ಉಪ ಚುನಾವಣಾ ಫಲಿತಾಂಶ: ಜೆಡಿಎಸ್‌ ನಡುಕಕ್ಕೆ ಕಾರಣವಾಗಿರುವುದೇನು?

ಸೋಮವಾರ ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದತ್ತ ರಾಷ್ಟ್ರೀಯ ಪಕ್ಷಗಳ ಚಿತ್ತ ನೆಟ್ಟಿದ್ದರೆ ಪ್ರಾದೇಶಿಕ ಪಕ್ಷ‌ ಜೆಡಿಎಸ್‌ಗೆ ಮಾತ್ರ ನಡುಕ ಹೆಚ್ಚಿದೆ.
ದೇವೇಗೌಡ-ಕುಮಾರಸ್ವಾಮಿ
ದೇವೇಗೌಡ-ಕುಮಾರಸ್ವಾಮಿ

ಬೆಂಗಳೂರು: ಸೋಮವಾರ ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದತ್ತ ರಾಷ್ಟ್ರೀಯ ಪಕ್ಷಗಳ ಚಿತ್ತ ನೆಟ್ಟಿದ್ದರೆ ಪ್ರಾದೇಶಿಕ ಪಕ್ಷ‌ ಜೆಡಿಎಸ್‌ಗೆ ಮಾತ್ರ ನಡುಕ ಹೆಚ್ಚಿದೆ.

ಸೀ-ವೋಟರ್ಸ್ ಸೇರಿದಂತೆ  ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ 10 ರಿಂದ 12, ಕಾಂಗ್ರೆಸ್‌ಗೆ 5-6 ಸ್ಥಾನಗಳು ಲಭ್ಯವಾಗಿದ್ದು ಜೆಡಿಎಸ್ ಮಾತ್ರ 1-2 ಎಂದು ಹೇಳಿವೆ. ಚುನಾವಣೋತ್ತರ ಸಮೀಕ್ಷೆಗಳು ಉಪಚುನಾವಣಾ ಫಲಿತಾಂಶದಲ್ಲಿ ಕಿಂಗ್ ಮೇಕರ್  ಆಗುತ್ತೇವೆ ಎಂದು ಬೀಗುತ್ತಿದ್ದ ತೆನೆಹೊತ್ತ ನಾಯಕರಿಗೆ ನಡುಕ ಉಂಟುಮಾಡಿದೆ.

ಬಿಜೆಪಿ  ಸರ್ಕಾರ ಭದ್ರವಾಗಲು 7 ಸ್ಥಾನಗಳು ಸಿಗಲೇಬೇಕು. ಇನ್ನು ಜೆಡಿಎಸ್ ಜೊತೆ ಮೈತ್ರಿ  ಮಾಡಿಕೊಳ್ಳಲು ಕಾಂಗ್ರೆಸ್‌ಗೂ 10ರ ಮೇಲೆ ಬರಬೇಕು. 5-6 ಸ್ಥಾನಗಳ ನಿರೀಕ್ಷೆಯಲ್ಲಿದ್ದ  ಜೆಡಿಎಸ್ ಯಾವುದಾದರೊಂದು ಪಕ್ಷಕ್ಕೆ ಬೆಂಬಲ‌ ನೀಡುವ ಆಸೆಯಲ್ಲಿತ್ತು. ಆದರೆ ಜೆಡಿಎಸ್  ನಾಯಕರ ಲೆಕ್ಕಾಚಾರವನ್ನೆಲ್ಲ ಚುನಾವಣೋತ್ತರ ಫಲಿತಾಂಶಗಳು ಬುಡಮೇಲು ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com