ಉಪ ಚುನಾವಣೆ: ಮತ್ತೆ ಹಳೆ ಮೈತ್ರಿಗೆ ದೇವೇಗೌಡರು ಕಿಂಗ್ ಮೇಕರ್ ಹೇಗೆ ಮತ್ತು ಏಕೆ? 

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರಾಜಕೀಯವಾಗಿ ಇರುವುದು ಸಮಾನ ಬಯಕೆ, ಅದು ಫೀನಿಕ್ಸ್ ನಂತೆ ಎದ್ದುಬಂದು ರಾಜಕೀಯವಾಗಿ ಮತ್ತೆ ಭವಿಷ್ಯ ಕಂಡುಕೊಳ್ಳುವುದು. ಈ ಬಾರಿಯ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಯತ್ನಿಸಿದರೂ ಕೂಡ ಎರಡೂ ಪಕ್ಷಗಳು ಬಹುವಾಗಿ ನೆಚ್ಚಿಕೊಂಡಿರುವುದು ಒಬ್ಬ ವ್ಯಕ್ತಿಯನ್ನು ಅದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ.
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು:ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರಾಜಕೀಯವಾಗಿ ಇರುವುದು ಸಮಾನ ಬಯಕೆ, ಅದು ಫೀನಿಕ್ಸ್ ನಂತೆ ಎದ್ದುಬಂದು ರಾಜಕೀಯವಾಗಿ ಮತ್ತೆ ಭವಿಷ್ಯ ಕಂಡುಕೊಳ್ಳುವುದು. ಈ ಬಾರಿಯ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಯತ್ನಿಸಿದರೂ ಕೂಡ ಎರಡೂ ಪಕ್ಷಗಳು ಬಹುವಾಗಿ ನೆಚ್ಚಿಕೊಂಡಿರುವುದು ಒಬ್ಬ ವ್ಯಕ್ತಿಯನ್ನು ಅದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ.


ಚುನಾವಣೆಯನ್ನು ಎದುರಿಸುವ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕವಾಗಿ ಶೇಕಡಾ 65ಕ್ಕಿಂತ ಅಧಿಕ ಮತಗಳು ಹಂಚಿಕೆಯಾಗುತ್ತವೆ. ಇಂತಹ ಸಂದರ್ಭದಲ್ಲಿ ಬಿಜೆಪಿಗೆ ಸಹಜ ಆತಂಕ ಎದುರಾಗುತ್ತದೆ. ಇನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸೂಚನೆಯನ್ನು ದೇವೇಗೌಡರು ಕೊಟ್ಟರೆ ಮತದಾನ ಪ್ರಕ್ರಿಯೆ ವಿಭಿನ್ನವಾಗಲಿದೆ.


ತಾವು ಸುಲಭವಾಗಿ ಜಯ ಸಾಧಿಸಬಹುದು ಎಂದು ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೊಂಡು ಬಂದಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮತಗಳನ್ನು ಪರಿಣಾಮಕಾರಿಯಾಗಿ ತಮ್ಮ ಕಡೆಗೆ ಸೆಳೆದುಕೊಂಡರೆ ಬಿಜೆಪಿಗೆ ಈ ಬಾರಿಯ ಉಪ ಚುನಾವಣೆಯಲ್ಲಿ ಗೆಲುವು ಕಷ್ಟವಾಗಲಿದೆ. ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆಯ ರಿಮೋಟ್ ಕಂಟ್ರೋಲ್ ದೇವೇಗೌಡರ ಕೈಯಲ್ಲಿದೆ.


ಕೆ ಆರ್ ಪೇಟೆ ಮತ್ತು ಯಶವಂತಪುರ ಕ್ಷೇತ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿಗರಿದ್ದು, ಇಲ್ಲಿ ಜೆಡಿಎಸ್ ಗೆ ಗೆಲುವಿನ ಹಾದಿಗೆ ಸಾಕಷ್ಟು ಅವಕಾಶವಿದೆ. ಮಹಾಲಕ್ಷ್ಮಿ ಲೇ ಔಟ್, ಕೆ ಆರ್ ಪುರಂ, ಹುಣಸೂರು, ಹೊಸಕೋಟೆ, ಚಿಕ್ಕಬಳ್ಳಾಪುರ ಮತ್ತು ಶಿವಾಜಿನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಹೊಂದಾಣಿಕೆ ಏರ್ಪಟ್ಟರೆ ಮತ ಹಂಚಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ಒಟ್ಟಾಗಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿದೆ.


ಇನ್ನು ಗೋಕಾಕ್, ಅಥಣಿ, ಕಾಗವಾಡ, ರಾಣಿಬೆನ್ನೂರು, ಯಲ್ಲಾಪುರ ಮತ್ತು ಹಿರೆಕೆರೂರು ಕ್ಷೇತ್ರಗಳಲ್ಲಿ ಜೆಡಿಎಸ್ ನಿಂದ ಸರಿಯಾದ ರೀತಿಯಲ್ಲಿ ಕಾಂಗ್ರೆಸ್ ಗೆ ಮತ ಹಂಚಿಕೆಯಾದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮತ್ತೆ ಮೈತ್ರಿ ಮಾಡಿಕೊಳ್ಳುವ ಸಂಭವ ಜಾಸ್ತಿಯಿದೆ.
ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ 66 ಮತ್ತು ಜೆಡಿಎಸ್ 34 ಸ್ಥಾನಗಳನ್ನು ಹೊಂದಿದ್ದು ಒಟ್ಟಾಗಿ 100 ಸೀಟುಗಳಿವೆ. ಬಿಜೆಪಿಗೆ 105 ಸೀಟುಗಳಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ 11 ಸೀಟುಗಳನ್ನು ಗೆದ್ದರೆ ಅವರ ಸ್ಥಾನ 111ಕ್ಕೇರುತ್ತದೆ. ಬಿಜೆಪಿಗೆ 109 ಸೀಟುಗಳಾಗುತ್ತದೆ.


ಉಪ ಚುನಾವಣೆ ನಂತರ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಮೈತ್ರಿಯಾದರೆ ನೀವು ಸಿಎಂ ಆಗುತ್ತೀರಾ ಎಂದು ಕೇಳಿದಾಗ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೊದಲು ಉಪ ಚುನಾವಣೆಯಲ್ಲಿ ಸಾಧ್ಯವಾದಷ್ಟು ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ, ಇಲ್ಲಿ ಸಿಎಂ ಮುಖ್ಯವಲ್ಲ, ಪ್ರತಿಯೊಂದು ಕೇಂದ್ರ ನಾಯಕತ್ವವನ್ನು ಅವಲಂಬಿಸಿದೆ ಎಂದರು.


ಬಿಜೆಪಿಗೆ ಅಧಿಕಾರದಲ್ಲಿ ಉಳಿಯಲು ಬೇಕಾದಷ್ಟು ಸೀಟುಗಳು ಸಿಗುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಸಿದ್ದರಾಮಯ್ಯನವರಿಗೆ ಮತ್ತೆ ಜೆಡಿಎಸ್ ಜೊತೆ ಮೈತ್ರಿಯಲ್ಲಿ ಆಸಕ್ತಿ ಇದ್ದಂತಿಲ್ಲ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಸಾಕಷ್ಟು ಗೆಲುವು ಸಿಕ್ಕಿದರೆ ಮತ್ತೆ ಹಳೆ ಮೈತ್ರಿ ಸರ್ಕಾರ ದೇವೇಗೌಡರು ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಅವಲಂಬಿತವಾಗಿ ನಿಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com