ಉಪಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್-ಜೆಡಿಎಸ್ ಖೇಲ್ ಖತಂ ನಾಟಕ್ ಬಂದ್ -ಸಿ.ಟಿ.ರವಿ 

ಕಾಂಗ್ರೆಸ್​​​​-ಜೆಡಿಎಸ್​ ಪಕ್ಷದ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ.ಡಿ.9 ರಂದು ಅವರ ಖೇಲ್​ ಖತಂ,ನಾಟಕ ಬಂದ್​ ಆಗಲಿದೆ.ಅರಮನೆಯಲ್ಲಿ ಇದ್ದಂತೆ,ಮಹಾರಾಣಿ ಜೊತೆ ಇದ್ದಂತೆ, ದರ್ಬಾರ್ ಮಾಡಿದಂತೆ ಜೆಡಿಎಸ್-ಕಾಂಗ್ರೆಸ್ ಕನಸು ಕಾಣುತ್ತಿವೆ ಎಂದು ಸಚಿವ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.
ಸಿಟಿ ರವಿ
ಸಿಟಿ ರವಿ

ಕಾಂಗ್ರೆಸ್ ಆಜಾ ಆಜಾ ಅಂತಿದೆ,ಗೌಡರು ಕಭಿ ನಹಿಂ ಅಂತಿದಾರೆ: ಮರು ಮೈತ್ರಿಗೆ ಅಶೋಕ್ ವ್ಯಂಗ್ಯ!

ಮೈಸೂರು: )ಕಾಂಗ್ರೆಸ್​​​​-ಜೆಡಿಎಸ್​ ಪಕ್ಷದ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ.ಡಿ.9 ರಂದು ಅವರ ಖೇಲ್​ ಖತಂ,ನಾಟಕ ಬಂದ್​ ಆಗಲಿದೆ.ಅರಮನೆಯಲ್ಲಿ ಇದ್ದಂತೆ,ಮಹಾರಾಣಿ ಜೊತೆ ಇದ್ದಂತೆ, ದರ್ಬಾರ್ ಮಾಡಿದಂತೆ ಜೆಡಿಎಸ್-ಕಾಂಗ್ರೆಸ್ ಕನಸು ಕಾಣುತ್ತಿವೆ ಎಂದು ಸಚಿವ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು,ಜೆಡಿಎಸ್ -ಕಾಂಗ್ರೆಸ್ ಒಂದಾಗುವುದೆಂದರೆ ಅದು ರಾಜಕೀಯ ವ್ಯಭಿಚಾರ.ಇಂತಹ ರಾಜಕೀಯ ವ್ಯಭಿಚಾರಕ್ಕೆ ಜನ ಅವಕಾಶ ನೀಡಲ್ಲ.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ, ನಿಷೇಧಾಜ್ಞೆ ಬರುತ್ತೆ ಅವರು ಬರಬೇಕಾ? ಕೋಣ -ಎತ್ತು ಕಟ್ಟಿ ಬೇಸಾಯ ಮಾಡೋಕೆ ಆಗುತ್ತಾ? ಹಾಗೇ ಹುಣಸೂರಿನಲ್ಲಿ ಬಿಜೆಪಿ ಸಂಸದನ ಜೊತೆ ಕಾಂಗ್ರೆಸ್ ಶಾಸಕ ಇದ್ದರೆ ಅಭಿವೃದ್ಧಿ ಆಗಲ್ಲ.ಪ್ರತಾಪ್ ಸಿಂಹ-ಎಚ್.ವಿಶ್ವನಾಥ್ ಜೋಡೆತ್ತು. ಇವರಿಬ್ಬರೂ ಜೊತೆಯಾಗಬೇಕು ಎಂದು ಸಿ.ಟಿ.ರವಿ ಅಭಿಪ್ರಾಯಪಟ್ಟರು.

