ಕಾಗವಾಡ: ಸಕ್ಕರೆ ಸಿಹಿನಾಡಿನಲ್ಲಿ ಹಳೇ ಹುಲಿಗಳ ಬದ್ದ ಹೋರಾಟ 

ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ   ಕಾಗವಾಡ ವಿಧಾನಸಭೆ ಕ್ಷೇತ್ರದಲ್ಲಿ ಸಾಂಪ್ರಾದಾಯಿಕ ವೈರಿಗಳ ಹೋರಾಟ ತೀವ್ರವಾಗಿದೆ.  ರಾಜು ಕಾಗೆ ಮತ್ತು ಶ್ರೀಮಂತ್ ಪಾಟೀಲ್ ಇಬ್ಬರು ಅನುಭವಿ ರಾಜಕಾರಣಿಗಳಾಗಿದ್ದಾರೆ.
ಶ್ರೀಮಂತ ಪಾಟೀಲ್ ಮತ್ತು ರಾಜು ಕಾಗೆ
ಶ್ರೀಮಂತ ಪಾಟೀಲ್ ಮತ್ತು ರಾಜು ಕಾಗೆ

ಬೆಳಗಾವಿ:  ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ   ಕಾಗವಾಡ ವಿಧಾನಸಭೆ ಕ್ಷೇತ್ರದಲ್ಲಿ ಸಾಂಪ್ರಾದಾಯಿಕ ವೈರಿಗಳ ಹೋರಾಟ ತೀವ್ರವಾಗಿದೆ.  ರಾಜು ಕಾಗೆ ಮತ್ತು ಶ್ರೀಮಂತ್ ಪಾಟೀಲ್ ಇಬ್ಬರು ಅನುಭವಿ ರಾಜಕಾರಣಿಗಳಾಗಿದ್ದಾರೆ.

ಆಪರೇಷನ್ ಕಮಲದ ನಂತರ ರಾಜು ಕಾಗೆ ಕಾಂಗ್ರೆಸ್ ಗೆ ಸೇರಿದರು,  ಹೀಗಾಗಿ ಬಿಜೆಪಿ ಶ್ರೀಮಂತ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ, ಶ್ರೀಮಂತ್ ಪಾಟೀಲ್ ಈ ಮೊದಲು ಕಾಂಗ್ರೆಸ್ ಶಾಸಕರಾಗಿದ್ದರು, ಸದ್ಯದ ಪ್ರಶ್ನೆ ಎಂದರೇ ಗೆಲ್ಲುವವರು ಯಾರು ಎಂಬುದು,  ಇಲ್ಲಿನ ಜನತೆಇತ್ತೀಚೆಗೆ ಉಂಟಾದ ಪ್ರವಾಹದಿಂದ ಅಸಮಾಧಾನಗೊಂಡಿದ್ದಾರೆ,  ಪ್ರವಾಹದಿಂದಾಗಿ ಸಾವಿರಾರು ಕೋಟಿ ರು. ನಷ್ಚವಾಗಿ ಹಲವರು  ಬೀದಿಗೆ ಬಿದ್ದಿದ್ದಾರೆ.

1999ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಾಜು ಕಾಗೆ ಕಾಂಗ್ರೆಸ್ ನ ಪಿ.ಎ ಪಾಟೀಲ್ ವಿರುದ್ಧ ಸೋತಿದ್ದರು.  ಅದಾದ ನಂತರ ರಾಜು ಕಾಗೆ ಜನಪ್ರಿಯತೆ ಹೆಚ್ಚಾಯಿತು.  ಮೊದಲ ಬಾರಿಗ ಜೆಡಿಯು ನಿಂದ ಸ್ಪರ್ಧಿಸಿ ಗೆದ್ದಿದ್ದರು, ಅದಾದ ನಂತರ ಮೂರು ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು.

ಪಾಟೀಲ್ ಸಕ್ಕರೆ ಕಾರ್ಖಾನೆ ಹೊಂದಿದ್ದರು,  ಅವರು ಕೃಷಿಗೆ ಈ ಭಾಗದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಈ ಭಾಗದ ಜನರಿಗೆ ಕಾಗೆ ಮತ್ತು ಪಾಟೀಲ್ ಇಬ್ಬರು ಅಚ್ಚು ಮೆಚ್ಚು, ಜೆಡಿಎಸ್ ನ ಶ್ರೀ ಶೈಲ್ ತೂಗಾಶೆಟ್ಟಿ ಕೂಡ ಉತ್ತಮ ಪ್ರಮಾಣದ ಮತ ಪಡೆಯುವ ವಿಶ್ವಾಸ ಹೊಂದಿದ್ದಾರೆ.

ರಾಜು ಕಾಗೆ ಅವರನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿತು, ಕಾಂಗ್ರೆಸ್ ಇದೇ ಅವಕಾಶವನ್ನು ಸದುಪಯೊಗ ಪಡಿಸಿಕೊಂಡು ಕಾಗೆ ಅವರಿಗೆ ಗಾಳ ಹಾಕಿತು. ಶ್ರೀಮಂತ ಪಾಟೀಲ್, ಪರ ರಮೇಶ್ ಜಾರಕಿಹೊಳಿ ಮತ್ತು ಇತರ ಬಿಜೆಪಿ ನಾಯಕರು ಪ್ರಚಾರ ನಡೆಸಿದ್ದಾರೆ.

ಇಲ್ಲಿ ಲಿಂಗಾಯತ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿದೆ, ಅದಾದ ನಂತರ ಜೈನರು, ಕುರುಬರು, ಮಾರಾಠರು, ಮುಸ್ಲಿಮರು ಹಾಗೂ ದಲಿತರು ಇದ್ದಾರೆ, ಕಾಗೆ ಮತ್ತು ಪಾಟೀಲ್ ಇಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಹೀಗಾಗಿ ಇಬ್ಬರಲ್ಲಿ ಯಾರು ಎಂಬುದನ್ನು ಮತದಾರರು ಗಮನ ಹರಿಸಿ ಆರಿಸಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com