ಸಕ್ಕರೆ ನಾಡಲ್ಲಿ ಇತಿಹಾಸ ಬರೆದ ಬಿಜೆಪಿ: ಕೆ.ಆರ್.ಪೇಟೆಯಲ್ಲಿ ಕಮಲ ಅರಳಿದ್ದಾದರೂ ಹೇಗೆ?

15 ದಿನಗಳು, 3 ನಾಯಕರು, 300ಕ್ಕೂ ಹೆಚ್ಚು ಕಾರ್ಯಕರ್ತರು ಈ ಬಾರಿಯ ಉಪಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ. ಉಪಚುನಾವಣೆಯಲ್ಲಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಇತಿಹಾಸ ಬರೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 15 ದಿನಗಳು, 3 ನಾಯಕರು, 300ಕ್ಕೂ ಹೆಚ್ಚು ಕಾರ್ಯಕರ್ತರು ಈ ಬಾರಿಯ ಉಪಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ. ಉಪಚುನಾವಣೆಯಲ್ಲಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಇತಿಹಾಸ ಬರೆದಿದೆ. 

ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಬೇಕಾದರೂ ಬಿಜೆಪಿ ಕಮಲ ಅರಳಬಹುದು. ಆದರೆ, ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಅದು ಸಾಧ್ಯವೇ ಇಲ್ಲ ಎಂಬ ರಾಜ್ಯ ರಾಜಕಾರಣದಲ್ಲಿ ದಶಕಗಳಲ್ಲಿ ಚಾಲ್ತಿಯಲ್ಲಿದ್ದ ಮಾತನ್ನು ಪ್ರಸಕ್ತ ಉಪಚುನಾವಣೆ ಹುಸಿಗೊಳಿಸಿದೆ. ಇಷ್ಟಕ್ಕೂ ಜೆಡಿಎಸ್ ಭದ್ರಕೋಟೆಯೆಂದೇ ಹೇಳಲಾಗುತ್ತಿದ್ದ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿದ್ದಾದರೂ ಹೇಗೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲು ಆರಂಭಿಸಿದೆ. ಎಲ್ಲರಲ್ಲೂ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. 

ಒಕ್ಕಲಿಗೆ ಸಮುದಾಯದ ಮುಖ್ಯಮಂತ್ರಿ ಒಕ್ಕಲಿಗ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಿದ ಕೆಲವೇ ತಿಂಗಳುಗಳಲ್ಲಿ ಲಿಂಗಾಯತ ನಾಯಕ ಮುಖ್ಯಮಂತ್ರಿಗಳಾದರು. ಇದರಂತೆ ಒಕ್ಕಲಿಗರ ಪ್ರಬಲ ಭದ್ರಕೋಟೆ ಕೆ.ಆರ್.ಪೇಟೆಯಲ್ಲಿ ಒಕ್ಕಲಿಗರ ಮನಗೆಲ್ಲುವಲ್ಲಿ ಬಿಜೆಪಿ ಸಫಲವಾಗಿದೆ. 

ಬಿಜೆಪಿ ಗೆಲುವಿನ ಹಾದಿ ಅಷ್ಟೇನೂ ಸುಲಭವಾಗಿರಲಿಲ್ಲ. ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಚಿತ್ರವನ್ನು ನೋಡಿದ್ದೀರಾ? ಅದೇ ರೀತಿ ಈ ಬಾರಿ ಕೆ.ಆರ್.ಪೇಟೆಯಲ್ಲಿಯೂ ಬೆಳವಣಿಗೆಗಳು ನಡೆದಿದ್ದವು ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. 

