲಿರುವ ಸಂಘ ಪರಿವಾರ ಯೆಸ್ ಮ್ಯಾನ್ ಆಗಿದೆ. ಯಾವುದನ್ನು ಪ್ರಶ್ನಿಸದೇ ಎಲ್ಲಾ ಕೆಲಸಗಳಿಗೂ ಅನುಮತಿ ನೀಡುತ್ತಿದೆ ಎಂದು ಮಂಗಳೂರಿನ ಬಿಜೆಪಿ ಕಾರ್ಯಕರ್ತ ಸುನೀಲ್ ಬೈಜಕೇರಿ ತಿಳಿಸಿದ್ದಾರೆ. 

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಕಟೀಲ್ ಮೂಲಕ ದಕ್ಷಿಣ ಕನ್ನಡದಲ್ಲಿ ತಮ್ಮ ಹಿಡಜಿತ ಆ ಸಾಧಿಸಿ ಮೂಲಕ ತಮ್ಮ ಬಾಸ್ ಗಳಾದ ಶಾ ಮತ್ತು ಮೋದಿಯನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com