ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಿರುವ ದಾಖಲೆ ನಮ್ಮ ಬಳಿ ಇದೆ: ಸಿದ್ದರಾಮಯ್ಯ

ಬಿಜೆಪಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ತಲಾ 30 ರಿಂದ 50 ಕೋಟಿ ಆಫರ್ ನೀಡಿದ್ದಾರೆ. ಈ ಬಗ್ಗೆ ಎಲ್ಲಾ ದಾಖಲೆಗಳನ್ನು ತಮ್ಮ ಬಳಿ ಇದ್ದು ಸೂಕ್ತ ಸಮಯದಲ್ಲಿ ದಾಖಲೆ...

Published: 07th February 2019 12:00 PM  |   Last Updated: 07th February 2019 04:40 AM   |  A+A-


Siddaramaiah

ಸಿದ್ದರಾಮಯ್ಯ

Posted By : VS
Source : UNI
ಬೆಂಗಳೂರು: ಬಿಜೆಪಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ತಲಾ 30 ರಿಂದ 50 ಕೋಟಿ ಆಫರ್ ನೀಡಿದ್ದಾರೆ. ಈ ಬಗ್ಗೆ ಎಲ್ಲಾ ದಾಖಲೆಗಳನ್ನು ತಮ್ಮ ಬಳಿ ಇದ್ದು ಸೂಕ್ತ ಸಮಯದಲ್ಲಿ ದಾಖಲೆ ಬಹಿರಂಗಪಡಿಸುವುದಾಗಿ ಕಾಂಗ್ರೆಸ್ ಶಾಸಕಾಂಗ ಅಧ್ಯಕ್ಷ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲ ನಡೆಸಿರುವುದು ಸತ್ಯವಾಗಿದೆ. ಕೆಲವು ಶಾಸಕರಿಗೆ ಹಣವನ್ನು ನೀಡಿದ್ದಾರೆ. ಈ ಬಗ್ಗೆ ತಮ್ಮ ಬಳಿ ದಾಖಲೆಗಳು, ವಿಡಿಯೋಗಳು ಇವೆ. ಅವುಗಳನ್ನೆಲ್ಲಾ ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಬಿಜೆಪಿ ಅಧಿಕಾರದ ಹಪಹಪಿಯಿಂದಾಗಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡಿದೆ. ನಿನ್ನ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿದರು. ಇಂದು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರಕ್ಕೆ ಬಹುಮತವಿಲ್ಲ ಎಂದಾದರೆ ಪ್ರತಿಭಟನೆ, ಧರಣಿ ಮಾಡುವ ಅಗತ್ಯವಿಲ್ಲ. ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದು ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಅವಿಶ್ವಾಸ ನಿರ್ಣಯ ಮಂಡಿಸಿ ವಿಫಲವಾಗಿದ್ದಾರೆ. ಮತ್ತೊಮ್ಮೆ ಅವಿಶ್ವಾಸ ನಿರ್ಣಯ ಮಂಡಿಸಲು ಕಾನೂನಿನಲ್ಲಿ ಅವಕಾಶವಿದೆ. ಅದನ್ನು ಬಳಸಿಕೊಳ್ಳಲಿ ಎಂದು ಉಚಿತ ಸಲಹೆ ನೀಡಿದರು. ಸದನದಲ್ಲಿ ಚರ್ಚಿಸಲು, ಸರ್ಕಾರಕ್ಕೆ ಚಾಟಿ ಬೀಸಲು ಬಿಜೆಪಿ ಸಾಕಷ್ಟ ಅವಕಾಶಗಳಿವೆ ಧರಣಿ ಬಿಟ್ಟು ಚರ್ಚೆಗೆ ಬನ್ನಿ ಎಂದು ಅವರು ಬಿಜೆಪಿ ಶಾಸಕರಿಗೆ ಮನವಿ ಮಾಡಿದರು. 

ನಾಲ್ವರು ಕಾಂಗ್ರೆಸ್ ಶಾಸಕ ಗೈರು ಹಾಜರಿ ಪ್ರಶ್ನೆಗೆ ಉತ್ತರಿಸಿದ ಅವರು, ನಾಳೆ ಶಾಸಕಾಂಗ ಸಭೆ ಕರೆದಿದ್ದೇವೆ. ನಾಳಿನ ಸಭೆ ಅಸಮಾಧಾನಿತರು ಹಾಜರಾಗದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ನಾಳಿನ ಶಾಸಕಾಂಗ ಸಭೆಗೆ ಅತೃಪ್ತ ಶಾಸಕರು ಸೇರಿದಂತೆ ಎಲ್ಲಾ 6 ಜನ ಶಾಸಕರು ಹಾಜರಾಗುತ್ತಾರೆಂದು ತಿಳಿಸಿದರು.
Stay up to date on all the latest ರಾಜಕೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp