ಹಣ ಹಂಚಿಕೆ: ಮನೆ ಮನೆಗೆ ಚೀಟಿ ತಲುಪಿಸುತ್ತಿರುವ ಬಿಜೆಪಿ ಕಾರ್ಯಕರ್ತರು, ವಿಡಿಯೋ ವೈರಲ್
ಡಿಸೆಂಬರ್ 5ರಂದು ನಡೆಯುವ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದ್ದು, ಈಗಾಗಲೇ ತೆರೆಮರೆಯ ಕಸರತ್ತು ಆರಂಭಿಸಿರುವ ಬಿಜೆಪಿ, ಹಣ ಹಂಚಿಕೆಗೆ ಮುಂಚಿತವಾಗಿ ಪ್ರತಿ ಮನೆ ಮನೆಗೆ ತೆರಳಿ ಚೀಟಿ ತಲುಪಿಸುತ್ತಿದೆ.
Published: 02nd December 2019 03:28 PM | Last Updated: 02nd December 2019 03:28 PM | A+A A-

ಆನಂದ್ ಸಿಂಗ್
ಹೊಸಪೇಟೆ: ಡಿಸೆಂಬರ್ 5ರಂದು ನಡೆಯುವ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದ್ದು, ಈಗಾಗಲೇ ತೆರೆಮರೆಯ ಕಸರತ್ತು ಆರಂಭಿಸಿರುವ ಬಿಜೆಪಿ, ಹಣ ಹಂಚಿಕೆಗೆ ಮುಂಚಿತವಾಗಿ ಪ್ರತಿ ಮನೆ ಮನೆಗೆ ತೆರಳಿ ಚೀಟಿ ತಲುಪಿಸುತ್ತಿದೆ.
ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಬಾವಚಿತ್ರ ಹೊಂದಿರುವ ಮತ ಚೀಟಿ ಹಂಚುತ್ತಿರುವ ಬಿಜೆಪಿ ಕಾರ್ಯಕರ್ತರು, ಹಣ ಹಂಚಲು ಬಂದಾಗ ಈ ಚೀಟಿ ತೋರಿಸಿದರೆ ಹಣ ನೀಡುವುದಾಗಿ ಮತದಾರರಿಗೆ ಭರವಸೆ ನೀಡುತ್ತಿದ್ದಾರೆ.
ಯಾಕೆ ಈ ಚೀಟಿ ಹಂಚುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಕಾರ್ಯಕರ್ತ, ತಾನು ಆಂನದ್ ಸಿಂಗ್ ಕಡೆಯ ವ್ಯಕ್ತಿ ಎಂದು ಹೇಳಿದ್ದಾರೆ. ಕಾರ್ಯಕರ್ತನ ಈ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.
ವಿಜಯನಗರ ಉಪ ಚುನಾವಣೆಯಲ್ಲಿ ನಾಳೆ ನಾಡಿದ್ದು ಹಣ ಹೊಳೆ ಹರಿಯುವ ಎಲ್ಲಾ ಸಾಧ್ಯತೆಗಳಿದ್ದು, ಚುನಾವಣಾ ಅಧಿಕಾರಿಗಳೇ ಎಲ್ಲಿದ್ದೀರ? ಎಂದು ಜನ ಕೇಳುತ್ತಿದ್ದಾರೆ.