ಅನರ್ಹ ಶಾಸಕ  ಸುಧಾಕರ್ ರಾಜಕೀಯಕ್ಕೆ ನಾಲಾಯಕ್:ಸಿದ್ದರಾಮಯ್ಯ

ರಾಜಕೀಯಕ್ಕೆ ಬೇಕಾದ ನಿಯತ್ತು, ನಿಷ್ಠೆ ಅನರ್ಹ ಶಾಸಕ ಸುಧಾಕರ್‌ಗೆ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ

ಚಿಕ್ಕಬಳ್ಳಾಪುರ: ರಾಜಕೀಯಕ್ಕೆ ಬೇಕಾದ ನಿಯತ್ತು, ನಿಷ್ಠೆ ಅನರ್ಹ ಶಾಸಕ ಸುಧಾಕರ್‌ಗೆ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಚಿಕ್ಕಬಳ್ಳಾಪುರದ ಅಭ್ಯರ್ಥಿ ಅಕ್ಕಿ ಅಂಜನಪ್ಪ ಪರ ರೋಡ್ ಷೋ ಮೂಲಕ ಮತಯಾಚಿಸಿ ಮಾತನಾಡಿದ ಅವರು,ಸುಧಾಕರ್‌ ಯಾರಿಗೆ ಯಾವಾಗಬೇಕಾದರೂ ಟೋಪಿ, ಬೆನ್ನಿಗೆ ಚೂರಿ ಹಾಕಿಬಿಡುತ್ತಾನೆ. ರಮೇಶ್ ಕುಮಾರ್ ಕಾನೂನು ಪ್ರಕಾರವೇ ಅವನನ್ನು ಅನರ್ಹ ಮತ್ತು ನಾಲಾಯಕ್ ಮಾಡಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಸಹ ಇವರನ್ನು ನಾಲಾಯಕ್ ಎಂದು ತೀರ್ಮಾನ ಮಾಡಿದೆ. ಇಂತಹ ಅನರ್ಹ ನಾಲಾಯಕರನ್ನು ಜನರು ಶಾಶ್ವತವಾಗಿ ನಾಲಾಯಕ್ ಮಾಡಬೇಕು ಎಂದರು. ಜತೆಗೆನಾಲಾಯಕ್ ನಾಲಾಯಕ್ ಎಂದು ಸುಧಾಕರ್‌ನನ್ನು ಕೂಗಿ ಕರೆದು ಮತದಾರರನ್ನು ಹುರಿದುಂಬಿಸಿದರು.

ಸುಧಾಕರ್ ನಂತಹವರು ರಾಜಕಾರಣದಲ್ಲಿ ಇರಬಾರದು.ಸುಧಾಕರ್ ತಂದೆ ಕೇಶವರೆಡ್ಡಿಯನ್ನು ತಾವು ಜೆಡಿಎಸ್‌ನಲ್ಲಿದ್ದಾಗಲೂ‌ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಜಿಲ್ಲಾ ಪಂಚಾಯತ್‌ ಅಧ್ಯಕ್ಷರನ್ನಾಗಿ ಮಾಡಿದ್ದೆ. ನಮ್ಪಪ್ಪನನ್ನು ಕೊನೆಗಾಲದಲ್ಲಿ ಅವರನ್ನು ಹೇಗಾದರೂ ಮಾಡಿ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಿ ಸರ್ ಎಂದು ಸುಧಾಕರ್ ಗೋಗರಿದಿದ್ದ‌. ಸುಧಾಕರ್ ಅಳುತ್ತಾನೆ ಎಂದು ಎಲ್ಲರನ್ನೂ ಒಪ್ಪಿಸಿದೆ. ವೀರಪ್ಪ ಮೊಯ್ಲಿ ಹಾಗೂ ಕೆ ಎಚ್ ಮುನಿಯಪ್ಪ ಅವರನ್ನೂ ಒಪ್ಪಿಸಿದೆ. ಈ ಬಗ್ಗೆ ಸುಬ್ಬಾರೆಡ್ಡಿಗೆ ಎಲ್ಲವೂ ಗೊತ್ತಿದೆ ಎಂದು ಬಾರಪ್ಪಾ ಸತ್ಯ ಹೇಳಪ್ಪ ಎಂದು ವೇದಿಕೆಯಲ್ಲಿದ್ದ ಸುಬ್ಬಾರೆಡ್ಡಿಯನ್ನು ಕರೆದರು.

