ಒಕ್ಕಲಿಗರು ಈಗಲೂ ನಿಮ್ಮೊಂದಿಗಿದ್ದಾರೆ: ದೇವೇಗೌಡ ಮನೆಗೇ ತೆರಳಿ ಸಮಾಧಾನ ಹೇಳಿದ ಚುಂಚಶ್ರೀಗಳು

15 ವಿಧಾನಸಭಾ ಕ್ಷೇತ್ರಗಳ ಉಚುನಾವೆಯಲ್ಲಿ ಜೆಡಿಎಸ್ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಅವರನ್ನು ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಭೇಟಿಯಾಗಿ ಸಮಾಧಾನ ಹೇಳಿದರು. 
ದೇವೇಗೌಡ
ದೇವೇಗೌಡ

ಬೆಂಗಳೂರು: 15 ವಿಧಾನಸಭಾ ಕ್ಷೇತ್ರಗಳ ಉಚುನಾವೆಯಲ್ಲಿ ಜೆಡಿಎಸ್ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಅವರನ್ನು ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಭೇಟಿಯಾಗಿ ಸಮಾಧಾನ ಹೇಳಿದರು. 

ಮಂಗಳವಾರ ಮಧ್ಯಾಹ್ನ ಪದ್ಮನಾಭ ನಗರದಲ್ಲಿನ ನಿವಾಸಕ್ಕೆ ತೆರಳಿದ ಸ್ವಾಮೀಜಿಗಳು ಗೌಡರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಒಕ್ಕಲಿಗರೂ ಈಗಲೂ ನಿಮ್ಮೊಂದಿಗಿದ್ದಾರೆಂದು ಆತ್ಮಸ್ಥೈರ್ಯ ತುಂಬಿದರು. 

ಉಪಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದ್ದು, ತನ್ನ ಹಿಡಿತದಲ್ಲಿದ್ದ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇದರಿದ ದೇವೇಗೌಡ ತೀವ್ರ ಬೇಸರಗೊಂಡಿದ್ದರು. 

ಈ ಬಗ್ಗೆ ಮಾಹಿತಿ ಪಡೆದ ನಿರ್ಮಲಾನಂದನಾಥ ಸ್ವಾಮೀಜಿಗಳು, ದೇವೇಗೌಡ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ರಾಜ್ಯ ರಾಜಕೀಯದಲ್ಲಾದ ಬೆಳವಣಿಗೆಗಳಿಂದ ಜೆಡಿಎಸ್ ಕಂಗಾಲಾಗಿದ್ದ, ಪಕ್ಷ ಶೀಘ್ರದಲ್ಲಿಯೇ ಸೆ ನಡೆಸಿ ರಾಜಕೀಯ ಬೆಳವಣಿಗೆಗಳ ಕುರಿತು ಆತ್ಮಾವಲೋಕನ ಮಾಡಲಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com