ಉಪ ಚುನಾವಣೆ: ಅನರ್ಹರನ್ನು ಸೋಲಿಸುವುದೇ ಗುರಿ- ಡಿಕೆ ಶಿವಕುಮಾರ್ 

ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸುವುದೇ ತಮ್ಮ ಗುರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಉಪ ಚುನಾವಣೆ ಬಹಿರಂಗ  ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದ್ದು, ವಿವಿಧ ಪಕ್ಷಗಳ ಘಟಾನುಘಟಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೊನೆಯ ಹಂತದ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಹೊಸಕೋಟೆ ಮತ್ತು ಯಶವಂತಪುರ ಕ್ಷೇತ್ರಗಳಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಗಳ ಪರವಾಗಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. 

ಇದಕ್ಕೂ ಮುನ್ನ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಡಿಕೆಶಿ, ಅನರ್ಹರನ್ನು ಸೋಲಿಸುವುದೇ ತಮ್ಮ ಗುರಿಯಾಗಿದ್ದು, ಪಕ್ಷಕ್ಕೂ  ಹಾಗೂ ಜನರಿಗೂ ಮೋಸ ಮಾಡಿದವರನ್ನು ಮತದಾರರು ಪುನರ್ ಆಯ್ಕೆ ಮಾಡುವುದಿಲ್ಲ ಎಂದರು. 

ಹಿರಿಯ  ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಮಾಜಿ ಲೋಕಾಯುಕ್ತ ಸಂತೋಷ ಹೆಗ್ಟೆ, ನ್ಯಾಯಮೂರ್ತಿ ಗೋಪಾಲಗೌಡರು, ಸಾಹಿತಿ ದೇವನೂರು ಮಹದೇವ ಸೇರಿದಂತೆ ಹಲವು ಗಣ್ಯರು ಅನರ್ಹರು ಸೋಲಬೇಕು, ಪ್ರಜಾಪ್ರಭುತ್ವ  ಉಳಿಸಬೇಕು ಎಂದು ಕರೆದ್ದಾರೆ. ಜನರು ಅನರ್ಹರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com