ವಿದ್ಯಾರ್ಥಿಗಳು, ಯುವಕರಿಗೆ ಅರ್ಬನ್ ನಕ್ಸಲೈಟ್ ಎಂಬ ಪಟ್ಟ ಕಟ್ಟಿದ್ದೀರಿ: ಡಿ.ಕೆ.ಶಿವಕುಮಾರ್

ವಿದ್ಯಾರ್ಥಿಗಳು, ಯುವಕರಿಗೆ ಅರ್ಬನ್ ನಕ್ಸಲೈಟ್ ಎಂಬ ಪಟ್ಟ ಕಟ್ಟಿದ್ದೀರಿ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿದ್ಯಾರ್ಥಿಗಳು, ಯುವಕರಿಗೆ ಅರ್ಬನ್ ನಕ್ಸಲೈಟ್ ಎಂಬ ಪಟ್ಟ ಕಟ್ಟಿದ್ದೀರಿ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾಂಗ್ರೆಸ್ ಪಕ್ಷದ 134ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಹಾಗೂ ಸದ್ಬಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಸಣ್ಣ ರಾಜ್ಯವಾದ ಜಾರ್ಖಂಡ್ 5 ಹಂತಗಳಲ್ಲಿ ಚುನಾವಣೆ ನಡೆಸಿದರು. ಪ್ರಧಾನಿ ಹಾಗೂ ಬಿಜೆಪಿ ಘಟನಾನುಘಟಿ ನಾಯಕರು ಆರೇಳು ಪ್ರಚಾರ ಸಭೆ ನಡೆಸಿದರು.ಆದರೆ ಜನ ಬಿಜೆಪಿಯನ್ನು ಬೆಂಬಲಿಸಲಿಲ್ಲ. ಬಿಜೆಪಿಯ ಅಂತ್ಯದ ಆರಂಭವಾಗಿದೆ.ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಜನ ಮನ್ನಣೆ ನೀಡಲಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಯುವಕರು, ವಿದ್ಯಾರ್ಥಿಗಳಿಗೆ ಅರ್ಬನ್ ನಕ್ಸಲೈಟ್ಸ್ ಎಂದು ಹಣೆಪಟ್ಟಿಕಟ್ಟಿದ್ದೀರಿ. ನಮ್ಮ ಹೋರಾಟ ನಾವು ಮಾಡುತ್ತೇವೆ.ಬಿಜೆಪಿಗೆ ಲೋಕಸಭಾ ಚುನಾವಣೆ ಯಲ್ಲಿ 300 ಸ್ಥಾನ ಗೆಲ್ಲಿಸಿದರೆಂದು ಕಾಂಗ್ರೆಸ್ ಪಕ್ಷದವರು ಹೆದರಬೇಕಿಲ್ಲ.ನಮ್ಮ ಶಕ್ತಿ ತೋರಿಸ ಬೇಕಾಗಿದೆ. ಜಾರ್ಖಂಡ್ ನಂತಹ ಚಿಕ್ಕ ರಾಜ್ಯವನ್ನು ಐದು ಹಂತ ದಲ್ಲಿ ಚುನಾವಣೆ ನಡೆಸಿದರು.ಪ್ರಧಾನಿ ಮೋದಿ ಅವರು ಆರೇಳು ಪ್ರಚಾರ ಸಭೆ ನಡೆಸಿದರು.ಆದರೆ ಜನ ಬೆಂಬಲಿಸಲಿಲ್ಲ.ಬಿಜೆಪಿಯ ಅಂತ್ಯದ ಆರಂಭವಾಗಿದೆ. 

ನಮಗೆ ಮತ್ತೆ ಜನ ಮನ್ನಣೆ ಸಿಗಲಿದೆ.ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರು ಕಟ್ಟಿದ ದೇಶ ಇದು.ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಜಾರಿಗೆ ತಂದಿರುವ ಕೆಲ ಯೋಜನೆಗಳ ಹೆಸರನ್ನು ಬದಲಿಸುವ ಕೆಲಸ ಮಾಡಿದ್ದಾರೆ.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನಿನ ವಿರುದ್ಧ ಯುವಕರು,ನಾಗರಿಕರು ಹೋರಾಟಮಾಡುತ್ತಿದ್ದಾರೆ.ಅವರ ಕೈ ಬಲಪಡಿಸುವ ಕಾರ್ಯ ಮಾಡೋಣ,ನಿಮ್ಮೆಲ್ಲರ ಆಶೀರ್ವಾದ ನಮಗೆ ಎಂದು ಅವರು ಕಾರ್ಯಕರ್ತರಿಗೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com