ಕಳೆದುಕೊಂಡದ್ದಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ: ಜೆಡಿಎಸ್ ವಿಶ್ವಾಸ

ಕೆಲ ತಿಂಗಳ ಹಿಂದೆ ರಾಜಿನಾಮೆ ನೀಡಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದರು, ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ಸೀಟು ಗೆಲ್ಲುತ್ತೇವೆ ಎಂದು ಜೆಡಿಎಸ್ ವಿಶ್ವಾಸ ವ್ಯಕ್ತ ಪಡಿಸಿದೆ.
ಜೆಡಿಎಸ್ ಪ್ರಚಾರ
ಜೆಡಿಎಸ್ ಪ್ರಚಾರ

ಬೆಂಗಳೂರು: ರಾಜಿನಾಮೆ ನೀಡಿದ 15 ಮಂದಿ ಶಾಸಕರ ಪೈಕಿ ಮೂವರು ಜೆಡಿಎಸ್ ನವರು,ಕೆಲ ತಿಂಗಳ ಹಿಂದೆ ರಾಜಿನಾಮೆ ನೀಡಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದರು, ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ಸೀಟು ಗೆಲ್ಲುತ್ತೇವೆ ಎಂದು ಜೆಡಿಎಸ್ ವಿಶ್ವಾಸ ವ್ಯಕ್ತ ಪಡಿಸಿದೆ.

ಬಂಡಾಯ ಶಾಸಕರಿಗೆ ಪಾಠ ಕಲಿಸಲು ಇದು ಸೂಕ್ತ ಸಮಯವಾಗಿದೆ, ಹಾಗೆಯೇ ಹಳೇ ಮೈಸೂರು ಭಾಗದಲ್ಲಿ ತಮ್ಮ ಪ್ರಾಬಲ್ಯ ತೋರಿಸುವುದಾಗಿ ಜೆಡಿಎಸ್ ತಿಳಿಸಿದೆ.  ಹುಣಸೂರು ಶಾಸಕ ಎಚ್. ವಿಶ್ವನಾಥ್, ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ ಹಾಗೂ ಮಹಾಲಕ್ಷ್ಮಿ ಲೇಔಟ್ ನ ಕೆ ಗೋಪಾಲಯ್ಯ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

ಡಿಸೆಂಬರ್ 5 ರಂದು ನಡೆಯುತ್ತಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಎರಡು ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ ವಾಪಸ್ ಪಡೆದಿದ್ದಾರೆ,ಉಳಿದ 12ರಲ್ಲಿ ಜೆಡಿಎಸ್ 7 ಕ್ಷೇತ್ರಗಳ ಮೇಲೆ ಫೋಕಸ್ ಮಾಡಿದೆ.

ಹುಣಸೂರು, ಕೆಆರ್ ಪೇಟೆ, ಚಿಕ್ಕಬಳ್ಳಾಪುರ, ಗೋಕಾಕ್, ಸೇರಿದಂತೆ 7 ಕ್ಷೇತ್ರಗಳನ್ನು ಗೆಲ್ಲಲು ಜೆಡಿಎಸ್ ಹಣಿಸುತ್ತಿದೆ.  ಏಕೆಂದರೇ ಉಳಿದ ಕ್ಷೇತ್ರಗಳ ಮೇಲೆ ಜೆಡಿಎಸ್ ಹಿಡಿತವಿಲ್ಲ. ಎಚ್,ಡಿ ದೇವೇಗೌಡ ಮತ್ತು ಎಚ್.ಡಿ ಕುಮಾರಸ್ವಾಮಿ ಸ್ಟಾರ್ ಪ್ರಚಾರಕರಾಗಿದ್ದಾರೆ.

ನಾವು ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ಸೀಟುಗಳನ್ನು ಗೆಲ್ಲುತ್ತೇವೆ, ಪಕ್ಷ ಬಿಟ್ಟು ಹೋದ ಬಂಡಾಯಗಾರರಿಗೆ ಪಾಠ ಕಲಿಸಲು ಇದು ಸೂಕ್ತಸಮಯ ಆಗಿದೆ, ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ 14 ಶಾಸಕರು ಸೋಲುತ್ತಾದೆ ಎಂದು ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ,

ಕಾಂಗ್ರೆಸ್ ಮತ್ತು ಬಿಜೆಪಿಯಂತೆ ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತಿಲ್ಲ. ನಮ್ಮ ಶಕ್ತಿ ಹಾಗೂ ಬಲಹಿನತೆ ಬಗ್ಗೆ ನಮಗೆ ತಿಳಿದಿದೆ,  ಎಲ್ಲಾ ಕ್ಷೇತ್ರಗಳಲ್ಲಿಪ್ರಚಾರ ನಡೆಸುವ ಬದಲು ಗೆಲ್ಲುವ ಸಾಧ್ಯತೆಯಿರುವ ಕ್ಷೇತ್ರಗಳಲ್ಲಿ ಹೆಚ್ಚಿನಸಮಯ ನೀಡುತ್ತಿದ್ದೇವೆ ಎಂದು 
ಹೇಳಿದ್ದಾರೆ. 

ಹುಣಸೂರು, ಕೆ.ಆರ್ ಪೇಟೆ, ಯಶವಂತಪುರ,  ಮತ್ತು ಗೋಕಾಕ್ , ಚಿಕ್ಕ ಬಳ್ಳಾಪುರ  ಮತ್ತು ಮಹಾಲಕ್ಷ್ಮಿ ಲೇಔಟ್ ಗಳಲ್ಲಿ ಗೆಲುವು ನಮ್ಮದೇ ಎಂದು ಕಾಶೆಂಪೂರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಅಭ್ಯರ್ಥಿ ಕೆ.ಗೋಪಾಲಯ್ಯ ನೆಗೆಟಿವ್ ಇಮೇಜ್ ಹೊಂದಿದ್ದಾರೆ ಹಾಗೂ ಶಿವಾಜಿನಗರ ಅಭ್ಯರ್ಥಿ ಗುಡ್ ಇಮೇಜ್ ಹೊಂದಿದ್ದಾರೆ, ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೇ ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com