ಉಪಚುನಾವಣೆಯಲ್ಲಿ ಮನಿ v/s ಮನಿ: ಮತದಾರ ಪ್ರಭುವಿಗೆ ಹಣ-ಉಡುಗೊರೆಯ ಸುರಿಮಳೆ! 

ಉಪ ಚುನಾವಣೆ ಮತದಾನಕ್ಕೆ ಇನ್ನೂ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯಿವೆ,  ಹೀಗಾಗಿ ಚುನಾವಣಾ ಅಖಾಡ ರಂಗೇರುತ್ತಿದೆ, ಮೂಲಗಳ ಪ್ರಕಾರ ಪ್ರತಿ ಅಭ್ಯರ್ಥಿ ಉಪ ಚುನಾವಣೆಗಾಗಿ ತಲಾ 55 ಕೋಟಿ ರು ಹಣ ಖರ್ಚು ಮಾಡುತ್ತಿದ್ದಾನೆ ಎಂಬುದಾಗಿತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉಪ ಚುನಾವಣೆ ಮತದಾನಕ್ಕೆ ಇನ್ನೂ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯಿವೆ,  ಹೀಗಾಗಿ ಚುನಾವಣಾ ಅಖಾಡ ರಂಗೇರುತ್ತಿದೆ, ಮೂಲಗಳ ಪ್ರಕಾರ ಪ್ರತಿ ಅಭ್ಯರ್ಥಿ ಉಪ ಚುನಾವಣೆಗಾಗಿ ತಲಾ 55 ಕೋಟಿ ರು ಹಣ ಖರ್ಚು ಮಾಡುತ್ತಿದ್ದಾನೆ ಎಂಬುದಾಗಿತಿಳಿದು ಬಂದಿದೆ.

ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳ ಮುಖಂಡರು ನಾ ಮುಂದು, ತಾ ಮುಂದು ಎಂದು ಹಣ ಮತ್ತು ಗಿಫ್ಟ್ ನೀಡುತ್ತಿದ್ದಾರೆ, ಹೊಸಕೋಟೆಯಂತಹ ಹೈ ವೋಲ್ಟೇಜ್ ಕಣದಲ್ಲಿ  ಪ್ರತಿ ಅಭ್ಯರ್ಥಿ 50ರಿಂದ 55 ಕೋಟಿ ರು ಹಣ ವ್ಯಯಿಸುತ್ತಿದ್ದಾರೆ. ಚುನಾವಣೆ ಮುಗಿಯುವ ವೇಳೆಗೆ ಇದು 70 ಕೋಟಿ ತಲುಪುಬಹುದು ಎಂದು ಅಂದಾಜಿಸಲಾಗಿದೆ.

ಶೇ40ರಿಂದ 50 ರಷ್ಟು ಮತಗಳು ಅಭ್ಯರ್ಥಿಗಳು ನೀಡುವ ಹಣದ ಮೇಲೆ ಚಲಾವಣೆಯಾಗುತ್ತವೆ. ಕೇವಲ ಹಣ ಮಾತ್ರವಲ್ಲ, ಸಾರಾಯಿ, ಹಾಗೂ ಉಡುಗೊರೆಗಳು ಮತದಾರನ ಮತ ಯಾರಿಗೆ ಎಂಬದನ್ನು ನಿರ್ಧರಿಸುತ್ತವೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿ್ದಾರೆ.

ಮೈಸೂರಿನಲ್ಲಿ 30 ಸಾವಿರ ಸೀರೆಗಳು ಸೇರಿದಂತೆ 94.69 ಲಕ್ಷ ಮೌಲ್ಯದ ಸೀರೆ, ಕುಕ್ಕರ್,ಮಿಕ್ಸಿ ಹಾಗೂ ಗ್ಯಾಸ್ ಸ್ಟವ್ ಸೀಜ್ ಮಾಡಲಾಗಿದೆ. ಈ ಬಾರಿ ಚಿನ್ನದ ಉಂಗುರ, ಬೆಳ್ಳಿ ಮತ್ತು ಚಿನ್ನದ ನಾಣ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಂಚುತ್ತಿಲ್ಲ.

