ಮಾನ ಮರ್ಯಾದೆ ಇರುವವರು ಯಾರೂ ಬಿಜೆಪಿಗೆ ಹೋಗುವುದಿಲ್ಲ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮಾನ ಮರ್ಯಾದೆ ಇರುವವರು ಯಾರು ಬಿಜೆಪಿಗೆ ಹೋಗುವುದಿಲ್ಲ ಎನ್ನುವ ಮೂಲಕ ಎಸ್​​.ಟಿ ಸೋಮಶೇಖರ್​​ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಾನ ಮರ್ಯಾದೆ ಇರುವವರು ಯಾರೂ ಬಿಜೆಪಿಗೆ ಹೋಗುವುದಿಲ್ಲ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾನ ಮರ್ಯಾದೆ ಇರುವವರು ಯಾರೂ ಬಿಜೆಪಿಗೆ ಹೋಗುವುದಿಲ್ಲ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಮಾನ ಮರ್ಯಾದೆ ಇರುವವರು ಯಾರು ಬಿಜೆಪಿಗೆ ಹೋಗುವುದಿಲ್ಲ ಎನ್ನುವ ಮೂಲಕ ಎಸ್​​.ಟಿ ಸೋಮಶೇಖರ್​​ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು,ಕರ್ನಾಟಕ ಉಪಚುನಾವಣೆ ಫಲಿತಾಂಶ ಬರುವವರೆಗೂ ಕಾಯೋಣ.ರಹಸ್ಯ ಮತದಾನದ ವ್ಯವ್ಯಸ್ಥೆಯಲ್ಲಿದ್ದೇವೆ.ಸಮೀಕ್ಷ ಗಳಿಂದ ಫಲಿತಾಂಶವೇನು ಎಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲ.ನಾನು ಕಾಂಗ್ರೆಸ್​​ 8 ರಿಂದ 10 ಗೆದ್ದೇ ಗೆಲ್ಲುತ್ತೇ ಅಂದುಕೊಂಡಿದ್ದೇನೆ. ನಾನು ಪ್ರಚಾರ ಹೋದಡೆಗಳಲ್ಲಿ ಪಕ್ಷಾಂತರಿ ಗಳ ವಿರುದ್ಧದ ಮತದಾರರು ತಕ್ಕ ಉತ್ತರ ನೀಡುವ ವಾತಾವರಣವಿದೆ ಎಂದರು.

ಕಾಂಗ್ರೆಸ್ಸಿಗರು ಮನೆಗೆ ಹೋಗುವಂತ ಫಲಿತಾಂಶ ಬರುತ್ತದೆ ಎಂಬ ಆರ್​​.ಅಶೋಕ್​​ ಹೇಳಿಕೆಗೆ ಸಿದ್ದರಾಮಯ್ಯ ಕೆಂಡಮಂಡಲರಾದ ಅವರು,ಜಗದೀಶ್​​ ಶೆಟ್ಟರ್​​​  ಮುಖ್ಯಮಂತ್ರಿ ಆಗಿದ್ದಾಗ ಸೋತರಲ್ಲ,ಆಗ ಬಿಜೆಪಿಯವರು ಎಲ್ಲಿಗೆ ಹೋಗಿದ್ರು? ಎಂದು ಅವರು ಪ್ರಶ್ನಿಸಿದರು. ಈ ಮುನ್ನ ಕಾಂಗ್ರೆಸ್ ಪಕ್ಷದ 3 -4, ಜೆಡಿಎಸ್ ಪಕ್ಷದ 9 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಎಸ್​​.ಟಿ ಸೋಮಶೇಖರ್​​ ಹೇಳಿದ್ದರು.ನಾವು ಅನುಭವಿಸಿದ ನೋವು ಸಾಕು ಎಂದ ಎಸ್​​.ಟಿ ಸೋಮಶೇಖರ್​​ ರಾಜೀನಾಮೆ ನೀಡಿದರೆ ಇಷ್ಟೆಲ್ಲಾ ನಡೆಯುತ್ತದೆ ಎಂದು ಭಾವಿಸಿರಲಿಲ್ಲ ಎಂದು ಅವರು ಹಿಂದಿನ ಘಟನಾವಳಿಯನ್ನು ಸ್ಮರಿಸಿದರು.

