ಖಾತೆ ಹಂಚಿಕೆ ಬೆನ್ನಲ್ಲೇ... ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನಿತರ ಕ್ಯಾತೆ!

ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲೂ ಭಿನ್ನಮತ ಭುಗಿಗೆಲ್ಲೆದ್ದಿದ್ದು, ನಾಯಕರ ಬೆಂಬಲಿಗರು ನೇರವಾಗಿಯೇ ಸಿಎಂ ಬಿಎಸ್ ವೈ ಮತ್ತು ಬಿಜೆಪಿ ಹೈಕಮಾಂಡ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸರ್ಕಾರಿ ಕಾರು ವಾಪಸ್ ಗೆ ಮುಂದಾದ ಸಿಟಿ ರವಿ, ಆರ್ ಅಶೋಕ್; ರಾಯಣ್ಣ ಬ್ರೇಗೇಡ್, ವಾಲ್ಮೀಕಿ ಸಮುದಾಯದಿಂದ ಬಿಎಸ್ ವೈ ವಿರುದ್ಧ ಅಸಮಾಧಾನ

ಬೆಂಗಳೂರು: ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲೂ ಭಿನ್ನಮತ ಭುಗಿಗೆಲ್ಲೆದ್ದಿದ್ದು, ನಾಯಕರ ಬೆಂಬಲಿಗರು ನೇರವಾಗಿಯೇ ಸಿಎಂ ಬಿಎಸ್ ವೈ ಮತ್ತು ಬಿಜೆಪಿ ಹೈಕಮಾಂಡ್ ವಿರುದ್ಧ ಕಿಡಿಕಾರುತ್ತಿದ್ದಾರೆ.

ತಮ್ಮ ನೆಚ್ಚಿನ ನಾಯಕನಿಗೆ ಸಚಿವ ಸ್ಥಾನ ಸಿಗದ ಕುರಿತು ಕೆಲ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದು, ಕೆಎಸ್ ಈಶ್ವರಪ್ಪ ಅವರ ಬೆಂಬಲಿಗರ ರಾಯಣ್ಣ ಬ್ರಿಗೇಡ್ ಮತ್ತು  ಬಿ ಶ್ರೀರಾಮುಲು ಅವರ ಬೆಂಬಲಿಗರ ವಾಲ್ಮೀಕಿ ಸಮುದಾಯ ಖಾತೆ ಹಂಚಿಕೆ ಕುರಿತಂತೆ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತಂತೆ ರಾಯಣ್ಣ ಬ್ರಿಗೇಡ್ ಹೇಳಿಕೆ ಬಿಡುಗಡೆ ಮಾಡಿದ್ದು, ಈಶ್ವರಪ್ಪ ರಂತಹ ಹಿರಿಯ ನಾಯಕರಿಗದೆ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕಿತ್ತು ಎಂದು ಹೇಳಿದೆ. ಅಂತೆಯೇ ಇತ್ತ ಆರ್ ಅಶೋಕ್ ಅವರೂ ಕೂಡ ತಮಗೆ ಡಿಸಿಎಂ ಹುದ್ದೆ ಸಿಗದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿದ್ದು, ಅವರು ತಮ್ಮ ಸರ್ಕಾರಿ ಕಾರನ್ನು ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಇಂದು ನಡೆದ ಸಂಪುಟ ಸಭೆಗೂ ತಡವಾಗಿ ಆಗಮಿಸಿದ್ದಾರೆ ಎನ್ನಲಾಗಿದೆ.

ಕಾರು ವಾಪಸ್, ಸಚಿವ ಸ್ಥಾನಕ್ಕೆ ಸಿಟಿ ರವಿ ರಾಜಿನಾಮೆ
ಇನ್ನು ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಸಚಿವ ಸಿಟಿ ರವಿ ಅವರು ಡಿಸಿಎಂ ಹುದ್ದೆ ಸಿಗದ ಹಿನ್ನಲೆಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಸರ್ಕಾರಿ ಕಾರನ್ನು ಈಗಾಗಲೇ ವಾಪಸ್ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ತಮಗೆ ನೀಡಿದ್ದ ಪ್ರವಾಸೋದ್ಯಮ ಖಾತೆ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ರಾಜ್ಯಾಧ್ಯಕ್ಷ ಸ್ಥಾನ ಪಡೆಯುವಲ್ಲಿಯೂ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಮತ್ತೊಂದು ಮೂಲಗಳು ಪ್ರಕಾರ ಪಕ್ಷದಲ್ಲಿನ ಸದ್ಯದ ಕೆಲ ಬೆಳವಣಿಗೆ ಹಾಗೂ ಅಸಮಾಧಾನಿತರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com