14 ನಿಗಮ ಮಂಡಳಿ ಅಧ್ಯಕ್ಷ, 8 ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ಸಿಎಂ ಅಂಕಿತ

ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರ್ಕಾರದ ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಿದ್ದ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿಗೆ...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರ್ಕಾರದ ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಿದ್ದ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿಗೆ ಕೊನೆಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಸಹಿ ಹಾಕಿದ್ದಾರೆ.
ಹಲವು ದಿನಗಳಿಂದ ಬಾಕಿ ಉಳಿದಿದ್ದ ನಿಗಮ ಮಂಡಳಿ ಹಾಗೂ ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ಸಿಎಂ ಇಂದು ಅಂಕಿತ ಹಾಕಿದ್ದಾರೆ. ಆದರೆ, ನಿರೀಕ್ಷೆಯಂತೆ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳು (ಬಿಎಂಟಿಸಿ) ಕಾಂಗ್ರೆಸ್‌ ಕೈತಪ್ಪಿವೆ. ಕಾಂಗ್ರೆಸ್‌ ಒಳಗಿನ ಹಗ್ಗಜಗ್ಗಾಟದಿಂದಲೇ ಆಯಕಟ್ಟಿನ ಬಿಡಿಎ ಅಧ್ಯಕ್ಷ ಹುದ್ದೆಯನ್ನೂ ಕಳೆದುಕೊಳ್ಳುವಂತಾಗಿದೆ. 
ಕಾಂಗ್ರೆಸ್ ಪಟ್ಟಿಯಲ್ಲಿದ್ದ 19 ನಿಗಮ ಮಂಡಳಿ ಮತ್ತು 9 ಸಂಸದೀಯ ಕಾರ್ಯದರ್ಶಿ ಸ್ಥಾನಗಳ ಪೈಕಿ 14 ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ 8 ಸಂಸದೀಯ ಕಾರ್ಯದರ್ಶಿಗಳ ಸ್ಥಾನಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಕೆಲ ಮಹತ್ವದ ನಿಗಮ ಮಂಡಳಿಗಳು ಹಾಗೂ ಸಂಸದೀಯ ಕಾರ್ಯದರ್ಶಿ ಸ್ಥಾನಗಳು ಮಾತ್ರ ಇನ್ನೂ ಬಾಕಿ ಉಳಿದಿವೆ. ವಿಧಾನಪರಿಷತ್ ಸದಸ್ಯ ಹಾಗು ಹಾಸನದ ಕಾಂಗ್ರೆಸ್ ಮುಖಂಡ ಗೋಪಾಲಸ್ವಾಮಿ ಅವರ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೂ ಸಿಎಂ ಒಪ್ಪಿಗೆ ನೀಡಿಲ್ಲ.
ಡಿಸೆಂಬರ್ 22ರಂದು ದೋಸ್ತಿ ಸರ್ಕಾರದ ಸಂಪುಟ ವಿಸ್ತರಣೆಯಾಗಿತ್ತು. ಅಂದೇ ನಿಗಮ ಮಂಡಳಿ ನೇಮಕ ಪಟ್ಟಿಯನ್ನು ಸಿಎಂ ಕೈಗೆ ಕಾಂಗ್ರೆಸ್‌ ಒಪ್ಪಿಸಿತ್ತು. ಆದರೆ ಜೆಡಿಎಸ್‌ ಸಚಿವರು ನೋಡಿಕೊಳ್ಳುವ ಇಲಾಖೆಗಳ ಸಂಸ್ಥೆಗಳಿಗೂ ಕಾಂಗ್ರೆಸ್‌ ಶಾಸಕರನ್ನು ನಿಯೋಜಿಸಲು ಹೊರಟಿದ್ದನ್ನು ನೋಡಿ ಸಿಎಂ ಆಕ್ಷೇಪಿಸಿದ್ದರು.
ನಿಗಮ ಮಂಡಳಿ ಅಧ್ಯಕ್ಷರು
1) ಬಿಕೆ ಸಂಗಮೇಶ್ವರ್ - ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ.
2) ಆರ್. ನರೇಂದ್ರ - ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು
3) ಬಿ ನಾರಾಯಣರಾವ್ - ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
4) ಉಮೇಶ್ ಜಾಧವ್ - ಕರ್ನಾಟಕ ರಾಜ್ಯ ಉಗ್ರಾಣ ನಿಗಮ
5) ಬಿಎಸ್ ಸುರೇಶ್ - ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ
6) ಲಕ್ಷ್ಮಿ ಹೆಬ್ಬಾಳ್ಕರ್ - ಮೈಸೂರು ಮಿನರಲ್ಸ್
7) ಟಿಡಿ ರಾಜೇಗೌಡ - ಮಲೆನಾಡು ಪ್ರದೇಶ ಅಭಿವೃದ್ಧಿ ನಿಗಮ ಮಂಡಳಿ
8) ಟಿ. ರಘುಮೂರ್ತಿ - ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
9) ಯಶವಂತ ರಾಯಗೌಡ ಪಾಟೀಲ್ - ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
10) ಭೈರತಿ ಬಸವರಾಜ್ - ಕರ್ನಾಟಕ ಸಾಬೂನು ಮತ್ತು ಮಾರ್ಜಕ
11) ಬಿ. ಶಿವಣ್ಣ - ಕಿಯೋನಿಕ್ಸ್, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ
12) ಎಸ್.ಎನ್. ನಾರಾಯಣಸ್ವಾಮಿ - ಅಂಬೇಡ್ಕರ್ ಅಭಿವೃದ್ಧಿ ‌ನಿಗಮ
13) ಮುನಿರತ್ನ - ಕರ್ನಾಟಕ ವೃತ್ತಿ ಕೌಶಲ್ಯ ಮತ್ತು ಅಭಿವೃದ್ಧಿ ನಿಗಮ
14) ಶಿವರಾಮ್ ಹೆಬ್ಬಾರ್ - ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡ ಶಾಸಕರು
1) ಅಬ್ದುಲ್ ಜಬ್ಬಾರ್
2) ಅಂಜಲಿ ನಿಂಬಾಳ್ಕರ್
3) ಐವಾನ್ ಡಿಸೋಜಾ
4) ಮಹಾಂತೇಶ್ ಶಿವಾನಂದ ಕೌಜಲಗಿ
5) ರೂಪಾ ಶಶಿಧರ್
6) ಗೋವಿಂದ ರಾಜ್
7) ರಾಘವೇಂದ್ರ ಬಸವರಾಜ್ ಹಿಟ್ನಾಳ್
8) ಡಿಎಸ್ ಹೊಲಗೇರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com