ಮತದಾರರ ಆಧಾರದ ಮೇಲೆ ಬಜೆಟ್ ನಿರ್ಧಾರ, ಪದೇ ಪದೇ ಸಭೆಗಳು, ಪ್ರತೀ ಗ್ರಾಮದಲ್ಲಿಯೂ ಚುನಾವಣಾ ಸಬೆಗಳು, ಕಾರ್ಯಕರ್ತ ಪದೇ ಪದೇ ಗ್ರಾಮಗಳ ಭೇಟಿಯಿಂದಾಗಿ 15 ದಿನಗಳಲ್ಲಿ ಕೆ.ಆರ್.ಪೇಟೆಯಲ್ಲಿ ಕಮಲ ಅರಳಲು ಸಾಧ್ಯವಾಯಿತು. 2018ರ ಪ್ರಚಾರದ ವೇಳೆ ಶಾಸಕ ಪ್ರೀತಮ್ ಗೌಡ ಪರವಾಗಿ ಕಾರ್ಯನಿರ್ವಹಿಸಿದ್ದ ಹಾಸನದ ಕಾರ್ಯಕರ್ತರನ್ನು ಈ ಬಾರಿ 34 ಪಂಚಾಯತ್ ಗಳಲ್ಲಿ ನಿಯೋಜನೆಗೊಳಿಸಲಾಗಿತ್ತು. ಪ್ರತೀ ಗ್ರಾಮ ಪಂಚಾಯತಿಗೂ ಒಬ್ಬೊಬ್ಬ ಹಾಸನದ ಬಿಜೆಪಿ ಕಾರ್ಯಕರ್ತನನ್ನು ನಿಯೋಜನೆಗೊಳಿಸಲಾಗಿತ್ತು. 15 ದಿನಗಳ ಸುಧೀರ್ಘ ಕಾಲ ಈ ಕಾರ್ಯಕರ್ತರು ಶ್ರಮ ಪಟ್ಟಿದ್ದರು. 

ಮಹಿಳೆಯರ ಮನವೊಲಿಸಲು ಪ್ರತೀ ಗ್ರಾಮದ ದೇಗುಲಗಳಲ್ಲಿ ಹರಿಶಿಣ-ಕುಂಕುಮವನ್ನು ನೀಡಲಾಗಿತ್ತು. ಪ್ರತೀ ನಿತ್ಯ ಊಟ ಹಾಗೂ ರಾತ್ರಿ ಊಟಗಳನ್ನು ಆಯೋಜನೆ ಮಾಡಲಾಗುತ್ತಿತ್ತು. ಜೆಡಿಎಸ್ ಖರ್ಚು ಮಾಡಿದ್ದಕ್ಕಿಂತರೂ ಶೇ.25ರಷ್ಟು ಹೆಚ್ಚು ಬಿಜೆಪಿ ಖರ್ಚು ಮಾಡಿತ್ತು. ಪ್ರೀತಮ್ ಹಾಗೂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರ ಕೆಲ ತಂತ್ರಗಳನ್ನೂ ಬಳಕೆ ಮಾಡಲಾಗಿತ್ತು. ಮಂಡ್ಯ ಹೆಮ್ಮೆಗಾಗಿ ಪ್ರತೀ ಗ್ರಾಮದಲ್ಲಿಯೂ ಸಭೆಗಳನ್ನು ನಡೆಸಲಾಗಿತ್ತು. 

ಸಮುದಾಯಗಳ ನಡುವೆ ಹೆಚ್.ಡಿ.ದೇವೇಗೌಡ ಕುಟುಂಬ ನಡೆಸಿದ್ದ ದ್ವೇಷದ ರಾಜಕೀಯವನ್ನು ಘೋಷಣಾವಾಕ್ಯಗಳಲ್ಲಿ ಪ್ರದರ್ಶಿಸಲಾಗಿತ್ತು. ಇದರಿಂದ ಒಕ್ಕಲಿಗರ 93,000, ಲಿಂಗಾಯತರ 15,000 ಹಾಗೂ ಹಿಂದುಳಿದ ವರ್ಗಗಳ ಜನರ ಮತಗಳು ಈ ಬಾರಿ ಬಿಜೆಪಿ ಪರವಾದವು. ಈ ಬಾರಿಯ ಚುನಾವಣೆಯಲ್ಲಿ ಶೇ.80ರಷ್ಟು ಮಹಿಳೆಯರು ಬಿಜೆಪಿಗೆ ಮತ ನೀಡಿದ್ದಾರೆ. ಶೇ.50ರಷ್ಟು ಯಶಸ್ಸನ್ನು ಪಕ್ಷ ಕಂಡಿದೆ. ಪಕ್ಷಕ್ಕೆ ಮತಹಾಕಿದ ಶೇ.25 ರಷ್ಟು ಮತದಾರರು 50ರಷ್ಟು ವಯಸ್ಸಿನ ಅಂತರವುಳ್ಳವರಾಗಿದ್ದಾರೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com