ಕುಮಾರಸ್ವಾಮಿ ಸಿಲುಕಿಸಲು ಎಸ್‌ಐಟಿ ತನಿಖೆಗೆ ಸಿದ್ದರಾಮಯ್ಯ ಒತ್ತಾಯ: ಬಿಜೆಪಿ ಆರೋಪಕ್ಕೆ 'ಸಿದ್ದು' ತಿರುಗೇಟು

ಯಡಿಯೂರಪ್ಪ ಆಡಿಯೋ ಟೇಪ್ ಪ್ರಕರಣ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಬರುತ್ತದೆ ಹೀಗಾಗಿ ಪ್ರಕರಣವನ್ನು ಎಸ್ ಟಿಗೆ ವಹಿಸಬೇಕೆಂದು ..
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಯಡಿಯೂರಪ್ಪ ಆಡಿಯೋ ಟೇಪ್ ಪ್ರಕರಣ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಬರುತ್ತದೆ ಹೀಗಾಗಿ ಪ್ರಕರಣವನ್ನು ಎಸ್ ಟಿಗೆ ವಹಿಸಬೇಕೆಂದು ಒತ್ತಾಯಿಸುತ್ತಿರುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
ಜೆಡಿಎಸ್ ಪಕ್ಷ ಹಾಳು ಮಾಡಲು ಹಾಗೂ ಸಿಎಂ ಕುಮಾರಸ್ವಾಮಿಯನ್ನು ಸಿಲುಕಿಸಲು ಎಸ್‌ಐಟಿ ತನಿಖೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆಂಬ ಈಶ್ವರಪ್ಪ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಮಾಜಿ ಸಿಎಂ ಸಿದ್ದು ಯಡಿಯೂರಪ್ಪ ಏನು ಮಾಡುತ್ತಾರೆ ಅವರಿಗೆ ಗೊತ್ತಿಲ್ಲ, ಆರೋಪ ಮಾಡಬೇಕು, ಆದರೆ ಆಧಾರವಿರಬೇಕು, ಗಂಭೀರ ಆಗಿರಬೇಕು ಎಂದು ತಿರುಗೇಟು ನೀಡಿದ್ದಾರೆ.
ಎಸ್‌ಐಟಿ ತನಿಖೆ ಮಾಡಲು ಸ್ಪೀಕರ್ ಆದೇಶ ಮಾಡಿದ್ದಾರೆ. ತನಿಖೆಗೆ ನಾನು ಸಲಹೆ ನೀಡಿದ್ದೇನೆ. ಅದು‌ ನನ್ನ ಅಭಿಪ್ರಾಯ. ಆಡಿಯೋ ಪ್ರಕರಣವನ್ನು ಎಸ್.ಐ.ಟಿ.ತನಿಖೆಗೆ ಕೊಡ್ಟಿದ್ದರಿಂದ ತಪ್ಪೇನು ಎಂದು ಸಹ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 
ಅಲ್ಲದೆ, ಎಸ್‌ಐಟಿ ತನಿಖೆಯನ್ನು ನಾವು ನಂಬಬೇಕು. ಅದು ಫೇಕ್ ಎಂದರೆ ಪ್ರಜಾಪ್ರಭುತ್ವ ಹಾಳಾದಂತೆ. ನಾನು ಸಿಎಂ ಇದ್ದ ವೇಳೆ ಐದಾರು ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೇವೆ. ಆದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ವೇಳೆ ಒಂದೇ ಒಂದು ಪ್ರಕರಣ ಸಿಬಿಐಗೆ ನೀಡಿಲ್ಲ ಎಂದು ಹೇಳಿದ್ದಾರೆ. 
ಸಂವಿಧಾನದ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಹೀಗಾಗಿ ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಆಪರೇಷನ್ ಕಮಲ ಆಡಿಯೋ ಪ್ರಕರಣ ತನಿಖೆಗೆ ಸಿಎಂ ಕುಮಾರಸ್ವಾಮಿ ಅವರು ಎಸ್‍ಐಟಿ ತಂಡವನ್ನು ರಚನೆ ಮಾಡಿದ್ದಾರೆ. ನಾವು ಯಾರು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆಯ ಬಳಿಕ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com