ಮಂಡ್ಯದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು: ಮಂದಿನ 3ವರ್ಷ ಬಿಜೆಪಿ ಸರ್ಕಾರದ ಫೋಕಸ್ ಮೈಸೂರಿಗೆ!

ಕೆ.ಆರ್ ಪೇಟೆಯಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಪಕ್ಷವನ್ನು ಮೈಸೂರು ಭಾಗದಲ್ಲಿ ಭದ್ರಪಡಿಸಲು ಮುಂದಾಗಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಕೆ.ಆರ್ ಪೇಟೆಯಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಪಕ್ಷವನ್ನು ಮೈಸೂರು ಭಾಗದಲ್ಲಿ ಭದ್ರಪಡಿಸಲು ಮುಂದಾಗಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಪ್ರವರ್ಧಮಾನಕ್ಕೆ ತರಲು ಮುಂದಿನ ಮೂರು ವರ್ಷಗಳ ಕಾಲ ಅತ್ತವೇ ಗಮನ ಹರಿಸಲಿದೆ,  ಜೊತಗೆ ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ,. ಮೈಸೂರು, ಕೋಲಾರ ಗಳ ಶಾಸಕರನ್ನು ಸಂಪುಟಕ್ಕ ಸೇರಿಸಿಕೊಳ್ಳುವ ಮೂಲಕ ಈ ಕ್ಷೇತ್ರಗಳಲ್ಲಿ ಬಿಜೆಪಿ ಪತಾಕೆಯನ್ನು ಮತ್ತಷ್ಟು ಸದೃಡಗೊಳಿಸಲು ನಿರ್ಧರಿಸಲಾಗಿದೆ.

ಹೀಗಾಗಿ ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್ ಹಾಗೂ ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲು ನಿರ್ಧರಿಸಲಾಗಿದೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಹಾಸದನಲಲ್ಲಿ ಬಿಜೆಪಿ ಅಭ್ಯರ್ಥಿ  ಪ್ರೀತಮ್ ಗೌಡ ಗೆಲುವು ಸಾಧಿಸಿದ್ದರು.  ಹೀಗಾಗಿ ಅವರನ್ನು ಕೆ.ಆರ್ ಪೇಟೆ ವಿಧಾನಸಭೆ ಉಪ ಚುನಾವಣೆಯ ಉಸ್ತುವಾರಿ ನೀಡಲಾಗಿತ್ತು,

ಕೆ.ಆರ್ ಪೇಟೆ ಚುನಾವಣೆ ಗೆಲುವಿನ ಕ್ರೆಡಿಟ್ ತಮ್ಮ ಪುತ್ರ ವಿಜಯೇಂದ್ರ ಹಾಗೂ ಶಾಸಕ ಪ್ರೀತಮ್ ಗೌಡ ಅವರಿಗೆ ಸಲ್ಲಬೇಕು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು.

 ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಪ್ರಾಬಲ್ಯವಿದೆ. ಸಿಎಂ ಯಡಿಯೂರಪ್ಪ ಕೂಡ ಲಿಂಗಯತ ಸಮುದಾ.ಯಕ್ಕೆ ಸೇರಿದವರು, ಜೆಡಿಎಸ್ ಮತ್ತು ಕಾಂಗ್ರೆಸ್ ತವರಿನಲ್ಲಿ ಬಿಜೆಪಿ ಪ್ರಾಬಲ್ಯ ಸ್ಥಾಪಿಸಲು ಹವಣಿಸುತ್ತಿದೆ, ಹಾಸನ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಸಾಧನೆ ಶೂನ್ಯ, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಅಧಿಕವಾಗಿದೆ.

ಮಂಡ್ಯದಲ್ಲಿ ಲೋಕಸಭೆ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿ ಗೆಲುವಿಗೆ ಕಾರಣವಾಗಿತ್ತು. ಉಪ ಚುನಾವಣೆಯಲ್ಲಿ ಮತ್ತೆ ನಾರಾಯಣಗೌಡ ಗೆದ್ದಿರುವುದು  ಬಿಜೆಪಿಯಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ. ಹೀಗಾಗಿ ಈ ಭಾಗಗಳ ಶಾಸಕರಿಗೆ ಕ್ಯಾಬಿನೆಟ್ ನಲ್ಲಿ ಉತ್ತಮ ಸ್ಥಾನಮಾ ನೀಡಿದರೇ ಮುಂಬರು ಚುನಾವಣೆಯಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲಿ  ಸುಮಾರು 20 ಸೀಟ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com