ರೇವಣ್ಣ-ದಿನೇಶ್ ಗುಂಡೂರಾವ್ ನಡುವೆ ಮಾತಿನ ಚಕಮಕಿ

ಮೈತ್ರಿ ಸರ್ಕಾರಗಳ ಪಕ್ಷಗಳ ನಡುವಿನ ಪ್ರಮುಖ ನಾಯಕರ ನಡುವೆ ಮಾತಿನ ಸಮರ ...
ದಿನೇಶ್ ಗುಂಡೂರಾವ್-ಹೆಚ್ ಡಿ ರೇವಣ್ಣ
ದಿನೇಶ್ ಗುಂಡೂರಾವ್-ಹೆಚ್ ಡಿ ರೇವಣ್ಣ

ಬೆಂಗಳೂರು: ಮೈತ್ರಿ ಸರ್ಕಾರಗಳ ಪಕ್ಷಗಳ ನಡುವಿನ ಪ್ರಮುಖ ನಾಯಕರ ನಡುವೆ ಮಾತಿನ ಸಮರ ಮತ್ತೆ ನಡೆದಿದೆ. ಅದು ಸಚಿವ ಹೆಚ್ ಡಿ ರೇವಣ್ಣ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಡುವೆ.

ಡಿಸಿಎಂ ಹುದ್ದೆಯನ್ನು ಜಿ ಪರಮೇಶ್ವರ್ ಅವರಿಂದ ಕಾಂಗ್ರೆಸ್ ನಾಯಕರು ಕಿತ್ತುಕೊಂಡಿದ್ದಾರೆ, ಅದು ಸರಿಯಲ್ಲವೆಂದು ಕೆಲ ದಿನಗಳ ಹಿಂದೆ ಸಚಿವ ರೇವಣ್ಣ ಆಕ್ಷೇಪಿಸಿದ್ದು, ಕಾಂಗ್ರೆಸ್ ನವರು ಮೈತ್ರಿ ಧರ್ಮ ಪಾಲಿಸಬೇಕೆಂದು ಬಹಿರಂಗವಾಗಿ ಹೇಳಿದ್ದರು. ಇದಕ್ಕೆ ನಿನ್ನೆ ಮಾಧ್ಯಮಗಳ ಮುಂದೆ ಆಕ್ಷೇಪ ವ್ಯಕ್ತಪಡಿಸಿದ್ದ ದಿನೇಶ್ ಗುಂಡೂರಾವ್, ಪಕ್ಷದೊಳಗೆ ಏನೇ ಅಸಮಾಧಾನವಿದ್ದರು ಮುಖಾಮುಖಿ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳೋಣ, ಅದು ಬಿಟ್ಟು ಬಹಿರಂಗವಾಗಿ, ಮಾಧ್ಯಮಗಳ ಮುಂದೆ ಹೇಳುವುದು ಮೈತ್ರಿ ಧರ್ಮ ಪಾಲನೆಗೆ ಸರಿಯಲ್ಲ ಎಂದು ತಿರುಗೇಟು ನೀಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ, ತಮಗೆ ಗುಂಡೂರಾವ್ ಅವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ದಿನೇಶ್ ಗುಂಡೂರಾವ್ ಅವರ ಆಕ್ಷೇಪ ಹೀಗಿದೆ:
ಸಚಿವ ರೇವಣ್ಣ ಬಹಿರಂಗವಾಗಿ ಮಾತನಾಡಬಾರದು. ಇದು ನಾನು ಅವರಿಗೆ ಕೊಡುತ್ತಿರುವ ಸಲಹೆ. ನಿಗಮ ಮಂಡಳಿ ನೇಮಕದಲ್ಲಿ ಸಣ್ಣ ಗೊಂದಲವಿರುವುದು ನಿಜ. ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಲೋಕಸಭೆ ಚುನಾವಣೆ ಸೀಟು ಹೊಂದಾಣಿಕೆ ವಿಚಾರವಾಗಿ ಸಿಎಂ ಅವರು ಪಕ್ಷದ ವೇದಿಕೆಯಲ್ಲಿ ಹೇಳಿಕೆ ನೀಡಿದ್ದಾರೆ. ಈಗ ಕ್ಷೇತ್ರಗಳ ಸಂಖ್ಯೆ ಮುಖ್ಯವಲ್ಲ. ಗೆಲ್ಲುವುದೇ ಗುರಿಯಾಗಿದೆ. ಅದರ ಬಗ್ಗೆ ಇನ್ನೂ ಚರ್ಚೆಯಾಗಬೇಕಿದೆ.

ಹೆಚ್ ಡಿ ರೇವಣ್ಣ: ದಿನೇಶ್‌ ಗುಂಡೂರಾವ್‌ ನನಗೆ ತಿಳುವಳಿಕೆ ಹೇಳುವ ಅಗತ್ಯವಿಲ್ಲ. ಮಾರ್ಗದರ್ಶನ ಮಾಡಲು ದೇವೇಗೌಡರು, ಕುಮಾರಸ್ವಾಮಿ ಇದ್ದಾರೆ. ನಾನು 5 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇದನ್ನು ದಿನೇಶ್‌ ತಿಳಿದುಕೊಳ್ಳಬೇಕು. ಅವರು ನನಗೆ ಎಚ್ಚರಿಕೆ ನೀಡುವ ಅವಶ್ಯಕತೆ ಇಲ್ಲ. ನಿಗಮ ಮಂಡಳಿ ನೇಮಕ ಎರಡೂ ಪಕ್ಷಗಳ ನಾಯಕರು ಕುಳಿತು ಮಾಡುವ ಕೆಲಸ. ಲೋಕೋಪಯೋಗಿ ಇಲಾಖೆಗೆ ಸೀಮಿತವಾಗಿ ನನ್ನ ಕೆಲಸ. ನನಗೆ ತಿಳಿ ಹೇಳುವ ಬದಲು ದಿನೇಶ್‌ ಗುಂಡೂರಾವ್‌ ಕಾಂಗ್ರೆಸ್‌ ಪಕ್ಷದ ಶಾಸಕರು ಮತ್ತು ಮುಖಂಡರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com