ಮೈತ್ರಿ ಬಗ್ಗೆ ಈಗಲೇ ಭವಿಷ್ಯ ಹೇಳಲಾಗದು, ಡಿ. 9 ರ ನಂತರ ಸಿಹಿ ಸುದ್ದಿ- ಖರ್ಗೆ 

ರಾಜ್ಯದಲ್ಲಿ ಮೈತ್ರಿ ಬಗ್ಗೆ ಈಗಲೇ ಭವಿಷ್ಯ ಹೇಳಲಾಗದು, ಆದರೂ ಡಿ 9 ರಂದು  ಸಿಹಿಸುದ್ದಿ ಕೊಡುತ್ತೇವೆ ಎಂದು ಮಾಜಿ ಸಂಸದ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ  ಖರ್ಗೆ ಸೂಚ್ಯವಾಗಿ ಹೇಳಿದ್ದಾರೆ
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಬಗ್ಗೆ ಈಗಲೇ ಭವಿಷ್ಯ ಹೇಳಲಾಗದು, ಆದರೂ ಡಿ 9 ರಂದು  ಸಿಹಿಸುದ್ದಿ ಕೊಡುತ್ತೇವೆ ಎಂದು ಮಾಜಿ ಸಂಸದ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ  ಖರ್ಗೆ ಸೂಚ್ಯವಾಗಿ ಹೇಳಿದ್ದಾರೆ

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹದಿನೈದು ಸ್ಥಾನಗಳನ್ನು ಗೆಲ್ಲಲೇಬೇಕಿದೆ. ಫಲಿತಾಂಶದ ಬಳಿಕ  ಭವಿಷ್ಯದ ಬಗ್ಗೆ ಚಿಂತಿಸಲಾಗುವುದು ಎಂದು ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದರು.

ಶಿವಸೇನಾ,‌ ಎನ್‌ಸಿಪಿ, ಕಾಂಗ್ರೆಸ್ ಸೇರಿ ಮಹಾರಾಷ್ಟ್ರದಲ್ಲಿ ಮೈತ್ರಿ  ಸರ್ಕಾರ ರಚನೆಯಾಗಿದೆ. ನಿಜವಾಗಲೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ  ಮಹಾರಾಷ್ಟ್ರದಲ್ಲಿ ಮೈತ್ರಿಗೆ ಮನಸಿರಲಿಲ್ಲ. ಆದರೆ ಬಿಜೆಪಿಯನ್ನು ದೂರಿವಿಡಲು, ಫ್ಯಾಸಿಸ್ಟ್ ಧೋರಣೆಯನ್ನು ಮಟ್ಟಹಾಕಲು, ಸಂವಿಧಾನ ಉಳಿವಿಗಾಗಿ ಶಾಸಕರ,‌ ಎಡಪಕ್ಷಗಳ  ಒತ್ತಡ‌ದ‌ ಮೇರೆಗೆ ಪ್ರಜಾಪ್ರಭುತ್ವ ಸಾಮಾಜಿಕ ನ್ಯಾಯಕ್ಕಾಗಿ ಮಹಾರಾಷ್ಟ್ರದಲ್ಲಿ ಮೈತ್ರಿ  ಸರ್ಕಾರ‌ರಚನೆಯಾಗಿದೆ ಎಂದರು.

 ಸಾಮಾಜಿಕ ನ್ಯಾಯಕ್ಕಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಯಾರೇ  ಬಂದರೂ ಸ್ವಾಗತ. ಮುಂದಿನ ಭವಿಷ್ಯದ ಬಗ್ಗೆ ಈಗಲೇ ಏನು ಹೇಳಲಾಗದು ಎಂದು  ನುಡಿದರು.

ಅಲ್ಲಿ ರಾತ್ರಿ‌ 4.30ಕ್ಕೆ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳಿಸಿ  7.30 ಒಳಗೆ ತರಾತುರಿಯ ಸರ್ಕಾರ‌ ರಚನೆ ಎಂದರೆ ಯಾವ ರೀತಿ ಇದು. ಈ‌ ಎಲ್ಲಾ ಕೆಲಸಗಳು  ನಡೆಯಲು ಕನಿಷ್ಠ 12 ತಾಸು ಬೇಕು. ಆದರೆ ಕೇವಲ 3 ತಾಸು ಒಳಗೆ ಅದು ರಾತ್ರೋರಾತ್ರಿ ಸರ್ಕಾರ  ರಚನೆ ಎಂದರೆ‌ ಏನರ್ಥ ? ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com