ಹೊಸಕೋಟೆ ಚುನಾವಣಾ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ತಮ್ಮ  ಎದುರಾಳಿ ಎಂಟಿಬಿ ನಾಗರಾಜ್ ಅವರಿಗೆ ನಿದ್ದೆಗೆಡಿಸುತ್ತಿದ್ದಾರೆ.  ಎಂಟಿಬಿ ನಾಗರಾಜ್  ಪ್ರತಿ ಕುಟುಂಬಕ್ಕೆ 4 ಗ್ರಾಂ ತೂಕದ ಚಿನ್ನದ ಉಂಗುರ ನೀಡಿದ್ದಾರೆ ಎಂದು ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ.  ಹೊಸಕೋಟೆಯಲ್ಲಿ ಹಣವೇ ಹೆಚ್ಚಿನ ಕೆಲಸ ಮಾಡುತ್ತಿದೆ,  ನಾವು ಬಿಜೆಪಿಯವರ ಗಿಫ್ಟ್ ಹಾಗೂ ಶರತ್ ಬಚ್ಚೇಗೌಡ ಅವರು ಪ್ರತಿ ಕುಟುಂಬಕ್ಕೆ 2 ಸಾವಿರ ರು ಹಣ  ನೀಡುತ್ತಿದ್ದಾರೆ ಎಂದು ಹೊಸಕೋಟೆ ನಿವಾಸಿ ಸಂದೇಶ್ ಗೌಡ ಹೇಳಿದ್ದಾರೆ.

ಕೆ.ಆರ್ ಪುರಂ ನಲ್ಲಿ ಅತಿ ಹೆಚ್ಚು ಅಂದರೆ 4.87 ಲಕ್ಷ ಮತದಾರರಿದ್ದಾರೆ,  ಇಲ್ಲಿ ಪ್ರತಿ ಕುಟುಂಬಕ್ಕೆ 5 ಸಾವಿರರು ಹಣ ನೀಡಲಾಗುತ್ತಿದೆ, ಜೊತೆಗೆ ಪೆಟ್ರೋಲ್ ಪಂಪ್ ನಲ್ಲಿ ಡಿಸೇಲ್ ಹಾಕಿಸಿಕೊಳ್ಳಲು 3-4 ಸಾವಿರ ರು. ಕೂಪನ್ ನೀಡಲಾಗುತ್ತಿದೆ,  ಈ ಕೂಪನ್ ಅನ್ನು ಬಟ್ಟೆ ಖರೀದಿಗೆ, ಮದ್ಯದ ಅಂಗಡಿ ಮತ್ತು ಆಭರಣ ಮಳಿಗೆಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ಇನ್ನೂ ಮಹಾಲಕ್ಷ್ಮಿ ಲೇಔಟ್ ನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪ್ರತಿ  ಬೂತ್ ಪಕ್ಷದ ಕಾರ್ಯಕರ್ತರಿಗ 10 ಸಾವಿರ ರೂ ಹಣ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಾಜಿ ನಗರ ಅಭ್ಯರ್ಥಿಯ ಚುನಾವಣೆ ಖರ್ಚಿಗಾಗಿ ಕತಾರ್ ನಿಂದ ಹಣ ಹರಿದು ಬರುತ್ತಿದೆ ಎಂದು ಹೇಳಲಾಗುತ್ತಿದೆ, ಪ್ರತಿಷ್ಟಿತ ಕ್ಷೇತ್ರವಾಗಿರುವ ವಿಜಯನಗರದಲ್ಲಿ ಆನಂದ್ ಸಿಂಗ್ ಮತ್ತು  ವೆಂಕಟ್ ರಾವ್ ಗೋರ್ಪಡೆ ನಡವೆ ನೇರ ಹಣಾಹಣಿ ಏರ್ಪಟ್ಟಿದೆ. ಅನರ್ಹ ಶಾಸಕ ಆನಂದ್ ಸಿಂಗ್ ತಮ್ಮ ಪುತ್ರನ ಮದುವೆಗೆ ಬಂದವರಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ನೀಡುತ್ತಿದ್ದಾರೆ.ಮೈಸೂರಿನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿಲ್ಲ 2 ಕೋಟಿ ರು ಹಣ ಸೀಜ್ ಮಾಡಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com