ಸಿನಿಮಾ ನಟರ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ: ಸಿಎಂ ಕುಮಾರಸ್ವಾಮಿ

ಕನ್ನಡದ ಖ್ಯಾತ ಸಿನಿಮಾ ನಟರ ಮನೆಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ರಾಜಕೀಯ ಪ್ರೇರಿತವಲ್ಲ...

Published: 05th January 2019 12:00 PM  |   Last Updated: 05th January 2019 08:29 AM   |  A+A-


No political motive in IT raids on film stars: HDK

ಎಚ್ ಡಿ ಕುಮಾರಸ್ವಾಮಿ

Posted By : LSB LSB
Source : PTI
ಹುಬ್ಬಳ್ಳಿ: ಕನ್ನಡದ ಖ್ಯಾತ ಸಿನಿಮಾ ನಟರ ಮನೆಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಾಮಾನ್ಯವಾಗಿ ಎಲ್ಲಾಕಡೆ ದಾಳಿ ನಡೆಸುತ್ತಿರುತ್ತಾರೆ. ತೆರಿಗೆ ವಂಚನೆ ವಿಚಾರ ಅವರ ಗಮನಕ್ಕೆ ಬಂದಾಗ ದಾಳಿ ನಡೆಸುತ್ತಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ನಾಲ್ವರು ಖ್ಯಾತ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್ ಹಾಗೂ ಸುದೀಪ್ ಮತ್ತು ನಿರ್ಮಾಪಕರಾದ ಸಿ ಆರ್ ಮನೋಹರ್, ರಾಕ್ ಲೈನ್ ವೆಂಕಟೇಶ್ ಅವರ ಮನೆ ಮೇಲೆ ನಡೆದ ಐಟಿ ದಾಳಿ ಬಗ್ಗೆ ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಈ ದಾಳಿ ರಾಜಕೀಯ ಪ್ರೇರಿತ ಎಂದು ಹೇಳುವ ಬದಲು, ಐಟಿ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ ಎಂದರೆ ಸರಿ ಎಂದರು.

ಸಿನಿಮಾ ನಟರು ಹಾಗೂ ನಿರ್ಮಾಪಕರು ವಿಶೇಷ ವ್ಯಕ್ತಿಗಳೇನಲ್ಲ. ಪ್ರತಿಯೊಬ್ಬರು ದೇಶದ ಕಾನೂನಿನ ಚೌಕಟ್ಟಿನಡಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ಇದಕ್ಕು ಮುನ್ನ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡ ಸ್ಟಾರ್ ನಟರು ಹಾಗೂ ಮೂವರು ನಿರ್ಮಾಪಕರುಗಳ ನಿವಾಸಗಳ ಮೇಲೆ ನಡೆದ ಐಟಿ ದಾಳಿಯ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp