ವರ್ಕ್ಔಟ್ ಆಯ್ತು ಬಿಎಸ್ ವೈ ತಂತ್ರ: ಒಬ್ಬ ಮಗ ಜನ್ಮ ಭೂಮಿಗೆ, ಮತ್ತೊಬ್ಬ ಕರ್ಮ ಭೂಮಿಗೆ?

ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಸರ್ಕಾರದ ಪೌರತ್ವ ಮಸೂದೆ ಗೆಲ್ಲಿಸಲು ಸಂಸತ್ ನಲ್ಲಿ ಮತ ಹಾಕಿದ್ದಾರೆ, ಮತ್ತೊಬ್ಬ ಮಗ ವಿಜಯೇಂದ್ರ ಒಕ್ಕಲಿಗರ ಪ್ರಬಲ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ವಿಜಯ ಪತಾಕೆ ಹಾರಿಸಿದ್ದಾರೆ.
ಯಡಿಯೂರಪ್ಪ ಮತ್ತು ಪುತ್ರರು
ಯಡಿಯೂರಪ್ಪ ಮತ್ತು ಪುತ್ರರು

ಬೆಂಗಳೂರು: ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಸರ್ಕಾರದ ಪೌರತ್ವ ಮಸೂದೆ ಗೆಲ್ಲಿಸಲು ಸಂಸತ್ ನಲ್ಲಿ ಮತ ಹಾಕಿದ್ದಾರೆ, ಮತ್ತೊಬ್ಬ ಮಗ ವಿಜಯೇಂದ್ರ ಒಕ್ಕಲಿಗರ ಪ್ರಬಲ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ವಿಜಯ ಪತಾಕೆ ಹಾರಿಸಿದ್ದಾರೆ.

ಶಿವಮೊಗ್ಗದಿಂದ ಕೆ.ಆರ್ ಪೇಟೆಗೆ ಸುಮಾರು 110 ಕೀಮಿ,  ಈ ಎರಡು ಕ್ಷೇತ್ರಗಳ ಮೇಲೆ ಸಿಎಂ ಯಡಿಯೂರಪ್ಪ ಅವರಿಗೆ ವಿಶೇಷ ಪ್ರೀತಿ, ಒಂದು ಜನ್ಮ ಭೂಮಿ, ಮತ್ತೊಂದು ಕರ್ಮ ಭೂಮಿ,  ಮಂಡ್ಯದ ಬೂಕನಕೆರೆಯಲ್ಲಿ ಜನಿಸಿದ ಯಡಿಯೂರಪ್ಪ ಶಿವಮೊಗ್ಗದಲ್ಲಿ ರಾಜಕೀಯ  ಭವಿಷ್ಯ ಕಂಡುಕೊಂಡರು.

ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ನೇತತ್ವದಲ್ಲಿ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿದೆ.. ಒಕ್ಕಲಿಗ ಸಮುದಾಯದ ಹಾಸನ ಶಾಸಕ ಪ್ರೀತಂಗೌಡರನ್ನು ಜತೆಯಾಗಿಸಿಕೊಂಡು ಲಿಂಗಾಯತ ಮತಗಳ ಜತೆಗೆ ಒಕ್ಕಲಿಗ ಮತಗಳನ್ನೂ ಬಿಜೆಪಿ ಪರ ಚಲಾವಣೆಯಾಗುವಂತೆ ಕಾರ್ಯತಂತ್ರ ರೂಪಿಸಿ ಜೆಡಿಎಸ್‌ ಭದ್ರಕೋಟೆ ಛಿದ್ರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಕೆ.ಆರ್‌.ಪೇಟೆಯಲ್ಲಿ ವಾರ ಕಾಲ ವಾಸ್ತವ್ಯ ಹೂಡಿ ಸೋಲಬಹುದು ಎಂಬ ಆತಂಕವಿದ್ದ ಕ್ಷೇತ್ರವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಜಯೇಂದ್ರ ಅವರದ್ದು ಪಾತ್ರ ಪ್ರಮುಖ. ಈ ಗೆಲುವು ಹಳೇ ಮೈಸೂರು ಭಾಗದಲ್ಲಿ ತಮ್ಮ ಪುತ್ರ ನಾಯಕನಾಗಿ ಹೊರ ಹೊಮ್ಮಬೇಕು ಎಂಬ ಬಿಎಸ್‌ವೈ ಬಯಕೆಯ ಮೆಟ್ಟಿಲು ಹತ್ತಲು ಅವಕಾಶ ದೊರೆತಂತಾಗಿದೆ.

