ವಿರೋಧಿ ಬಣಕ್ಕೆ ಜಂಟಿ ಸವಾಲಾದ ಅಪ್ಪ-ಮಗ!

ಇತ್ತೀಚೆಗೆ ನಡೆ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಸದ್ಯಕ್ಕೆ ಸರ್ಕಾರಕ್ಕೆ ಯಾವುದೇ ತೊಂದರೆಗಳಿಲ್ಲ ಎನ್ನಲಾಗಿದೆ.
ವಿರೋಧಿ ಬಣಕ್ಕೆ ಜಂಟಿ ಸವಾಲಾದ ಅಪ್ಪ-ಮಗ!

ಬೆಂಗಳೂರು: ಇತ್ತೀಚೆಗೆ ನಡೆ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಸದ್ಯಕ್ಕೆ ಸರ್ಕಾರಕ್ಕೆ ಯಾವುದೇ ತೊಂದರೆಗಳಿಲ್ಲ ಎನ್ನಲಾಗಿದೆ.

ಆದರೆ ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ನಳಿನ್ ಕುಮಾರ್ ಕಟೀಲ್ ಹಿಂದಿಗಿಂತ ಹೆಚ್ಚು ಸಕ್ರಿಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಬ್ಬರ ಎಂದರು ಎರಡು ಸವಾಲುಗಳಿವೆ,  ಒಂದು ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ.

ರಾಜ್ಯ ರಾಜಕೀಯದಲ್ಲಿ ತಾವೇ ಪ್ರಬಲ ಹಾಗೂ ಸುಪ್ರೀಂ ಎಂಬುದಾಗಿ ಸಿಎಂ ಯಡಿಯೂರಪ್ಪ ತಮ್ಮ ವಿರೋಧಿಗಳಿಗೆ ಈಗಾಗಲೇ ಪ್ರಬಲ ಸಂದೇಶ ರವಾನಿಸಿದ್ದಾರೆ.  ಜೊತೆಗೆ ತಮ್ಮ ಉತ್ತರಾಧಕಾರಿಯಾಗಿ ಪುತ್ರ ವಿಜಯೇಂದ್ರ ನನ್ನು ರಾಜ್ಯ ರಾಜಕಾರಣದಲ್ಲಿ ತರುವುದಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ.

ಯಡಿಯೂರಪ್ಪ ಅವರು ನೆಲಕಚ್ಚುವುದನ್ನು ನೋಡಲು ಬಯಸಿದ್ದ ಅವರ ವಿರೋಧಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಸಿಎಂ ತಿರುಗೇಟು ನೀಡಿದ್ದಾರೆ.  ಸದ್ಯ ಯಡಿಯೂರಪ್ಪ ಮುಂದೆ ಎರಡು ಸವಾಲುಗಳಿವೆ, ಒಂದು ನಿರ್ಲಕ್ಷ್ಯಕ್ಕೊಳಗಾಗಿದ್ದ ಲಿಂಗಾಯತ ನಾಯಕರನ್ನು ಮುಂಚೂಣಿಗೆ ತರುವುದು ಹಾಗೂತಮ್ಮ ಮಗನ ರಾಜಕೀಯ ಭವಿಷ್ಯ ಭದ್ರಗೊಳಿಸುವುದು.

ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಕೆಆರ್ ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಲೈಮ್ ಲೆಟ್ ಗೆ ಬಂದಿದ್ದಾರೆ.  ಒಕ್ಕಲಿಗರ ಪ್ರಾಬಲ್ಯವಿರು ಜೆಡಿಎಸ್ ಭದ್ರ ಕೋಟೆಗೆ ವಿಜಯೇಂದ್ರ ಲಗ್ಗೆ ಇಟ್ಟಿದ್ದಾರೆ,  ಹೀಗಾಗಿ ಯಡಿಯೂರಪ್ಪ ಬಹಳ ತಂತ್ರಗಾರಿಕೆಯಿಂದ ಮಗನನ್ನು ತಮ್ಮ ಉತ್ತರಾಧಿಕಾರಿಯಾಗಿಸಲು ಹವಣಿಸುತ್ತಿದ್ದಾರೆ, ಲಿಂಗಾಯತ ಸಮುದಾಯ ರಾಜಕೀಯದಲ್ಲಿ ಹೊಸ ಮುಖ ತರಲು ಅಣಿಯಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊದಲಿಗೆ ಸಂಪುಟ ವಿಸ್ತರಣೆಯಾಗಲಿ, ಅದರಲ್ಲಿ ನಡೆಯುವ ಒಂದ ಸಣ್ಣ ತಪ್ಪನ್ನು ಹಿಡಿದು ಆಂತರಿಕ ಜಗಳಕ್ಕೆ ಮತ್ತಷ್ಟು ತುಪ್ಪ ಸುರಿದು, ಯಡಿಯೂರಪ್ಪ ಅವರನ್ನು ಪಕ್ಕಕ್ಕೆ ಸರಿಸಲು ಕಟೀಲ್ ಕಾಯುತ್ತಿದ್ದಾರೆ,  ಯಡಿಯೂರಪ್ಪ ಅಧಿಕಾರದಲ್ಲಿರುವವರೆಗೂ ತಮ್ಮ ಪುತ್ರ  ಸೇಫ್ ಆಗಿರುತ್ತಾರೆ, ಅವರ ರಾಜಕೀಯ ಭವಿಷ್ಯಕ್ಕೆಯಾವುದೇ ಬೆದರಿಕೆಯಿಲ್ಲ. ಉಪ ಚುನಾವಣೆ ಫಲಿತಾಂಶದ ವಿಜಯೋತ್ಸವವನ್ನು ಕಾರ್ಯಕರ್ತರು ಯಡಿಯೂರಪ್ಪ ಅವರಿಗೆ ಮೀಸಲಿಟ್ಟು ಕಟೀಲ್ ಅವರಿಗೆ ಯಾವುದ್ ಕ್ರೆಡಿಟ್ ನೀಡಿಲ್ಲ,  ಜೊತೆಗೆ ಪ್ರಚಾರದ ವೇಳೆ ಪಾಲ್ಗೋಳ್ಳುವಂತೆ ನಳಿನ್ ಕುಮಾರ್ ಕಟೀಲ್ ಅವರಿಗೆ ಯಾರೂ ಡಿಮ್ಯಾಂಡ್ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.

ಕೇಂದ್ರದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಕಡಿಮೆಗೊಳಿಸಿ , ತಮ್ಮ ಅಧಿಪತ್ಯ ಸ್ಥಾಪಿಸಲು ಸಂತೋಷ್ ಮತ್ತು ಕಟೀಲ್ ಎಲ್ಲಾ ರೀತಿಯ ತಂತ್ರಗಾರಿಕೆ ನಡೆಸುತ್ತಿದ್ದಾರೆ, ಜೊತೆಗೆ ವಿಜಯೇಂದ್ರ ಅವರು ತಮ್ಮ ಗುರಿಗೆ ಅಡ್ಡವಾಗುತ್ತಾರೆ ಎಂಬ ಆತಂಕ ಇಬ್ಬರಿಗೂ ಎದುರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com