ಡಿಸಿಎಂ ಹುದ್ದೆ ಬೇಕೋ, ಬೇಡ್ವೋ: ಬಿಜೆಪಿಯಲ್ಲಿ ಶುರುವಾಯ್ತು ಆಂತರಿಕ ಕಿತ್ತಾಟ

ಚುನಾವಣೆ ಗೆಲುವು ಬಳಿಕ ಸರ್ಕಾರವನ್ನು ಸುಭದ್ರಗೊಳಿಸಿದ ಬಳಿಕ ಇದೀಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆಯ ತಲೆನೋವು ಶುರುವಾಗಿದೆ. ಉಪಮುಖ್ಯಮಂತ್ರಿ ವಿಚಾರ ಕುರಿತು ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ ಶುರುವಾಗಿದ್ದು, ಸಂಪುಟ ವಿಸ್ತರಣೆ ಬಿಎಸ್'ವೈಗೆ ಹಗ್ಗದ ಮೇಲಿನ ನಡಿಗೆಯಂತೆ ಪರಿಣಮಿಸಿದೆ. 
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಚುನಾವಣೆ ಗೆಲುವು ಬಳಿಕ ಸರ್ಕಾರವನ್ನು ಸುಭದ್ರಗೊಳಿಸಿದ ಬಳಿಕ ಇದೀಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆಯ ತಲೆನೋವು ಶುರುವಾಗಿದೆ. ಉಪಮುಖ್ಯಮಂತ್ರಿ ವಿಚಾರ ಕುರಿತು ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ ಶುರುವಾಗಿದ್ದು, ಸಂಪುಟ ವಿಸ್ತರಣೆ ಬಿಎಸ್'ವೈಗೆ ಹಗ್ಗದ ಮೇಲಿನ ನಡಿಗೆಯಂತೆ ಪರಿಣಮಿಸಿದೆ. 

ಬಿಜೆಪಿಯಲ್ಲಿರುವ ನಾಯಕರೇ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಸಮ್ಮತಿ, ಅಸಮ್ಮತಿ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಕೆಲವರು ಡಿಸಿಎಂ ಹುದ್ದೆ ಬೇಕೆಂದು ಹೇಳುತ್ತಿದ್ದರೆ, ಮತ್ತೆ ಕೆಲ ನಾಯಕರು ಸಮರ್ಥ ಮುಖ್ಯಮಂತ್ರಿಗಳೇ ಇರುವಾಗ ಉಪ ಮುಖ್ಯಮಂತ್ರಿ ಹುದ್ದೆ ಏಕೆ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ. 

ರಾಜ್ಯದಲ್ಲಿ ಈಗಾಗಲೇ ಗೋವಿಂದ ಕಾರಜೋಳ, ಸಿಎನ್.ಅಶ್ವತ್ ನಾರಾಯಣ ಮತ್ತು ಲಕ್ಷ್ಮಣ್ ಸವದಿ ಸೇರಿ ಮೂವರು ಉಪ ಮುಖ್ಯಮಂತ್ರಿಗಳಿದ್ದಾರೆ.

ಈ ನಡುವೆ ಜಾರ್ಖಾಂಡ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಉನ್ನತ ನಾಯಕರು ಚುನಾವಣಾ ಪ್ರಚಾರಗಳತ್ತ ಕಾರ್ಯಮಗ್ನರಾಗಿರುವುದರಿಂದ ಮುಖ್ಯಮಂತ್ರಿಗಳಿಗೆ ಕೊಂಚ ಉಸಿರಾಡಲು ಕಾಲಾವಕಾಶ ಸಿಕ್ಕಂತಾಗಿದೆ. ಈ ನಡುವೆ ಯಡಿಯೂರಪ್ಪ ಅವರು ರಾಜಧಾನಿ ದೆಹಲಿಗೆ ಭೇಟಿ ನೀಡಲಿದ್ದು, ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಇದಲ್ಲದೆ ಮತ್ತೆರಡು ಉಪ ಮುಖ್ಯಮಂತ್ರಿ ಹುದ್ದೆ ಬೇಕೋ ಅಥವಾ ಬೇಡವೋ ಎಂಬುದರ ಕುರಿತಂತೆಯೂ ಯಡಿಯೂರಪ್ಪ ಅವರು ಚರ್ಚೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. 

ಒಂದು ವೇಳೆ ಮತ್ತೆರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದ್ದೇ ಆದರೆ, ಆ ಸ್ಥಾನವನ್ನು ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರಿಗೆ ನೀಡಲಿದ್ದಾರೆಯೇ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. 

ಈ ನಡುವೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದ್ದು, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ನಿರ್ಧಾರವನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಡಿಸಿಎಂ ಹುದ್ದೆ ಬಗ್ಗೆ ಅಪಸ್ವರಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಶ್ವತ್ಥ್ ನಾರಾಯಣ ಅವರು, ಬೀದಿಯಲ್ಲಿ ನಿಂತು ಮಾತನಾಡುವುದನ್ನು ಜನರು ನಿಲ್ಲಿಸಬೇಕು. ಮಾತನಾಡುವುದೇನೇ ಇದ್ದರೂ ಪಕ್ಷದ ಕಚೇರಿಯಲ್ಲಿ ಬಂದು ಮಾತನಾಡಬೇಕು ಎಂದು ಹೇಳಿದ್ದಾರೆ. 

ಅಶ್ವತ್ಥ್ ನಾರಾಯಣ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ರೇಣುಕಾಚಾರ್ಯ ಅವರು, 3 ಅಲ್ಲದಿದ್ದರೆ 33 ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿಕೊಳ್ಳಲಿ. ನನಗೆ ಎಚ್ಚರಿಕೆ, ತಿಳುವಳಿಕೆ ನೀಡಲು ಹೈಕಮಾಂಡ್ ಿದೆ. ಅಶ್ವತ್ಥ್ ನಾರಾಯಣ್ ಅವರು ನನಗೆ ನೀತಿ ಪಾಠ ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com