ತಪ್ಪೊಪ್ಪಿಕೊಂಡ ಬಿಎಸ್ ವೈ ಆತ್ಮಸಾಕ್ಷಿಗೆ ಮೆಚ್ಚುತ್ತೇನೆ, ಮುಂದಿನ ನಿರ್ಧಾರ ಸ್ಪೀಕರ್ ಗೆ ಬಿಟ್ಟಿದ್ದು: ಡಿಕೆ ಶಿವಕುಮಾರ್

ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿದ್ದ ಆಡಿಯೋದಲ್ಲಿರುವುದು ತಮ್ಮದೇ ಧ್ವನಿ ಎಂದು ಹೇಳುವ ಮೂಲಕ ಬಿಎಸ್ ಯಡಿಯೂರಪ್ಪ ಆತ್ಮಸಾಕ್ಷಿಗೆ ಒಪ್ಪಿಕೊಂಡಿದ್ದಾರೆ. ಮುಂದಿನ ನಿರ್ಣಯವನ್ನು ನಾವು ಸ್ಪೀಕರ್ ಗೆ ಬಿಡುತ್ತೇವೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿದ್ದ ಆಡಿಯೋದಲ್ಲಿರುವುದು ತಮ್ಮದೇ ಧ್ವನಿ ಎಂದು ಹೇಳುವ ಮೂಲಕ ಬಿಎಸ್ ಯಡಿಯೂರಪ್ಪ ಆತ್ಮಸಾಕ್ಷಿಗೆ ಒಪ್ಪಿಕೊಂಡಿದ್ದಾರೆ. ಮುಂದಿನ ನಿರ್ಣಯವನ್ನು ನಾವು ಸ್ಪೀಕರ್ ಗೆ ಬಿಡುತ್ತೇವೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಬಿಎಸ್ ಯಡಿಯೂರಪ್ಪ ಅವರ ಪ್ರತಿಕ್ರಿಯೆ ಪ್ರಕಟವಾದ ಬೆನ್ನಲ್ಲೇ ಮಾತನಾಡಿದ ಡಿಕೆ ಶಿವಕುಮಾರ್ ಅವರು, 'ಯಡಿಯೂರಪ್ಪನವರ ಆತ್ಮಸಾಕ್ಷಿಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮಿಮಿಕ್ರಿ ಪ್ರಶ್ನೆ ಇಲ್ಲ. ಕೆಮ್ಮು, ಸುಕ್ಕು, ಕಳ್ಳತನ ಮತ್ತಿತರರ ವಿಚಾರಗಳನ್ನು ಮುಚ್ಚಿಡಲು ಆಗುವುದಿಲ್ಲ. ನಾಳೆ ಏನು‌ ಮಾಡಬೇಕು ಎನ್ನುವುದನ್ನು ಸ್ಪೀಕರ್ ಗೆ ಬಿಡೋಣ ಎಂದು ಹೇಳಿದರು.
'ಯಡಿಯೂರಪ್ಪಗೆ ದೇವರು ಒಳ್ಳೆಯದು ಮಾಡಲಿ. ವಾಸ್ತವಾಂಶ ಯಾರು ಮುಚ್ಚಿಡಲು ಆಗುವುದಿಲ್ಲ. ಯಾರು ಯಾವುದನ್ನು ಡಬ್ ಮಾಡುವುದಕ್ಕೆ ಆಗುವುದಿಲ್ಲ. ತನಿಖೆ ನಡೆಸಲು ಬೇಕಾದಷ್ಟು ಸಂಸ್ಥೆಗಳು ಇವೆ. ನನ್ನ ಧ್ವನಿ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಧ್ವನಿಯನ್ನು ಯಾರಾದರೂ ಬದಲಾಯಿಸಲು ಆಗುತ್ತಾ. ಇದ್ಯಾವುದು ಮುಚ್ಚು ಮರೆಯಿಂದ ನಡೆಯುತ್ತಿಲ್ಲ. ಎಲ್ಲವೂ ಬಹಿರಂಗವಾಗಿ ನಡೆಯುತ್ತಿದೆ ಎಂದು ಹೇಳಿದರು.
ಅಂತೆಯೇ ಬಿಜೆಪಿಯ ಸಿಡಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ಬಿಜೆಪಿ ಅವರು ಹೇಳುತ್ತಿರುವ ವಿಚಾರ ಹಿಂದೆಯೇ ಜೆಡಿಎಸ್ ಪಕ್ಷದೊಳಗೆ ಚರ್ಚೆಯಾಗಿದೆ. ಕುಮಾರಸ್ವಾಮಿ ಅವರೇ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿ ಅವರು ಬೋಗಸ್ ಅಂತ ಹೇಳಲಿ, ಫಿಲ್ಮ್ ಅಂತ ಹೇಳಲಿ ಯಾರು ಏನು ಬೇಕಾದರೂ ವಾದ ಮಾಡಲಿ. ಸ್ಪೀಕರ್ ಅವರು ನಾನೇ ವಿಷಯ ಪ್ರಸ್ತಾಪಿಸುತ್ತೇನೆ ಎಂದಿದ್ದಾರೆ. ಯಾವ ರೀತಿ ತನಿಖೆ ಆಗಬೇಕು ಎಂಬುದನ್ನು ಅವರೇ ನಾಳೆ ಚರ್ಚಿಸುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com