ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಇದ್ದಂತೆ, ಬಿಜೆಪಿಗೆ ಅಶ್ವತ್ಥ ನಾರಾಯಣ: ಪಕ್ಷ ಸಂಘಟಿಸಲು 'ಶಾ' ತಂತ್ರ
ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಮತ್ತು ಡಾ.ಸಿಎನ್ ಅಶ್ವತ್ಥ ನಾರಾಯಣ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ನೇಮಕ ಮಾಡಿರುವ ವಿಷಯ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ....
Published: 28th August 2019 09:35 AM | Last Updated: 28th August 2019 09:39 AM | A+A A-

ಅಶ್ವತ್ಥ ನಾರಾಯಣ
ಬೆಂಗಳೂರು: ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಮತ್ತು ಡಾ.ಸಿಎನ್ ಅಶ್ವತ್ಥ ನಾರಾಯಣ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ನೇಮಕ ಮಾಡಿರುವ ವಿಷಯ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಬಹಳ ಕಾಲದಿಂದ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತಿತ್ತು.ಹಾಗಾಗಿ ಬಿಜೆಪಿ ಹೈ ಕಮಾಂಡ್ ತಮ್ಮ ತಂತ್ರಗಾರಿಕೆ ಬಳಸಿ ಪಕ್ಷ ಕಟ್ಟಲು ಈ ನಿರ್ಧಾರ ಕೈಗೊಂಡಿದೆ, ಇದೆಲ್ಲಾ ಪೂರ್ವ ನಿರ್ಧರಿತ ವಿಷಯವಾಗಿದೆ.ಬಿಜೆಪಿ ಹೈಕಮಾಂಡ್ ನಿರ್ದಾರದಿಂದಾಗಿ ಈಗಾಗಲೇ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ, ಆದರೆ ಅವರ ಕೂಗನ್ನು ಕೇಳುವವರು ಯಾರೂ ಇಲ್ಲ.
ಕಳೆದ ಆರು ವರ್ಷಗಳಲ್ಲಿ ಕರ್ನಾಟಕ ಬಿಜೆಪಿ ಘಟಕವು ಅಮಿತ್ ಷಾ ಅವರ ಸಾಮರ್ಥ್ಯವನ್ನು ಎಂದಿಗೂ ನೋಡಲಿಲ್ಲ. ಭವಿಷ್ಯದ ನಾಯಕರುಗಳನ್ನು ಬೆಳೆಸಲು ಮುಂದಾಗಿರುವ ಅಮಿತ್ ಶಾ ಸಂಪೂರ್ಣ ಹಿಡಿತ ಹೊಂದಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ತಿಳಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಇರುವಂತೆ ಬಿಜೆಪಿಯಲ್ಲಿ ಅಶ್ವತ್ಥ ನಾರಾಯಣ ಇದ್ದಾರೆ, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಅಶ್ವತ್ಥ ನಾರಾಯಣ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂಬೈ-ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸದೃಢವಾಗಿ ಮುನ್ನಡೆಸಲು ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಲಾಗಿದೆ, ಹೀಗಾಗಿ ಉಮೇಶ್ ಕತ್ತಿ ಮತ್ತು ಜಾರಕಿಹೊಳಿ ಅವರನ್ನು ಬದಿಗೆ ತಳ್ಳಿ ಸವದಿಗೆ ಮಣೆ ಹಾಕಲಾಗಿದೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರನ್ನು ಡಿಸಿಎಂ ಮಾಡಿದ್ದಾರೆ. ಆದರೆ ಇದು ಹಿರಿಯರಿಗೆ ಆಘಾತ ಉಂಟು ಮಾಡಿದೆ, ಆದರೆ ಅಮಿತ್ ಶಾ ಆಕ್ರಮಣಕಾರಿ ನಾಯಕರುಗಳನ್ನು ಬೆಳೆಸಲು ಮುಂಚೂಣಿಗೆ ತರಲು ಮುಂದಾಗಿದ್ದಾರೆ. ಆಧರೆ ಇದು ಬಿಜೆಪಿಯನ್ನು ಬಲಹೀನಗೊಳಿಸಲಿದೆ ಎಂದು ಮೂರ್ತಿ ಅವರ ಅಭಿಪ್ರಾಯ.