ಎಲ್ಲಿಯೂ ಸಲ್ಲದ  'ಕೈ ನಾಯಕ: ದಾರಿ ಯಾವುದಯ್ಯಾ ರೋಷನ್ ಬೇಗ್ ಗೆ?

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಗೆದ್ದ 13 ಶಾಸಕರು ಭಾನುವಾರ, ಪ್ರಮಾಣ ವಚನ ಸ್ವೀಕರಿಸಿದರು, ಕಾಂಗ್ರೆಸ್ ಹಿರಿಯ ನಾಯಕ ಹಾಗೂ 8 ಬಾರಿ ಶಾಸಕರಾಗಿದ್ದ ರೋಷನ್ ಬೇಗ್ ಗೆ ಸದ್ಯಕ್ಕೆ ಯಾ ಮಣೆ ಹಾಕುತ್ತಿಲ್ಲ.
ರೋಷನ್ ಬೇಗ್
ರೋಷನ್ ಬೇಗ್

ಬೆಂಗಳೂರು:  ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಗೆದ್ದ 13 ಶಾಸಕರು ಭಾನುವಾರ, ಪ್ರಮಾಣ ವಚನ ಸ್ವೀಕರಿಸಿದರು,  ಕಾಂಗ್ರೆಸ್ ಹಿರಿಯ ನಾಯಕ ಹಾಗೂ 8 ಬಾರಿ ಶಾಸಕರಾಗಿದ್ದ ರೋಷನ್ ಬೇಗ್ ಗೆ ಸದ್ಯಕ್ಕೆ ಯಾ ಮಣೆ ಹಾಕುತ್ತಿಲ್ಲ.

ಮಾತೃಪಕ್ಷ ಕಾಂಗ್ರೆಸ್‌ನಿಂದ ಕಾಲ್ಕಿತ್ತ ಮಾಜಿ ಸಚಿವ ಆರ್‌ ರೋಷನ್‌ ಬೇಗ್‌ಗೆ ಬಿಜೆಪಿಯಲ್ಲಿ ನಿರೀಕ್ಷಿತ ಸ್ವಾಗತ ಸಿಗದೆ ಅವರ ರಾಜಕೀಯ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ. ಪರಿಣಾಮ ಉಪಚುನಾವಣೆ  ಫಲಿತಾಂಶದ ಬಳಿಕ ಮೌನಕ್ಕೆ ಶರಣಾಗಿದ್ದಾರೆ.  

ಶಿವಾಜಿನಗರದಲ್ಲಿ ಶಾಸಕ ರಿಜ್ವಾನ್ ಅರ್ಷದ್ ರೋಷನ್ ಬೇಗ್ ಅವರನ್ನು ಕ್ಷೇತ್ರದಿಂದ ಹೊರ ಹಾಕಿದ್ದಾರೆ. ಸಿದ್ದರಾಮಯ್ಯ  ಮತ್ತು ದಿನೇಶ್ ಗುಂಡೂರಾವ್  ಅರ್ಷದ್ ಅವರಿಗೆ ಉಪ ಚುನಾವಣೆಯಲ್ಲಿ ಮಣೆ ಹಾಕಿದ್ದರು.  ಜೊತೆಗೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರ ವಿರುದ್ಧ ಹರಿಹಾಯ್ದಿದ್ದರು. 

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆದ್ದಿದ್ದಕ್ಕಾಗಿ ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದರು. ಈ ಸಂಬಂಧ ಅವರಿಗೆ ಶೋಕಾಸ್ ನೋಟಿಸ್ ಕೂಡ  ನೀಡಲಾಗಿತ್ತು, ಆದರೆ ನೊಟೀಸ್ ಗೆ ಉತ್ತರಿಸಿದ ಕಾರಣ ಅವರನ್ನು ಪಕ್ಷದಿಂದ ಅಮಾನತು ಗೊಳಿಸಲಾಗಿತ್ತು. 

ಕಾಂಗ್ರೆಸ್‌ನ ಶಾಸಕರೊಟ್ಟಿಗೆ ರಾಜೀನಾಮೆ ನೀಡಿ ಅನರ್ಹ ಶಾಸಕರೆಲ್ಲ ಬಿಜೆಪಿಗೆ ಸೇರ್ಪಡೆಯಾದರೂ, ಕೊನೇ ಕ್ಷಣದಲ್ಲಿ ಬೇಗ್‌ ಪಾಲಿಗೆ ಬಿಜೆಪಿ ಬಾಗಿಲು ಮುಚ್ಚಿತು ಮತ್ತು ಉಪಚುನಾವಣೆಯಲ್ಲಿ ಟಿಕೆಟ್‌ ಕೂಡ ಸಿಗಲಿಲ್ಲ. ಬಿಜೆಪಿ ಸೇರಲಾಗದೆ, ವಿಶ್ವಾಸದ್ರೋಹಕ್ಕಾಗಿ ಮಾತೃಪಕ್ಷ ಕಾಂಗ್ರೆಸ್‌ ಪಕ್ಷಕ್ಕೂ ಮರಳಲಾಗದೆ ಬೇಗ್‌ ಜೆಡಿಎಸ್‌ ಬಾಗಿಲು ಬಡಿದಿದ್ದರು. ಆದರೆ, ಜನತಾ ಪರಿವಾರದಲ್ಲಿ ಜತೆಗಿದ್ದ ಈ ಹಳೇ ಸ್ನೇಹಿತನ ಸ್ನೇಹಹಸ್ತಕ್ಕೆ ಜೆಡಿಎಸ್‌ ನಾಯಕತ್ವ ಕೂಡ ಸೊಪ್ಪು ಹಾಕಲಿಲ್ಲ.

ಕೆ.ಎಚ್ ಮುನಿಯಪ್ಪ ಕೂಡ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದರು. ಆದರೆ ಅವರು ಮಾಧ್ಯಮಗಳ ಮುಂದೆ ಎಂದಿಗೂ ಹೋಗಿರಲಿಲ್ಲ, ಆದರೆ ರೋಷನ್ ಬೇಗ್ ಮಾಧ್ಯಮಗಳ ಮುಂದೆ ಹೋಗಿ ಎಡವಟ್ಟು ಮಾಡಿಕೊಂಡರು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. 

ಈಗ ಸದ್ಯ ಸಿದ್ದರಾಮಯ್ಯ ಮತ್ತು ಗುಂಡೂರಾವ್ ಇಬ್ಬರು ರಾಜಿನಾಮೆ ನೀಡಿದ್ದಾರೆ, ಹೀಗಾಗಿ ವಾಪಸ್  ಕಾಂಗ್ರೆಸ್ ಗೆ ತೆರಳುವ ಸಾಧ್ಯತೆಯಿದೆ. ರೋಷನ್ ಬೇಗ್ ವೇಣುಗೋಪಾಲ್ ಅವರನ್ನು ಯಾವತ್ತೂ ನಿಂದಿಸಿಲ್ಲ,  ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಅಷ್ಟಾಗಿ ಕಟ್ಟು ನಿಟ್ಟಿನ ನೀತಿ ನಿಯಮಗಳನ್ನು ಪಾಲನೆ ಮಾಡುವುದಿಲ್ಲ, ಹೀಗಾಗಿ ರೋಷನ್ ಬೇಗ್ ಮತ್ತೆ ಕಾಂಗ್ರೆಸ್ ಗೆ ವಾಪಸ್ ಬಂದರೂ ಆಶ್ಟರ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com