ತನ್ನನ್ನು ರಾಜಕೀಯ ಕಾರ್ಯದರ್ಶಿ ಮಾಡಿ ಎಂದು ಸುಧಾಕರ್ ಹಠ ಹಿಡಿದಿದ್ದ. ಪುಣ್ಯಕ್ಕೆ ಆ ಕೆಲಸ ಮಾಡಲಿಲ್ಲ. ರಾಜಕೀಯದಲ್ಲಿರಬೇಕಾದ ನಿಷ್ಠೆ,‌ನಿಯತ್ತು ಅವನಿಗಿಲ್ಲ. ಜೆಡಿಎಸ್‌‌ನಾಯಕರಿಗೆ ಮನವಿ ಮಾಡಿದ ಸಿದ್ದರಾಮಯ್ಯ, ಸುಧಾಕರ್‌ನನ್ನು ಸೋಲಿಸಬೇಕು. ಜೆಡಿಎಸ್ ನವರು ಸಹ ಕಾಂಗ್ರೆಸ್ ಗೆ ಮತ ಹಾಕಬೇಕು. ಹದಿನೈದು ಕ್ಷೇತ್ರಗಳ ಪೈಕಿ ಇದು ಕೊನೆ ಕ್ಷೇತ್ರ. ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷಾಂತರಿಗಳ ವಿರುದ್ದ ಜನರು ಇದ್ದಾರೆ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.
ಮೈತ್ರಿ ಸರ್ಕಾರ ಕೆಡವಿ ಅಧಿಕ್ಕಾರಕ್ಕೇರಿರುವ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಈ ನಾಲ್ಕು ತಿಂಗಳಲ್ಲಿ ಏನು ಮಾಡಿದ್ದಾರೆ. ಆಪರೇಷನ್ ಕಮಲ‌ ಮಾಡಿದ್ದೇ ಯಡಿಯೂರಪ್ಪನ ಸಾಧನೆ. ಹಿಂಬಾಗಿಲ ಮೂಲಕ ಬಂದ ಯಡಿಯೂರಪ್ಪ ಕೋಟಿಗಟ್ಟಲೇ ಲೂಟಿ ಹೊಡೆದಿದ್ದಾರೆ. ಕೇಂದ್ರ ಸರ್ಕಾರ ಸಹ ಈ ದೇಶವನ್ನ ಹಾಳು ಮಾಡುತ್ತಿದೆ. ಎಷ್ಟು ಬೇಗ ಈ ರಾಜ್ಯ ಹಾಗೂ ದೇಶದಿಂದ ಬಿಜೆಪಿ ತೊಲಗುತ್ತದೆಯೋ ಅಷ್ಟು ಜನರಿಗೆ ಅನುಕೂಲವಾಗುತ್ತದೆ‌ ಎಂದರು.

ಡೀಲ್ ರಾಜನಿಗೆ ಟಿಕೆಟ್ ಕೊಟ್ಟು ನಾನು ತಪ್ಪು ಮಾಡಿ ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ‌. ಕಳೆದ ಬಾರಿ ಆಂಜನಪ್ಪ ನಿಗೆ ಟಿಕೆಟ್ ತಪ್ಪಿಸಿ ನಲಸುಧಾಕರ್ ಗೆ ಕೊಟ್ಟೆ. ಮೋಸಗಾರ ಸುಧಾಕರ್ ಗೆ ಟಿಕೆಟ್ ಕೊಡದೆ ಹೋಗಿದ್ದರೆ ಅಂಜಿನಪ್ಪ ಶಾಸಕನಾಗುತ್ತಿದ್ದ.ಸುಧಾಕರ್ ಒಂದು ರೀತಿಯ ನಯ ವಂಚಕ. ದೊಡ್ಡದೊಡ್ಡ ಮಾತುಗಳು, ಪ್ರಾಮಾಣಿಕತೆ ಬಗ್ಗೆ ಮಾತಾಡುತ್ತಾನೆ. ಆಡುವುದು ದೊಡ್ಡ ಮಾತು ಮಾಡುವುದು ಮಾತ್ರ‌ಸಣ್ಣ ಕೆಲಸ. ಹದಿನೇಳು ಮಂದಿ ಪಕ್ಷಾಂತರಿಗಳಿಗೆ ಸೂತ್ರಧಾರಿ ಈ ಮೀರ್ ಸಾಧಿಕ್ ಸುಧಾಕರ್ ಎಂದು ವಾಗ್ದಾಳಿ ನಡೆಸಿದರು.