ನಮ್ಮೊಂದಿಗೆ ಬರಬೇಕೆಂದು ಬಯಿಸಿದ ಕಾಂಗ್ರೆಸ್​-ಜೆಡಿಎಸ್​​ ಶಾಸಕರಿಗೆ ಈ ವಿಚಾರಗಳನ್ನು ತಿಳಿಸಿದ್ದೇವೆ. ಇದಕ್ಕೆಲ್ಲಾ ರೆಡಿ ಇದ್ದರೆ ಬನ್ನಿ ಎಂದು ಹೇಳಿ ದ್ದೇನೆ.ಬಿಜೆಪಿಗೆ ಬಂದಿರುವುದಕ್ಕೆ ನಮಗೆ ಯಾವುದೇ ಬೇಸರವಿಲ್ಲ.ಆದರೆ ರಾಜೀನಾಮೆ ನೀಡಿದ ಬಳಿಕ ನಾವು ಸಾಕಷ್ಟು ಸಮಸ್ಯೆ ಎದುರಿಸ ಬೇಕಾಯಿತು. ಸಚಿವ ಸ್ಥಾನ ಕೇಳಿಲ್ಲ. ಶಾಸಕನಾಗಿಯೂ ಕ್ಷೇತ್ರವನ್ನು ಅಭಿವೃದ್ಧಿಪಡಿ ಸುತ್ತೇನೆ ಎಂದು ಹೇಳುವ ಮೂಅನರ್ಹರು ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಅವರು ಅಲ್ಲಗಳೆದರು.

ಪ್ರತಿಭೆ ಯಾರಪ್ಪನ ಸೊತ್ತಲ್ಲ: ಸಿದ್ದು

ಪ್ರತಿಭೆ ಎನ್ನುವುದು ಯಾರಪ್ಪನ ಸೊತ್ತಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಮ್ಮಪ್ಪ ಹೆಬ್ಬೆಟ್ಟು, ನಮ್ಮ ಅಣ್ತಮಂದಿರೆಲ್ಲಾ ಅರ್ಧ ಓದಿದರು. ಸಿದ್ದರಾಮಯ್ಯ ಹಣೆಯಲ್ಲಿ ಸಿಎಂ ಆಗ್ತಿನಿ ಅಂತ ಬರೆದಿತ್ತು. ನಮ್ಮ ತಮ್ಮಂದಿರ ಹಣೆಯಲ್ಲಿ ಬರೆಯಲಿಲ್ಲ ಅಂತ ಅಲ್ಲ. ಇದನ್ನೆಲ್ಲಾ ಬುದ್ಧಿವಂತರು ಹೇಳುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಮಾತು ಮುಂದುವರಿಸಿದ ಸಿದ್ದರಾಮಯ್ಯ ನಾನು ಲಾಯರ್ ಓದೋಕೆ ಹೋದರೆ ಊರಿನ ಶಾನಭೋಗರು ಒಪ್ಪಲಿಲ್ಲ. ನಮ್ಮಪ್ಪ ಕುರುಬರು ಲಾಯರ್ ಆಗೋದಿಲ್ಲ ಅಂತ ಹೇಳಿದರು. ಊರಲ್ಲಿ ಪಂಚಾಯತಿ ಸೇರಿಸಿ ನಾನು ಲಾಯರ್ ಓದಿದೆ ಎನ್ನುವುದನ್ನು ಸ್ಮರಿಸಿಕೊಂಡ ಅವರು ಪ್ರತಿಭೆ ಯಾರಪ್ಪನ ಮನೆ ಸ್ವತ್ತಲ್ಲ. ಈಗ ಕಾಲ ಬದಲಾಗಿದ್ದು, ಎಲ್ಲರೂ ಓದಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com