ರಾಜ್ಯಪಾಲರ ಭಾಷಣಕ್ಕೆ ಬಿಜೆಪಿಯಿಂದ ಅಡ್ಡಿ, ಗೈರಾದ 9 ಶಾಸಕರ ಗುಟ್ಟೇನು?

ಬಜೆಟ್ ಅಧಿವೇಶದನಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಜಾರಿಗೊಳಿಸಿದ್ದರೂ ಮೊದಲ ದಿನದ ಕಲಾಪದಿಂದ ದೂರ ಉಳಿದಿದ್ದ ಜೆಡಿಎಸ್ -ಕಾಂಗ್ರೆಸ್ ಸಂಮ್ಮಿಶ್ರ ಸರ್ಕಾರದ 9 ಹಾಗೂ ಬಿಜೆಪಿಯ ಆರು ಶಾಸಕರ ನಡೆ ಕುತೂಹಲ ಮೂಡಿಸಿದೆ
ಆನಂದ್ ಸಿಂಗ್
ಆನಂದ್ ಸಿಂಗ್
ಬೆಂಗಳೂರು: ಬಜೆಟ್ ಅಧಿವೇಶನದಲ್ಲಿ  ಕಡ್ಡಾಯವಾಗಿ ಹಾಜರಿರುವಂತೆ  ವಿಪ್ ಜಾರಿಗೊಳಿಸಿದ್ದರೂ ಕ್ಯಾರೇ ಅನ್ನದ  ಜೆಡಿಎಸ್ -ಕಾಂಗ್ರೆಸ್ ಸಂಮ್ಮಿಶ್ರ ಸರ್ಕಾರದ 9 ಶಾಸಕರು  ಕಲಾಪದಿಂದ ದೂರು ಉಳಿದು ನಾಯಕರ ತಲೆಬಿಸಿಗೆ ಕಾರಣವಾಗಿದ್ದಾರೆ.
ಶುಕ್ರವಾರ ಎಲ್ಲರೂ ಕಲಾಪದಲ್ಲಿ ಪಾಲ್ಗೊಳ್ಳಬೇಕು, ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬಂಡಾಯ ಶಾಸಕರ ಗುಂಪಿನ ನಾಯಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಚಿಂಚೊಳ್ಳಿ ಶಾಸಕ ಡಾ. ಉಮೇಶ್ ಜಾಧವ್, ಕಂಪ್ಲಿ ಶಾಸಕ ಜಿ. ಎನ್. ಗಣೇಶ್,  ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ,  ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮಾತ್ರವಲ್ಲದೇ,  ಹಿರೆಕೆರೂರು ಶಾಸಕ ಬಿ. ಸಿ. ಪಾಟೀಲ್,  ಕೂಡಾ ಕಲಾಪದಿಂದ ದೂರ ಉಳಿದಿರುವುದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.
ದೆಹಲಿಯಲ್ಲಿ ಅಲ್ಪಸಂಖ್ಯಾತ ಸಮಾವೇಶದಲ್ಲಿ ಪಾಲ್ಗೊಂಡಿದ್ದ  ರೋಷನ್ ಬೇಗ್ ಕೂಡಾ  ಕಲಾಪಕ್ಕೆ ಬಂದಿರಲಿಲ್ಲ. ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ. ಎನ್, ಗಣೇಶ್ ಕೂಡಾ ಗೈರಾಗಿದ್ದರು.
ಕೆಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಕೂಡಾ ಆರೋಗ್ಯದ ನೆಪನೀಡಿ ಕಲಾಪಕ್ಕೆ ಗೈರಾಗಿದ್ದರು.  ಪಕ್ಷೇತರ ಶಾಸಕರಾದ ಆರ್. ಶಂಕರ್ ಹಾಗೂ ನಾಗೇಶ್ ಕೂಡಾ ಅಧಿವೇಶನದಲ್ಲಿ ಪಾಲ್ಗೊಂಡಿರಲಿಲ್ಲ.  ಬಿಟಿಎಂ ಲೇಔಟ್ ನಾಯಕ ರಾಮಲಿಂಗಾರೆಡ್ಡಿ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್  ತಡವಾಗಿ ಕಲಾಪಕ್ಕೆ ಬಂದರು.ಆದರೂ ಇಂದಿನ ಕಲಾಪದಲ್ಲಿ ಎಲ್ಲ ಕಾಂಗ್ರೆಸ್ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾಗಿದ್ದ ಆನಂದ್ ಸಿಂಗ್  ಆಸ್ಪತ್ರೆಯಿಂದ ಬಿಡುಗಡೆಯಾಗಿ ನೋವಿನಲ್ಲೂ ಕಲಾಪದಲ್ಲಿ ಪಾಲ್ಗೊಂಡಿದ್ದರು.
ಜಂಟಿ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣ ಮೊಟಕಾಗಿದ್ದು, ಬಿಜೆಪಿಯ ಕಾರ್ಯತಂತ್ರಕ್ಕೆ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ. ಇದರಿಂದ ಉತ್ತೇಜಿತರಾಗಿರುವ ನಾಯಕರು  ಸೂಕ್ತ ಕಾರ್ಯತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ಬಿಜೆಪಿ ನಾಯಕರ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com