ಭೇಟಿಗೆ ಸಿಗದ ಅಮಿತ್ ಶಾ: ರಮೇಶ್ ಜಾರಕಿಹೊಳಿಗೆ ಮುಂದಿನ ದಾರಿ ಯಾವುದು?

ಸಮ್ಮಿಶ್ರ ಸರ್ಕಾರದ ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಪಕ್ಷದ ನಾಯಕರೊಂದಿಗೆ ಮುನಿಸಿಕೊಂಡು ಒಂದು ವಾರದ ಕಾಲ ನಾಪತ್ತೆಯಾಗಿದ್ದ,ಕಾಂಗ್ರೆಸ್ ...
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಪಕ್ಷದ ನಾಯಕರೊಂದಿಗೆ ಮುನಿಸಿಕೊಂಡು ಒಂದು ವಾರದ ಕಾಲ ನಾಪತ್ತೆಯಾಗಿದ್ದ,ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ, ಕಳೆದ ಗುರುವಾರ ಗೋಕಾಕ್ ಗೆ ಆಗಮಿಸಿದ್ದರು. ಆದರೆ ಅವರ ಮುಂದಿನ ನಡೆ ಏನು ಎಂಬುದು ಇನ್ನೂ ನಿಗೂಢವಾಗಿದೆ.
ಆದರೆ ರಮೇಶ್ ಜಾರಕಿಹೊಳಿ ಬಂಡಾಯ ವಿಫಲವಾಗಿದ್ದಾರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡುವ ರಮೇಶ್ ಜಾರಕಿಹೊಳಿ ಉದ್ದೇಶ ಮಾತ್ರ ಈಡೇರಲೇ ಇಲ್ಲ,  ಹೀಗಾಗಿ ಕೆಲವು ಕಾಂಗ್ರೆಸ್ ಬಂಡಾಯ ಶಾಸಕರೊಂದಿಗೆ ಬಲವಂತವಾಗಿ ವಾಪಾಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ರಮೇಶ್,  ಆರ್.ಶಂಕರ್,  ಸಚಿವಕಾಂಕ್ಷಿಗಳಾದ ಬಿ ನಾಗೇಂದ್ರ, ಬಿ.ಸಿ ಪಾಟೀಲ್, ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಲು ತೆರಳಿ ಫಲಪ್ರಧವಾಗದೇ ವಾಪಸ್ ಬಂದಿದ್ದಾರೆ. ಬಂಡಾಯ ಶಾಸಕರನ್ನು ಭೇಟಿ ಮಾಡಲು ಕೇವಲ ಅಮಿತ್ ಷಾ ಮಾತ್ರ ನಿರಾಕರಿಸಿಲ್ಲ, ಸಮಯ ವ್ಯರ್ಥ ಎಂದು ತಿಳಿದ ಷಾ.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರನ್ನು ಕೂಡ ಭೇಟಿ ಮಾಡಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ, 
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ  ರಾಜ್ಯ ಬಿಜೆಪಿ ಒಗ್ಗಟ್ಟಾಗಿ ಚುನಾವಣೆಗೆ ಸಿದ್ದರಾಗಲು ನಿರ್ಧರಿಸಿದ್ದಾರೆ, ಯಡಿಯೂರಪ್ಪ ಅವರಿಗೂ ಸಮಯ ನೀಡಲು ನಿರಾಕರಿಸಿದ್ದಾರೆ. ಅಮಿತ್ ಶಾ ಅವರ ಈ ನಿರ್ಧಾರದಿಂದ ರಮೇಶ್ ಜಾರಕಿಗೊಳಿ ಬೇಸರಗೊಂಡಿದ್ದಾರೆ.
ಯಡಿಯೂರಪ್ಪ ಅಥವಾ ರಮೇಶ್ ಅವರು ನಿರೀಕ್ಷಿತ ಸಂಖ್ಯೆಯ ಶಾಸಕರನ್ನು ಕರೆತಂದು ಕೇಂದ್ರ ನಾಯಕರ ಮನವೊಲಿಸಲು ವಿಫಲರಾಗಿದ್ದಾರೆ, ಹೀಗಾಗಿ ಇಬ್ಬರು ಸಿಟ್ಟಿನಿಂದ ವಾಪಾಸಾಗಿದ್ದಾರೆ, 
ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಬ್ಯುಸಿ ಶೆಡ್ಯೂಲ್ ನಲ್ಲಿ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದಾರೆ, ಹಾಗಾಗಿ ಅಮಿತ್ ಶಾ ಅವರನ್ನು ನೇರವಾಗಿ ಭೇಟಿಯಾಗುವಂತೆ ತಿಳಿಸಿದ್ದಾರೆ, ಆದರೆ ಯಾವುದೇ ಕಾರಣಕ್ಕೂ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, 
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ರಾಜ್ಯ ನಾಯಕರ ಯಾವುದೇ ಪ್ರಯತ್ನಕ್ಕೆ ಸೊಪ್ಪು ಹಾಕದ ಕೇಂದ್ರ ಬಿಜೆಪಿ ನಾಯಕರು ಮತ್ತೆ ಮುಜುಗರಕ್ಕೊಳಗಾಗದೇ ಇರಲು ನಿರ್ಧರಿಸಿದ್ದಾರೆ.
ಪ್ರತಿಸಲ ಒಂದೊ ಎರಡೋ ಶಾಸಕರನ್ನು ಕರೆ ತರುವ ಬದಲು 15 ಶಾಸಕರನ್ನು ಕರೆತಂದು ಸಿಎಂ  ದೇವೇಂದ್ರ ಫಡ್ನವೀಸ್ ಅವರ ಮುಂದೆ ಪರೇಡ್ ನಡೆಸುವಂತೆ ತಿಳಿಸಿರುವ ಅಮಿತ್ ಷಾ, ಸಮಯ ವ್ಯರ್ಥ ಮಾಡದೇ ಲೋಕಸಭೆ ಚುನಾವಣೆಗೆ ತಯಾರಾಗುವಂತೆ ಸೂಚಿಸಿದ್ದಾರೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಂಡು ಮುಜುಗರಕ್ಕೊಳಗಾಗದೇ ಇರಲು ಅಮಿತ್ ಷಾ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ,
ಕಳೆದ ಒಂದು ವಾರದ ಹಿಂದೆ  ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೊಳಿ, ರಾಜ್ಯ ಕಾಂಗ್ರೆಸ್ ಗೆ ಆಘಾತ ನೀಡಲು ಹೋಗಿ ತಾವೇ ಆಘಾತಕ್ಕೊಳಗಾಗಿದ್ದಾರೆ. ಆದರೆ ಈಗಾಗಲೇ ಕ್ಷೋಭೆಗೊಳಗಾಗಿರುವ ರಮೇಶ್ ಜಾರಕಿಹೊಳಿ, ಅಮಿತ್ ಷಾ ಭೇಟಿಗೆ ಸಿಗದ  ಕಾರಣ ರಮೇಶ್ ಮತ್ತಷ್ಟು ವಿಚಲಿತರಾಗಿದ್ದಾರೆ, ಮುಂದಿನ ದಾರಿ ಏನು ಎಂಬ ಬಗ್ಗೆ ಚಿಂತೆಗೊಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com