ಶಕ್ತಿ ಕೇಂದ್ರವಾಗಲಿದೆ ಬೆಳಗಾವಿ: ಒಂದೇ ಜಿಲ್ಲೆಯಿಂದ 5-6 ನಾಯಕರಿಗೆ ಸಚಿವ ಸ್ಥಾನ

ಬೆಳಗಾವಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಂದೇ ಜಿಲ್ಲೆಯಿಂದ 5-6 ನಾಯಕರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿದೆ. 
ರಮೇಶ್
ರಮೇಶ್

ಬೆಂಗಳೂರು: ಬೆಳಗಾವಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಂದೇ ಜಿಲ್ಲೆಯಿಂದ 5-6 ನಾಯಕರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿದೆ. 

ಈ ಬಾರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಇಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆಯಲಿದ್ದು, ಇಬ್ಬರೂ ಉಪ ಮುಖ್ಯಮಂತ್ರಿಗಳು ಬೆಳಗಾವಿ ಮೂಲದವರಾಗಿರಲಿದ್ದಾರೆಂದು ಹೇಳಲಾಗುತ್ತಿದೆ. ಲಕ್ಷ್ಮಣ್ ಸವದಿ ಈಗಾಗಲೇ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಇವರು ಬೆಳಗಾವಿ ಮೂಲದವರಾಗಿದ್ದಾರೆ. ಇನ್ನು ಮತ್ತೊಂದು ಉಪ ಮುಖ್ಯಮಂತ್ರಿಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಹೆಸರು ಕೇಳಿ ಬರುತ್ತಿದ್ದು, ಇವರೂ ಕೂಡ ಬೆಳಗಾವಿ ಮೂಲದವರಾಗಿದ್ದಾರೆ. 

1972ರಲ್ಲಿ ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಳಗಾವಿಯ ಹಲವು ರಾಜಕೀಯ ನಾಯಕರಿಗೆ ಉನ್ನತ ಸ್ಥಾನಗಳನ್ನು ನೀಡಲಾಗಿತ್ತು. ರಾಜ್ಯ ರಾಜಕೀಯದಲ್ಲಿ ಮಹಿಳೆಯರು ಹಲವು ದಾಖಲೆಗಳನ್ನೂ ಬರೆದಿದ್ದರು. ಬೆಳಗಾವಿ ಜಿಲ್ಲೆಯ ನಾಯಕರು ಅನೇಕ ರಾಜ್ಯ ಸರ್ಕಾರಗಳ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅದೇ ರೀತಿ ಅಸ್ಥಿರಗೊಳಿಸಲುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. 

ಈ ಬಾರಿ ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿಯವರಿಗೆ ಎರಡು ಪ್ರಮುಖ ಸ್ಥಾನಗಳನ್ನು ನೀಡಲಿದ್ದಾರೆಂದು ಮೂಲಗಳು ತಿಳಿಸಿವೆ. ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಸ್ಥಾನ ರಮೇಶ್ ಅವರಿಗೆ ಒಲಿದು ಬರಲಿದೆ ಎಂದು ಹೇಳಲಾಗುತ್ತಿದೆ. ಬಿಎಸ್'ವೈ ಸಂಪುಟದಲ್ಲಿ ಕಾಗವಾಡದ ಶ್ರೀಮಂತ್ ಪಾಟೀಲ್, ಅಥಣಿಯ ಮಹೇಶ್ ಕುಮಟಳ್ಳಿ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂದು ಹೇಳಲಾಗುತ್ತಿದೆ. 

ಇನ್ನುಳಿದಂತೆ ಪಕ್ಷದ ಹಿರಿಯ ಶಾಸಕರಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿಯವರಿಗೂ ಸಚಿವ ಸ್ಥಾನ ನೀಡುವ ಕುರಿತು ಒತ್ತಡಗಳು ಹೆಚ್ಚಾಗಿದ್ದು, ಇದರಿಂದ ಯಡಿಯೂರಪ್ಪ ಅವರು ಒತ್ತಡಕ್ಕೆ ಸಿಲುವಂತಾಗಿದೆ. ಈ ಬಗ್ಗೆ ಪಕ್ಷ ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

ನೂತನ ನಾಯಕರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಪ್ರಸ್ತುತ ಸಚಿವ ಸ್ಥಾನ ಹೊಂದಿರುವ ನಾಯಕರನ್ನು ಸಂಪುಟದಿಂದ ಕೈಬಿಡಲು ಬಿಜೆಪಿ ನಿರ್ಧರಿಸಿದ್ದು, 2-3 ನಾಯಕರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 

ಯಾವುದೇ ಸ್ಥಾನಕ್ಕೂ ನಾನು ಸರ್ಕಾರವನ್ನು ಒತ್ತಾಯಿಸಿಲ್ಲ. ಪಕ್ಷದ ನಿರ್ಧಾರಕ್ಕೆ ತಲೆ ಬಾಗುತ್ತೇನೆಂದು ರಮೇಶ್ ಜಾರಕಿಹೊಳಿಯವರು ಹೇಳಿದ್ದಾರೆ. 

ಸಂಪುಟದಲ್ಲಿ ನನಗೆ ಸ್ಥಾನ ಸಿಗಲಿದೆ. ಒಂದು ವೇಳೆ ನನಗೆ ಸಚಿವ ಸ್ಥಾನ ಸಿಕ್ಕಿದ್ದೇ ಆದರೆ, ಈ ಬಾರಿ ಬೆಳಗಾವಿಯಿಂದ 5-6 ನಾಯಕರಿದೆ ಸಚಿವ ಸ್ಥಾನ ಸಿಕ್ಕಂತಾಗುತ್ತದೆ. ಗುಂಡೂರಾವ್ ನೇತೃತ್ವದ ಸಂಪುಟದಲ್ಲಿ ಬೆಳಗಾವಿಯಿಂದ ಹೆಚ್ಚು ಸಚಿವರಿದ್ದರೂ ಎಂದು ಹೇಳಲಾಗತ್ತಿತ್ತು. ಬಳಿಕ ಜೆಹೆಚ್ ಪಟೇಲ್ ಸರ್ಕಾರ ಎನ್ನಲಾಗುತ್ತಿತ್ತು. ಜಾರಕಿಹೊಳಿ, ಉಮೇಶ್ ಕತ್ತಿ ಹಾಗೂ ಇನ್ನಿತರೆ ಬೆಳಗಾವಿ ಮೂಲಕ ಬಿಜೆಪಿ ನಾಯಕರ ಬೆಂಬಲಿಗರು ಈ ಬಾರಿ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಧಿಕಾರ ಸಿಕ್ಕ ಬಳಿಕ ಬೆಳಗಾವಿಗೆ ಹೊಸ ರೂಪವನ್ನು ನೀಡುವಂತೆ ಹಾಗೂ ರಾಜ್ಯದ ಎರಡನೇ ರಾಜಧಾನಿ ಮಾಡುವಂತೆ ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com