ಕಾಣೆಯಾದ ಮೀನುಗಾರರ ಹುಡುಕೋಕೆ ನಾವೇನು ಸಮುದ್ರಕ್ಕೆ ಹಾರಬೇಕಾ: ಸಚಿವ ವೆಂಕಟರಾವ್ ನಾಡಗೌಡ

ಮೀನುಗಾರಿಕೆಗೆಂದು ತೆರಳಿದ್ದ ಮಲ್ಪೆಯ 7 ಮೀನುಗಾರರು ಕಳೆದ 28 ದಿನಗಳಿಂದ ನಾಪತ್ತೆಯಾಗಿದ್ದು ಕುಟುಂಬಸ್ಥರು ಕಂಗಲಾಗಿರುವ ಸಮಯದಲ್ಲಿ ಸಚಿವರು....
ವೆಂಕಟರಾವ್ ನಾಡಗೌಡ
ವೆಂಕಟರಾವ್ ನಾಡಗೌಡ
ರಾಯಚೂರು: ಮೀನುಗಾರಿಕೆಗೆಂದು ತೆರಳಿದ್ದ ಮಲ್ಪೆಯ 7 ಮೀನುಗಾರರು ಕಳೆದ 28 ದಿನಗಳಿಂದ ನಾಪತ್ತೆಯಾಗಿದ್ದು ಕುಟುಂಬಸ್ಥರು ಕಂಗಲಾಗಿರುವ ಸಮಯದಲ್ಲಿ ಸಚಿವರು ಮೀನುಗಾರರ ಹುಡುಕೋಕೆ ನಾವೇನು ಸಮುದ್ರಕ್ಕೆ ಹಾರಬೇಕಾ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.
ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಅಗತ್ಯ ಕ್ರಮಗಳನ್ನೆಲ್ಲ ತೆಗೆದುಕೊಂಡಿದ್ದೇವೆ. ಆದರೂ ಹೋರಾಟ ಮಾಡುತ್ತಿದ್ದಾರೆ ಮೀನುಗಾರರನ್ನ ಹುಡುಕಲು ನಾವೇನು ಸಮುದ್ರಕ್ಕೆ ಹಾರಬೇಕೇ ಎಂದು ಪಶುಸಂಗೋಪನಾ, ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಪ್ರಶ್ನಿಸಿದ್ದಾರೆ. 
ಸಿಂಧನೂರಿನಲ್ಲಿ ಮಾತನಾಡಿದ ಸಚಿವರು, ನಮ್ಮಲ್ಲಿ ಯಾವ ಪೋರ್ಸ್ ಗಳಿವೆ. ನಮ್ಮಲ್ಲಿರುವ ಜ್ಞಾನದಿಂದ ಅವರನ್ನು ವಾಪಸ್ ಕರೆತರುವ ಪ್ರಯತ್ನವನ್ನು ಅವರು ನಾಪತ್ತೆಯಾದ ಮೊದಲ ದಿನದಿಂದಲೇ ಮಾಡಿದ್ದೇವೆ ಎಂದು ಹೇಳಿದ್ದಾರೆ. 
ಮೀನುಗಾರರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವುದು ಬಿಟ್ಟರೆ ನಮ್ಮಲ್ಲಿ ಬೇರೆ ದಾರಿಗಳಿಲ್ಲ. ಪ್ರತಿಭಟನೆ ಮಾಡಲಿ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ. ನಾವು ತೆರೆದ ಮನಸ್ಸಿನಿಂದ ಎಲ್ಲದಕ್ಕೂ ತಯಾರಿದ್ದೇವೆ. ಹೀಗಾಗಿ ಅಲ್ಲಿಯ ಮುಖಂಡರಾದ್ರು ನೀವು ಈ ರೀತಿ ಮಾಡಿದ್ರೆ ಹುಡುಕಬಹುದು. ಪತ್ತೆ ಮಾಡಬಹುದೆಂದು ಹೇಳಬೇಕು ಅಲ್ವಾ ಎಂದು ಪ್ರಶ್ನಿಸಿದ್ದರು.
ಕುಮಟಾದ ಹೊಲನಗದ್ದೆ ನಿವಾಸಿ ಲಕ್ಷ್ಮಣ್ ನಾರಾಯಣ ಹರಿಕಂತ್ರ, ಮಾದನಗೇರಿ ಸತೀಶ್ ಈಶ್ವರ ಹರಿಕಂತ್ರ, ಮಂಕಿ ನಿವಾಸಿ ರವಿ ನಾಗಪ್ಪ, ಭಟ್ಕಳದ ಹರೀಶ್ ಶನಿಯಾರ ಮೊಗೇರ, ರಮೇಶ್ ಶನಿಯಾರ ಮೊಗೇರ, ದಾಮೋದರ ಹಾಗೂ ಬೋಟಿನ ಕ್ಯಾಪ್ಟನ್ ಮಲ್ಪೆಯ ಬಾಲಚಂದ್ರ ಮಲ್ಪೆ ಸೇರಿ ಒಟ್ಟು 7 ಜನ ಮೀನುಗಾರರ ತಂಡ  ಡಿಸೆಂಬರ್ 11ರಂದು ಸುವರ್ಣ ತ್ರಿಭುಜ ಎಂಬ ಬೋಟು ಹತ್ತಿ ಸಮುದ್ರಕ್ಕೆ ಇಳಿದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com