ನಾನು ದಲಿತ ನಾಯಕನಲ್ಲ, ಕಾಂಗ್ರೆಸ್ ಮ್ಯಾನ್: ಖರ್ಗೆ

ತಮ್ಮನ್ನು ದಲಿತ ದಲಿತರ ಮುಖಂಡ ಎಂದು ಕರೆಯುತ್ತಿರುವುದಕ್ಕೆ ಮಾಜಿ ಸಂಸದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಲಿತರ ನಾಯಕ ಎನ್ನಬೇಡಿ ಒಬ್ಬ 'ಕಾಂಗ್ರೆಸ್ ಮನ್' , ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ತಮ್ಮನ್ನು ದಲಿತ ದಲಿತರ ಮುಖಂಡ ಎಂದು ಕರೆಯುತ್ತಿರುವುದಕ್ಕೆ ಮಾಜಿ ಸಂಸದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಲಿತರ ನಾಯಕ ಎನ್ನಬೇಡಿ ಒಬ್ಬ 'ಕಾಂಗ್ರೆಸ್ ಮನ್' , ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ದಲಿತ ಮುಖ್ಯಮಂತ್ರಿ ವಿಚಾರ, ದಲಿತ‌ ನಾಯಕ ಎಂದೆಲ್ಲ ಪ್ರಶ್ನೆ ಕೇಳುವುದೇಕೆ ? ದಲಿತ ನಾಯಕ ಎಂದು ಪದೇ ಪದೇ ಹೇಳುವುದೇಕೆ?ಎಂದು ಪ್ರಶ್ನಿಸಿ‌ದರು. ಪಕ್ಷದ‌ ನಿಷ್ಠಾವಂತ‌ ಕಾರ್ಯಕರ್ತನಾಗಿರುವ ತಾವು ಯಾವುದೇ ಒಂದು ಜಾತಿ ಸಮುದಾಯಕ್ಕೆ ಮಾತ್ರ ಮೀಸಲಲ್ಲ‌ ಎಂದರು.

ಪದೇಪದೇ ನನ್ನ ದಲಿತ ನಾಯಕ ಎಂದು ಏಕೆ ಕರೆಯುತ್ತೀರಾ? ದಲಿತ ಸಿಎಂ ಸ್ಥಾನಕ್ಕೇನು ಮೀಸಲಾತಿ ಇದೆಯಾ? ನನ್ನನ್ನು ದಲಿತ ಎಂದು ಕರೆಯಬೇಡಿ. ನಾನು ದಲಿತ ಎಂಬ ಕಾರಣಕ್ಕೆ ಸಿಎಂ ಮಾಡುವುದಾದರೆ, ಬೇಜಾರು ಆಗುತ್ತಿದೆ. 50 ವರ್ಷದಿಂದ ಕಾಂಗ್ರೆಸ್​​ನಲ್ಲಿ ಇದ್ದೇನೆ. ನನ್ನ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹೀಗಿದ್ದರೂ ನಾನು ದಲಿತ ಸಿಎಂ ಆಗಬೇಕೇ? ಎಂದು ಪ್ರಶ್ನಿಸಿದರು.

ಕಳೆದ ವರ್ಷ ಸಿದ್ದರಾಮಯ್ಯ ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ದ ಎಂದು ಹೇಳಿಕೆ ನೀಡಿದ್ದರು. ಅಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿದ್ದ ಮಲ್ಲಿಕಾರ್ಜುನ್​​ ಖರ್ಗೆ, ದಲಿತ ಎನ್ನುವ ಕಾರಣಕ್ಕೆ ನನಗೆ ಸಿಎಂ ಸ್ಥಾನ ಕೊಡೋದು ಬೇಡ ಎಂದು ನಯವಾಗಿ ತಿರಸ್ಕರಿಸಿದ್ದರು.

ಹಾಗೆಯೇ ನಾನೊಬ್ಬ ದಲಿತ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆ ಕೊಡುವುದು ಬೇಡ. ಕಾಂಗ್ರೆಸ್ ಹಿರಿಯ ಮುಖಂಡ ಎಂದು ಅರಿತು ಮುಖ್ಯಮಂತ್ರಿ ಸ್ಥಾನ ನೀಡಿದರೆ ಸ್ವೀಕರಿಸುವೆ. ನಾಲ್ಕು ಐದು ದಶಕಗಳ ಕಾಲ ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿದ್ದಿದ್ದೇನೆ. ಈ ಹಿಂದೆಯೂ ದಲಿತ ಸಿಎಂ ಪ್ರಸ್ತಾಪವಾಗಿತ್ತು. ಆ ಸಂದರ್ಭದಲ್ಲಿಯೂ ದಲಿತ ಎಂದು ನನಗೆ ಸಿಎಂ ಸ್ಥಾನ ಕೊಡಬೇಡಿ ಎಂದು ನಾನು ಹೇಳಿದ್ದೆ. ಈಗಲೂ ನಾನು ಅದೇ ಮಾತನ್ನು ಹೇಳುತ್ತಿದ್ದೇನೆ. ದಲಿತ ಎನ್ನುವ ಕಾರಣಕ್ಕೆ ಸಿಎಂ ಸ್ಥಾನ ಕೊಡಿ ಎಂದು ಹೈಕಮಾಂಡ್​​ಗೆ ಅರ್ಜಿ ಹಾಕುವುದಿಲ್ಲ ಎಂದು ಕುಟುಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com