ಎಲ್ಲಾ ನಾಯಕರ ನಂಬಿಕೆ ಗಳಿಸುತ್ತೇನೆ- ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ

ತಮ್ಮದೇ  ಆದ ಕನಸುಗಳನ್ನು ಹೊಂದಿದ್ದು, ಅವುಗಳನ್ನು ನನಸು ಮಾಡುವುದಾಗಿ ಹೇಳಿದ್ದಾರೆ. ಮೊದಲಿಗೆ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಡಾ. ಅಶ್ವಥ್ ನಾರಾಯಣ
ಡಾ. ಅಶ್ವಥ್ ನಾರಾಯಣ

ಬೆಂಗಳೂರು: ಮಲ್ಲೇಶ್ವರಂ ಕ್ಷೇತ್ರದಿಂದ ಮೂರು ಬಾರಿಗೆ ಗೆದ್ದಿರುವ 51 ವರ್ಷದ ಡಾ. ಸಿ. ಎನ್ .ಅಶ್ವತ್ ನಾರಾಯಣ್ ಪ್ರಬಲ ಒಕ್ಕಲಿಗ ಸಮುದಾಯದ ಮುಖಂಡರಾಗಿದ್ದಾರೆ. 

ಈ ಹಿಂದೆ ಸಚಿವ ಖಾತೆ ಪಡೆಯದಿದ್ದರೂ ಯಡಿಯೂರಪ್ಪ ಸಂಪುಟದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ. ಈ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ತಮ್ಮದೇ  ಆದ ಕನಸುಗಳನ್ನು ಹೊಂದಿದ್ದು, ಅವುಗಳನ್ನು ನನಸು ಮಾಡುವುದಾಗಿ ಹೇಳಿದ್ದಾರೆ. ಮೊದಲಿಗೆ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಬೆಂಗಳೂರು ಅಥವಾ ಕಾರ್ಪೋರೇಷನ್ ವಿಂಗಡಣೆ ನಮ್ಮ ಪಕ್ಷ ವಿರುದ್ಧವಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಆಡಳಿತ ನೀಡುವುದಾಗಿ ಅವರು ಹೇಳಿದ್ದಾರೆ.

ಬೆಂಗಳೂರಿನಿಂದ ನಾಲ್ವರು ಸಚಿವರಾಗಿದ್ದಾರೆ. ಜಿಲ್ಲಾ ಉಸ್ತುವಾರಿಯನ್ನು ಯಾರಿಗೆ ಕೊಡುತ್ತಾರೆ?  ನಾಲ್ಕು ಸಚಿವರು ತಿಂಗಳಿಗೊಮ್ಮೆ ಕೂತು ಚರ್ಚಿಸಿ ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಬೆಂಗಳೂರಿನಲ್ಲಿ ಟ್ರಾಫಿಕ್  ಪ್ರಮುಖ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಟೆಕ್ಕಿಗಳನ್ನು ಭೇಟಿ ಮಾಡಲಾಗುವುದು,ಈ ಸಮಸ್ಯೆ ನಿವಾರಣೆಯತ್ತ ಗಮನ ಹರಿಸುವುದಾಗಿ ಹೇಳಿದರು. 

ಈ ವರ್ಷ ಪಕ್ಷವನ್ನು ಸಂಘಟಿಸುವ ಮೂಲಕ ಮುಂದಿನ ಸಲ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು, ರಾಜಕಾಲುವೆಗಳು, ಘನ ತ್ಯಾಜ್ಯ ನಿರ್ವಹಣೆ, ಎಲ್ಲಾ ಬಡವರಿಗೂ ಮನೆ,  ರಸ್ತೆ ಮೇಲಿನ ಗುಂಡಿಗಳನ್ನು ಮುಚ್ಚಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com