ಲೋಕಸಭೆ ಚುನಾವಣೆ ಸಮೀಪದಲ್ಲೇ ಮತ್ತೊಂದು ಆಪರೇಷನ್ ಕಮಲ ಸಾಧ್ಯತೆ: ಸತೀಶ್ ಜಾರಕಿಹೊಳಿ!

ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲ ವಿಫಲವಾಗುತ್ತಿದೆ, ಆದರೆ ಬಿಜೆಪಿಯ ಕೆಲವು ಮುಖಂಡರು ರಮೇಶ್ ಜಾರಕಿಹೊಳಿ ...

Published: 27th February 2019 12:00 PM  |   Last Updated: 27th February 2019 09:22 AM   |  A+A-


Sathish Jarakiholi

ಸತೀಶ್ ಜಾರಕಿಹೊಳಿ

Posted By : SD
Source : The New Indian Express
ಬೆಳಗಾವಿ: ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲ ವಿಫಲವಾಗುತ್ತಿದೆ, ಆದರೆ ಬಿಜೆಪಿಯ ಕೆಲವು ಮುಖಂಡರು ರಮೇಶ್ ಜಾರಕಿಹೊಳಿ ಸೇರಿದಂತೆ ಅತೃಪ್ತ ಕಾಂಗ್ರೆಸ್ ಶಾಸಕರ ಜೊತೆ ಸೇರಿ ಮತ್ತೊಂದು ಸುತ್ತಿನ 'ಆಪರೇಷನ್' ನಡೆಸಲು ಸಜ್ಜಾಗುತ್ತಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಬಿಜೆಪಿ ಆಪರೇಷನ್ ಕಮಲ ನಡೆಸಲು ಮುಂದಾಗಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಮತ್ತು ಸಂಪುಟದ ಸಹೋದ್ಯೋಗಿಗಳು ಇದರ ಬಗ್ಗೆ ಜಾಗ್ರತೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆಯಾದಗಿನಿಂದ ಸರ್ಕಾರ ಕೆಡವಲು ಬಿಜೆಪಿ ಹಲವು ಯತ್ನಗಳನ್ನು ನಡೆಸುತ್ತಿದೆ. ಆದರೆ ಅದು ಪ್ರಯೋಜನವಾಗಿಲ್ಲ, ಹೀಗಾಗಿ ಮುಂದಿನ ದಿನಗಳಲ್ಲೂ ಬಿಜೆಪಿ ತನ್ನ ಈ ಆಟವನ್ನು ಮುಂದುವರಿಸುತ್ತದೆ, ಹೀಗಾಗಿ ಕಾಂಗ್ರೆಸ್ ಮುಂದೆ ಸಂಭವಿಸಬಹುದಾದ ಅಪಾಯವನ್ನು ಅರಿತು ಜಾಗೃತೆ ವಹಿಸಬೇಕೆಂಂದು ಸಲಹೆ ನೀಡಿದ್ದಾರೆ.

ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದು ಸಾಧ್ಯವಾಗಿಲ್ಲ, ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿದ್ದಾರೆ, ಶಾಸಕ ಉಮೇಶ್ ಜಾಧವ್ ಮಾರ್ಚ್ 7 ಅಥವಾ 8 ರಂದು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 
Stay up to date on all the latest ರಾಜಕೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp