ಮೆಡಿಕಲ್ ಕಾಲೇಜು ವಾಪಾಸ್ ಕನಕಪುರಕ್ಕೆ ಕೊಡಿಸದಿದ್ದರೆ ಏನು ಮಾಡುತ್ತೇನೆ ಎಂದು ನೋಡುತ್ತಿರಿ: ಡಿ ಕೆ ಶಿವಕುಮಾರ್ 

ವೈದ್ಯಕೀಯ ಕಾಲೇಜನ್ನು ತಮ್ಮ ತವರು ನೆಲ ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸುವ ಸರ್ಕಾರದ ನಿರ್ಧಾರದಿಂದ ತೀವ್ರ ನೊಂದಿರುವ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ತಾವು ಈ ನಿರ್ಧಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ವೈದ್ಯಕೀಯ ಕಾಲೇಜನ್ನು ತಮ್ಮ ತವರು ನೆಲ ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸುವ ಸರ್ಕಾರದ ನಿರ್ಧಾರದಿಂದ ತೀವ್ರ ನೊಂದಿರುವ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ತಾವು ಈ ನಿರ್ಧಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.


ಸಿಎಂ ಬಿ ಎಸ್ ಯಡಿಯೂರಪ್ಪನವರು ಬಹಳ ವರ್ಷಗಳ ಕಾಲ ಹೋರಾಟ ನಡೆಸಿ ಇಂದು ರಾಜಕೀಯವಾಗಿ ಈ ಹಂತಕ್ಕೆ ಬಂದು ನಿಂತಿರುವುದು, ವೈದ್ಯಕೀಯ ಕಾಲೇಜನ್ನು ಮತ್ತೆ ತಮ್ಮ ಕ್ಷೇತ್ರಕ್ಕೆ ತರುವಲ್ಲಿ ಮುಖ್ಯಮಂತ್ರಿಗಳು ಕಾನೂನು ಪಾಲಿಸುತ್ತಾರೆ ಎಂದು ಅಂದುಕೊಂಡಿದ್ದೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.


ನಿನ್ನೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ನಾನು ಮುಂದಿನ ದಿನಗಳಲ್ಲಿ ಏನು ಮಾಡುತ್ತೇನೆ ಎಂದು ಹೇಳುವುದಿಲ್ಲ, ಆದರೆ ಏನಾಗುತ್ತದೆ ಎಂದು ನೀವೇ ನೋಡುತ್ತೀರಿ ಎಂದರು.


ಬಿಜೆಪಿ ಉಪ ಚುನಾವಣೆಯಲ್ಲಿ 13 ಸೀಟುಗಳನ್ನು ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ಹೇಳಿರುವುದರ ಬಗ್ಗೆ ಕೇಳಿದಾಗ, ಉಳಿದ ಎರಡು ಕ್ಷೇತ್ರಗಳನ್ನು ಅವರು ಏಕೆ ಬಿಟ್ಟರು?, ಎಲ್ಲಾ 15 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳಬೇಕಾಗಿತ್ತು. ಮತ್ತಿಬ್ಬರು ಚುನಾಯಿತ ಪ್ರತಿನಿಧಿಗಳು ಏನು ತಪ್ಪು ಮಾಡಿದ್ದಾರೆ. ಅವರನ್ನೇಕೆ ಬಿಟ್ಟಿದ್ದು ರೋಶನ್ ಬೇಗ್ ಮತ್ತು ಶಂಕರ್ ಅವರನ್ನು ಬಿಟ್ಟಂತೆ, ಉಳಿದಿಬ್ಬರನ್ನು ಬಿಟ್ಟಿದ್ದೇಕೆ ಎಂದು ವ್ಯಂಗ್ಯವಾಗಿ ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com