ಖಾತೆ-ಕ್ಯಾತೆ,ಭಿನ್ನಮತ-ಕೊತ ಕೊತ: ಅಸಮಾಧಾನವಿದ್ದರೂ ಪಕ್ಷ ನಿಷ್ಠೆ ಬದಲಿಸದ 'ಕಮಲ' ನಾಯಕರು!

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಪುಟಕ್ಕೆ ಹೊಸ ಮುಖಗಳನ್ನು ಸೇರಿಸುವ ಮೂಲಕ ಹಿರಿಯರನ್ನು ಸೈಡ್ ಲೈನ್ ಗೆ ತಳ್ಳುವ ಮೂಲಕ 2ನೇ ಹಂತದ ನಾಯಕರನ್ನು ಬೆಳೆಸಲು ಬಿಜೆಪಿ ಹೈಕಮಾಂಡ್ ಹೆಜ್ಜೆ ಇಟ್ಟಿದೆ.
ಬಿಜೆಪಿ ನಾಯಕರ ಪಕ್ಷ ನಿಷ್ಠೆ
ಬಿಜೆಪಿ ನಾಯಕರ ಪಕ್ಷ ನಿಷ್ಠೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಪುಟಕ್ಕೆ ಹೊಸ ಮುಖಗಳನ್ನು ಸೇರಿಸುವ ಮೂಲಕ ಹಿರಿಯರನ್ನು ಸೈಡ್ ಲೈನ್ ಗೆ ತಳ್ಳುವ ಮೂಲಕ 2ನೇ ಹಂತದ ನಾಯಕರನ್ನು ಬೆಳೆಸಲು ಬಿಜೆಪಿ ಹೈಕಮಾಂಡ್ ಹೆಜ್ಜೆ ಇಟ್ಟಿದೆ.

ಆದರೆ ಹೈ ಕಮಾಂಡ್ ನಿರ್ದಾರದಿಂದ ಬಿಜೆಪಿಯ ಹಲವು ಹಿರಿಯ ರಾಜ್ಯಕರಿಗೆ ತೀವ್ರ ಮುಜುಗರ ಉಂಟಾಗಿದೆ,. ಮೂವರು ಡಿಸಿಎಂ ಗಳನ್ನು ನೇಮಕ ಮಾಡಿರುವುದು ಬೂತ್ ಮಟ್ಟದ ಕಾರ್ಯಕರ್ತರಿಂದ ಸಂಸದರವರೆಗೂ ತೀವ್ರ ಅಸಮಾಧಾನ ಮೂಡಿಸಿದೆ. ಆದರೆ ಯಾರೋಬ್ಬರು ಪಕ್ಷದ ಹೈ ಕಮಾಂಡ್ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿಲ್ಲ, ಹಾಗೂ ಪಕ್ಷ ನಿಷ್ಠೆ ಬದಲಿಸಿಲ್ಲ.

ಪಕ್ಷ ನಿಷ್ಠೆ ಎಂಬುದು ಬಹು ದೊಡ್ಡ ಶಕ್ತಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ, ಅಲ್ಲಿ ನಾಯಕರು ಸಿದ್ಧಾಂತ ಮತ್ತು ಪಕ್ಷದ ಮೇಲಿನ ನಿಷ್ಠೆಯ ಬೌಂಡರಿ ದಾಟಬಾರದು ಎಂಬ ಅರಿವು ಎಲ್ಲ ನಾಯಕರಿಗೂ ತಿಳಿದಿದೆ. ಕೆಲವು ನಾಯಕರು ಸೂಕ್ಷ್ಮ ಮತಿಯವರಾಗಿಲ್ಲ,  ಹೀಗಾಗಿ ಮೂವರು ಡಿಸಿಎಂ ಗಳು ಏಕೆ ಬೇಕು ಎಂದು ಪ್ರಶ್ನಿಸುತಿದ್ದಾರೆ. 

ಮೂವರು ಡಿಸಿಎಂ ನೇಮಕ ಮಾಡುವ ಮುಂಚೆ ಕೇಂದ್ರ ನಾಯಕರು ಚೆನ್ನಾಗಿ ಯೋಚಿಸಬೇಕಿತ್ತು.  ಒಂದು ವೇಳೆ ಇದು ಕೇಂದ್ರ ನಾಯಕರ ನಿರ್ಧಾರವೇ ಆಗಿದ್ದರೇ ಅದು ತಪ್ಪು ಎಂದು ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ಹೊರ ಹಾಕಿದ್ದಾರೆ.

ಶಾಸಕ ಅಶ್ವತ್ಥ ನಾರಾಯಣ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಹುದ್ದೆ ನೀಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಚುನಾವಣೆಯಲ್ಲಿ ಸೋತವರಿಗೆ ಡಿಸಿಎಂ ಹುದ್ದೆ ನೀಡುವುದು ಎಷ್ಚು ಸೂಕ್ತ, ಪಕ್ಷದಲ್ಲಿ ಹಲವು ಹಿರಿಯ ನಾಯಕರಿದ್ದಾರೆ, ನಾನು ಮೂರು ಬಾರಿ ಶಾಸಕನಾಗಿದ್ದೇನೆ, 6 ಮತ್ತು 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವವರು ಇದ್ದಾರೆ, ಅವರೆಲ್ಲರೂ ಸಂಪುಟ ಸೇರಲು ಅರ್ಹರಾಗಿದ್ದವರು ಎಂದು ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.

ನಿನ್ನೆ ಪಕ್ಷದ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಹಲವು ಮಂದಿಗ ಗೈರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com