ಪೇಟೆಯಲ್ಲಿ ಗೆದ್ದು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ತನ್ನ ಖಾತೆ ತೆರೆಯುವಲ್ಲಿ ಪ್ರಮುಖ ಪಾತ ವಹಿಸಿದ್ದು ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ. ಅಲ್ಲಿಗೆ ಅವರ ಕೆಲಸ ಮುಗಿದಿಲ್ಲ. ವಿಜಯೇಂದ್ರ ಅವರ ನಿಜವಾದ ಆಟ ಆರಂಭವಾಗಿದೆಯಷ್ಟೆ

ತಮ್ಮ ಹುಟ್ಟೂರು ಕೆ.ಆರ್.ಪೇಟೆಯಲ್ಲಿ ಗೆಲ್ಲಬೇಕೆಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸು ನನಸಾಗಿರಬಹುದು. ಜೆಡಿಎಸ್ ಭದ್ರ ಕೋಟೆಯನ್ನು ಒಡೆದು ಹಾಕಿದ್ದೇವೆ ಎಂದು ಬಿಜೆಪಿಯವರು ಬೀಗಬಹುದು. ಆದರೆ, ಕೆ.ಆರ್.ಪೇಟೆಯಲ್ಲಿ ನಿಜವಾಗಿ ಗೆದ್ದಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ.

ಕ್ಷೇತ್ರದ ಉಸ್ತುವಾರಿಯಾಗಿ ನಾರಾಯಣಗೌಡರನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದ ವಿಜಯೇಂದ್ರ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ. ಈ ಹೋರಾಟದಲ್ಲಿ ವಿಜಯೇಂದ್ರ ಜತೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರ ಸಹಕಾರ ಇದ್ದರೂ ಗೆಲುವಿನ ಒಟ್ಟಾರೆ ಶ್ರೇಯ ಸಲ್ಲಬೇಕಾಗಿರುವುದು ವಿಜಯೇಂದ್ರ ಹೂಡಿದ ಕಾರ್ಯತಂತ್ರಕ್ಕೆ.

ಬಿಜೆಪಿಗೆ ಠೇವಣಿಯೇ ಕಷ್ಟ ಎಂಬಂತ ಮಂಡ್ಯದಲ್ಲಿ ಬಿಜೆಗೆ ಗೆದ್ದಿದೆ.  ಶಿಕಾರಿಪುರದಲ್ಲಿ ಹೇಗೂ ತಂದೆ ಯಡಿಯೂರಪ್ಪ ಇದ್ದಾರೆ. ಸಹೋದರ ಬಿ.ವೈ.ರಾಘವೇಂದ್ರ ಇದ್ದಾರೆ. ಇವರ ಬಳಿಕ ಕುಟುಂಬದ ಇನ್ಯಾರಾದರೂ ಸದಸ್ಯರನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವುದು ಕಷ್ಟವೇನೂ ಅಲ್ಲ. ರಾಘವೇಂದ್ರ ಸಂಸದರಾಗಿರುವುದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕುಟುಂಬದ ಹಿಡಿತ ಗಟ್ಟಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ರಾಜಕೀಯದಲ್ಲಿ ಬೆಳೆಯಬೇಕು ಎಂಬುದು ವಿಜಯೇಂದ್ರ ಅವರ ಅಲೋಚನೆಯಾಗಿದೆ. ಈ ಕಾರಣಕ್ಕಾಗಿಯೇ ಅವರು ತಮ್ಮ ತಾತನ ಊರಾದ ಕೆ.ಆರ್.ಪೇಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com