'ಆಪರೇಷನ್ ಆಡಿಯೋ' ತನಿಖೆಗೆ ವಿಶೇಷ ತನಿಖಾ ತಂಡ ರಚನೆ: ಸಿಎಂ ಕುಮಾಸ್ವಾಮಿ ಘೋಷಣೆ

ಬಿಜೆಪಿ ರಾಜ್ಯಾಧ್ಯಕ್ಷ್ಯ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ತಾವೇ ಬಿಡುಗಡೆ ಮಾಡಿದ್ದ 'ಆಪರೇಷನ್ ಕಮಲ' ಆಡಿಯೋ ಕುರಿತು...

Published: 11th February 2019 12:00 PM  |   Last Updated: 11th February 2019 11:53 AM   |  A+A-


Karnataka CM Kumaraswamy announces SIT probe into audio clip row involving state BJP chief Yeddyurappa

ಎಚ್ ಡಿ ಕುಮಾರಸ್ವಾಮಿ

Posted By : LSB LSB
Source : PTI
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ್ಯ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ತಾವೇ ಬಿಡುಗಡೆ ಮಾಡಿದ್ದ 'ಆಪರೇಷನ್ ಕಮಲ' ಆಡಿಯೋ ಕುರಿತು ಸತ್ಯಾಸತ್ಯತೆ ತಿಳಿಯಲು ವಿಶೇಷ ತನಿಖಾ ತಂಡ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮಾವರ ಘೋಷಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ಆಪರೇಷನ್ ಕಮಲ ಆಡಿಯೋ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು, ತಮ್ಮ ಮೇಲೆ ಮಾಡಿರುವ ಆಪಾದನೆ ಕುರಿತು ವಿಷಾದ ವ್ಯಕ್ತಪಡಿಸಿದರು. ಅಲ್ಲದೇ ತಮ್ಮ ನಡೆ ಬಗ್ಗೆ ಸದನಕ್ಕೆ ಶಾಸಕರಲ್ಲಿಯೇ ಪ್ರಶ್ನಿಸಿದರು. ಇನ್ನು ಈ ಕುರಿತು ಸಮಗ್ರ ತನಿಖೆಯಾಗಬೇಕು. ಸ್ಪೀಕರ್​ ಕುರಿತು ಹಗುರವಾಗಿ ಮಾತನಾಡಿರುವರಿಗೆ ಒಂದು ಪಾಠವಾಗಬೇಕು ಎಂದು ಶಾಸಕರು ಆಗ್ರಹಿಸಿದರು.

ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು ಆಡಿಯೋ ಕುರಿತು ಐವರು ಸದಸ್ಯರನ್ನೊಳಗೊಂಡ ವಿಶೇಷ ತನಿಖಾ ತಂಡ(ಎಸ್ಐಟಿ) ರಚನೆ ಮಾಡಿ, 15 ದಿನದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಸಭಾಧ್ಯಕ್ಷರ ಸೂಚನೆ ಮೇರೆಗೆ ತನಿಖಾ ತಂಡ ರಚಿಸಿ, ತನಿಖೆ ನಡೆಸಲಾಗುವುದು ಎಂದರು.

ಎಸ್​ಐಟಿ ತನಿಖೆಗೆ ಮುಂದಾಗುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಂತೆ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ, ನಿಮ್ಮ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ.  ನಮ್ಮ ಬಳಿಯೂ ಸಿಕ್ಕಾಪಟ್ಟೆ  ಆಡಿಯೋ ಇದೆ. ಎಲ್ಲದರ ಬಗ್ಗೆ ಚರ್ಚೆಯಾಗಲಿ. ಎಲ್ಲವೂ ಬಹಿರಂಗವಾಗಲಿ ಎಂದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp