ಉಪ ಚುನಾವಣೆ: ಮತದಾನೋತ್ತರ ಸಮೀಕ್ಷೆಯಲ್ಲಿ ಬಿಎಸ್ ವೈ ಸರ್ಕಾರ ಸೇಫ್, ಕಾಂಗ್ರೆಸ್-ಜೆಡಿಎಸ್ ಮರು ಮೈತ್ರಿ ಕನಸು ಭಗ್ನ

ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಮತದಾನ ನಡೆದಿದ್ದು, ಡಿಸೆಂಬರ್ 9ರಂದು ಫ‌ಲಿತಾಂಶ ಪ್ರಕಟವಾಗಲಿದೆ.
ಮೂರು ಪಕ್ಷಗಳ ನಾಯಕರು
ಮೂರು ಪಕ್ಷಗಳ ನಾಯಕರು

ಬೆಂಗಳೂರು: ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಮತದಾನ ನಡೆದಿದ್ದು, ಡಿಸೆಂಬರ್ 9ರಂದು ಫ‌ಲಿತಾಂಶ ಪ್ರಕಟವಾಗಲಿದೆ.

ಇಂದು ಸಂಜೆ ಮತದಾನ ಮುಕ್ತಾಯವಾದ ಬೆನ್ನಲ್ಲೇ ಸಿವೋಟರ್ ನಡೆಸಿದ ಮತದಾನೋತ್ತರ ಸಮೀಕ್ಷೆ ಪ್ರಕಟಗೊಂಡಿದ್ದು, ಮತದಾರ ಬಿಎಸ್ ವೈ ಸರ್ಕಾರವನ್ನು ಸೇಫ್ ಮಾಡುವ ಮೂಲಕ ಕಾಂಗ್ರೆಸ್ - ಜೆಡಿಎಸ್ ಮರು ಮೈತ್ರಿ ಕನಸು ಭಗ್ನಗೊಳಿಸಿದ್ದಾರೆ.

ಸಿವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 9ರಿಂದ 12, ಕಾಂಗ್ರೆಸ್‌ಗೆ 3ರಿಂದ 6 ಮತ್ತು ಜೆಡಿಎಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಲಿದೆ.

ಕ್ಷೇತ್ರವಾರು ಫಲಿತಾಂಶ
ಮಹಾಲಕ್ಷ್ಮೀ ಲೇಔಟ್‌ನಲ್ಲಿ ಗೋಪಾಲಯ್ಯ (ಬಿಜೆಪಿ) 
ಕೆ.ಆರ್.ಪುರಂ –ಭೈರತಿ ಬಸವರಾಜ್ (ಬಿಜೆಪಿ)
ಗೋಕಾಕ– ರಮೇಶ್ ಜಾರಕಿಹೊಳಿ (ಬಿಜೆಪಿ) 
ಅಥಣಿ– ಮಹೇಶ್ ಕುಮಠಳ್ಳಿ (ಬಿಜೆಪಿ)
ಹಿರೇಕೆರೂರು– ಬಿ.ಸಿ.ಪಾಟೀಲ್ (ಬಿಜೆಪಿ)
ಯಲ್ಲಾಪುರ– ಶಿವರಾಮ ಹೆಬ್ಬಾರ್ (ಬಿಜೆಪಿ)
ಯಶವಂತಪುರ– ಎಸ್ ಟಿ ಸೋಮಶೇಖರ್ (ಬಿಜೆಪಿ)
ವಿಜಯನಗರ– ಆನಂದ್‌ಸಿಂಗ್ (ಬಿಜೆಪಿ)
ಹೊಸಕೋಟೆ– ಎಂಟಿಬಿ ನಾಗರಾಜ್ (ಬಿಜೆಪಿ)
ಚಿಕ್ಕಬಳ್ಳಾಪುರ – ಡಾ. ಕೆ. ಸುಧಾಕರ್‌ (ಬಿಜೆಪಿ) ಮತ್ತು ಎಂ. ಆಂಜಿನಪ್ಪ (ಕಾಂಗ್ರೆಸ್‌) ನಡುವೆ ನೇರಾ ನೇರಾ ಹೋರಾಟ
ಕಾಗವಾಡ - ರಾಜು ಕಾಗೆ (ಕಾಂಗ್ರೆಸ್‌)
ಕೆಆರ್‌ ಪೇಟೆ - ಕೆಸಿ ನಾರಾಯಣ ಗೌಡ (ಬಿಜೆಪಿ) ಮತ್ತು ಬಿಎಲ್‌ ದೇವರಾಜ್‌ (ಜೆಡಿಎಸ್‌) ನಡುವೆ ಸಮಬಲದ ಸ್ಪರ್ಧೆ
ಶಿವಾಜಿನಗರ - ರಿಜ್ವಾನ್‌ ಅರ್ಷದ್‌ (ಕಾಂಗ್ರೆಸ್‌) ಮತ್ತು ಎಂ. ಸರವಣ (ಬಿಜೆಪಿ) ನಡುವೆ ಜಿದ್ದಾ ಜಿದ್ದಿಯ ಫೈಟ್‌
ರಾಣೇಬೆನ್ನೂರು - ಕೆ.ಬಿ. ಕೋಳಿವಾಡ್‌ (ಕಾಂಗ್ರೆಸ್‌) ಮತ್ತು ಅರುಣ್‌ ಕುಮಾರ್‌ ಪೂಜಾರ (ಬಿಜೆಪಿ) ನಡುವೆ ತುರುಸಿನ ಸ್ಪರ್ಧೆ
ಹುಣಸೂರು - ಎಚ್‌ಪಿ ಮಂಜುನಾಥ್‌ (ಕಾಂಗ್ರೆಸ್‌)

ಸಂಜೆ 4 ಗಂಟೆ ವರೆಗೆ ಸಿ-ವೋಟರ್​ ನಡೆಸಿದ ಸಮೀಕ್ಷೆಯ ಫಲಿತಾಂಶ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com