ಹಣಬಲದಿಂದ ಬಿಜೆಪಿ ಚುನಾವಣೆ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಯಿಸಿ ಸಿದ್ದರಾಮಯ್ಯನವರ ಹುಂಡಿ ಎಲ್ಲೆಲ್ಲಿದೆ ಎನ್ನುವುದು ನನಗೆ ಗೊತ್ತು, ಒಂದೂವರೆ ವರ್ಷದಲ್ಲಿ ಎಷ್ಟು ಲೂಟಿ ಹೊಡೆದಿದ್ದಾರೆ ಎನ್ನುವುದು ಗೊತ್ತು, ಕಾರ್ ಟೈರ್ ಗಳಲ್ಲಿ ಹಣ ಸಾಗಿಸಿದ ಖ್ಯಾತಿ ಆ ಪಕ್ಷದ್ದು ಎಂದು ಕುಟುಕಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು ಹೊರತು ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿಗಳಲ್ಲ ಎಂದ ಸಚಿವರು ಅಭಿವೃದ್ಧಿ ಕಡೆಗಣಿಸೋ ಸರ್ಕಾರ ಬೇಕೆ? ರಾಮನಗರ-ಚಿಕ್ಕಬಳ್ಳಾಪುರ ನನ್ನೆರಡು ಕಣ್ಣುಗಳೆನ್ನುವ ಕುಮಾರಸ್ವಾಮಿ ಒಂದಕ್ಕೆ ಬೆಣ್ಣೆ ಇನ್ನೊಂದಕ್ಕೆ ಸುಣ್ನ ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನವರು ಬೊಗಳೆ ದಾಸರು. ನಾವು ಕೆಲಸ ಮಾಡಿದ್ದೇವೆ. ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗಾಗಿ ನೀವು ಮತ ಹಾಕಿ ಎಂದು ಕರೆ ನೀಡಿದರು. 

ಕಾಂಗ್ರೆಸ್ ಆಜಾ ಆಜಾ ಅಂತಿದೆ,ಗೌಡರು ಕಭಿ ನಹಿಂ ಅಂತಿದಾರೆ: ಮರು ಮೈತ್ರಿಗೆ ಅಶೋಕ್ ವ್ಯಂಗ್ಯ!

ಇನ್ನೊಂದೆಡೆ  ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್  ಕಾಂಗ್ರೆಸ್ ನವರು ಆಜಾ ಆಜಾ ಅಂತಿದ್ದಾರೆ ದೇವೇಗೌಡರು ಕಭಿ ನಹಿಂ ಕಭಿ ನಹಿಂ ಎನ್ನುತ್ತಿದ್ದಾರೆ ಎಂದು.ಉಪ ಚುನಾವಣೆ ನಂತರ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಹೇಳಿಕೆಯನ್ನು ಟೀಕಿಸಿದ್ದಾರೆ.

ಕಾಂಗ್ರೆಸ್ಸಿಗರು ಭಿಕ್ಷುಕರ ರೀತಿ ವರ್ತಿಸುತ್ತಿದ್ದಾರೆ, ಸಿದ್ದರಾಮಯ್ಯ ಉಪ ಚುನಾವಣೆಯಲ್ಲಿ ಎಲ್ಲಾ ಸ್ಥಾನದಲ್ಲಿ ಗೆಲ್ಲುತ್ತೇವೆ ಅಂತಾ ಹೇಳಿದ್ದಾರೆ. ಹಾಗಾದರೆ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಹಾಕಬೇಕಿತ್ತು ಜೆಡಿಎಸ್, ಕಾಂಗ್ರೆಸ್ ಸೇರಿ ಹಾಕಿದ್ದರೆ ಗೆಲ್ತಿರಲಿಲ್ಲವೇ ? ಕಾಂಗ್ರೆಸ್ ನವರು ಬರಗೆಟ್ಟು ಬಿಟ್ಟಿದ್ದಾರೆ,ಚುನಾವಣೆ ಗೂ ಮುನ್ನವೇ ಶಸ್ತ್ರತ್ಯಾಗ ಮಾಡಿದ್ದಾರೆ,ರಾಜ್ಯಸಭಾ ಉಪಚುನಾವಣೆಯಲ್ಲಿ ಹೊಂದಾಣಿಕೆ ಆಗದೇ ಇದ್ದವರು ಇನ್ನು ಮುಖ್ಯ ಪರೀಕ್ಷೆಯಲ್ಲಿ ಹೇಗೆ ಹೊಂದಾಣಿಕೆ ಎಂದು ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com