ಮೈತ್ರಿ ಸರ್ಕಾರದಲ್ಲಿ ನನ್ನ ಬಳಿ ಬಂದು ಅಸಮಾಧಾನ ಎನ್ನುತ್ತಿದ್ದ. ಅವರು ಹೋಗ್ತಾರೆ ಇವರು ಹೋಗ್ತಾರೆ ಅಂತ ಕೀ ಕೊಡುತ್ತಿದ್ದ. ಸುಧಾಕರ್ ಒಬ್ಬ ಡೋಂಘಿ. ಎರಡು ಗಂಟೆಗಳ‌ಕಾಲ ಚರ್ಚೆ ಮಾಡಿದ ಮೇಲೆ ರಾಜೀನಾಮೆ ವಾಪಾಸ್ ತೆಗೆದುಕೊಳ್ಳುವುದಾಗಿ ಹೇಳಿದ್ದ. ಇದಕ್ಕೆ ಅವನ ಚಿಕ್ಕಪ್ಪನ ಮಗ ಚೇತನ್ ಸಾಕ್ಷಿ ಎಂದರು.

ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು‌ ಪ್ರಮಾಣ ಮಾಡಿ‌ ಮರು ದಿನ‌ ಬೆಳಿಗ್ಗೆ ಯೇ ವಿಮಾನ‌ ಹತ್ತಿ ಮುಂಬೈಗೆ ಹೋದ‌. ಎಲ್ಲವನ್ನು ನೀಡಿದನಮಗೆ ಅವನು ಅಷ್ಟೊಂದು ಸುಳ್ಳು ಹೇಳಿದ ಮೇಲೆ ಬಿಜೆಪಿಗೆ ಅವನು ಇನ್ಮೆಷ್ಟು ಸುಳ್ಳು ಹೇಳಿರಬೇಡ. ಅವನಂತಹ ವ್ಯಕ್ತಿ ರಾಜಕಾರಣದಲ್ಲಿ ಇರಬಾರದು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಚಿಕ್ಕಬಳ್ಳಾಪುರ ಅಭಿವೃದ್ಧಿ ಆಗಿದ್ದು ನನ್ನಿಂದ. ನಾನು ಕೊಟ್ಟ ಅನುದಾನ ತಂದು ತಾನು ಮಾಡಿದ್ದು ಎಂದು ಲೂಟಿ ಹೊಡೆದು ನಾಟಕವಾಡಿದ‌. ಎಂಟಿಬಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಮೋಸಮಾಡಿ ಹೋದ. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಕೊಟ್ಟಿದ್ದು ಕಾಂಗ್ರೆಸ್. ಹಿಂದಿನ ಸರ್ಕಾರದಲ್ಲಿ ಎಲ್ಲಾ ಜಿಲ್ಲೆಗಳಿಗೂ ಮೆಡಿಕಲ್ ಕಾಲೇಜು ಕೊಡಬೇಕು ಎಂದು ತೀರ್ಮಾನಿಸಲಾಗಿತ್ತು. ಈಗ ಯಡಿಯೂರಪ್ಪ ಅವರನ್ನು ಆಹ್ವಾನಿಸಿ ಗುದ್ದಲಿಪೂಜೆ ಮಾಡಿಸಿ, ಯಡಿಯೂರಪ್ಪ ಮೆಡಿಕಲ್ ಕಾಲೇಜು ಕೊಟ್ಟರು ಎನ್ನುತ್ತಾನೆ‌. ಈ ನಯವಂಚಕ. ಈಗ ಕ್ಷೇತ್ರದ ಜನರಿಗೆ ಟೋಪಿ ಹಾಕುತ್ತಿದ್ದಾನೆ ಎಂದು ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com