ಆನಂದ್ ಸಿಂಗ್ ಅವರು ನನಗೆ ಅಣ್ಣನ ಸಮಾನ, ಅವರ ಮೇಲೆ ಕೈ ಎತ್ತಿಲ್ಲ-ಕಂಪ್ಲಿ ಗಣೇಶ್

ಬಿಡದಿ ರೆಸಾರ್ಟ್‌ನಲ್ಲಿ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ...
ಕಂಪ್ಲಿ ಗಣೇಶ್
ಕಂಪ್ಲಿ ಗಣೇಶ್

ರಾಮನಗರ: ಬಿಡದಿ ರೆಸಾರ್ಟ್‌ನಲ್ಲಿ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಕಂಪ್ಲಿ ಗಣೇಶ್ ಅವರ ಕುಟುಂಬದವರಲ್ಲಿ ಕ್ಷಮೆಯಾಚಿಸಿದ್ದಾರೆ.

ಬಿಡದಿಯ ಈಗಲ್ಟನ್ ರೆಸಾರ್ಟ್ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೀಮಾನಾಯಕ್ ಮತ್ತು ಆನಂದ್ ಮಾತಾಡುತ್ತಿದ್ದಾಗ ಗಲಾಟೆ ಆಯ್ತು. ಅವರಿಬ್ಬರನ್ನು ಒಗ್ಗೂಡಿಸಲು ನಾನು ಹೋದೆ. ಮಾತಿಗೆ ಮಾತು ಬೆಳೆದು ತಪ್ಪಾಗಿದೆ. ಆದರೆ ಮಾಧ್ಯಮಗಳು ಬಿತ್ತರಿಸುತ್ತಿರುವಂತಹದ್ದೇನೂ ನಡೆದಿಲ್ಲ. ನಾನು ಆನಂದ್​ ಸಿಂಗ್​ಗೆ  ಬಾಟಲಿಯಲ್ಲಿ ಹೊಡೆದಿದ್ದೇನೆ ಎಂಬುದು ಸುಳ್ಳು. ಗನ್​ ಮ್ಯಾನ್​ ಮೇಲೆ ಕೂಡ ನಾನು ಹಲ್ಲೆ ನಡೆಸಿಲ್ಲ. ಭೀಮಾ ನಾಯ್ಕ್​ ಹಾಗೂ ಆನಂದ್​ ಸಿಂಗ್​ ನಡುವೆ ಹೊಂದಾಣಿಕೆ ಮಾಡುವಾಗ ವಾಗ್ವಾದ ನಡೆಯಿತು. ಆದರೆ ಹೊಡೆದಾಟ ನಡೆದಿಲ್ಲ ಎಂದರು.

ಆನಂದ್​ ಸಿಂಗ್​ ಅವರಿಗೆ ಮೊದಲೇ ಆರೋಗ್ಯ ಸರಿಯಿರಲಿಲ್ಲ. ಅವರು ಬಿದ್ದ ಪರಿಣಾಮ ಹೀಗೆ ಆಗಿದೆ. ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು ನಿಜ. ಆದರೆ ಹಲ್ಲೆ ನಡೆದಿಲ್ಲ. ನಾನು ಇವರ ಮಧ್ಯೆ ಮಧ್ಯಸ್ಥಿಕೆ ನಡೆಸಿದ್ದೆ ಹೊರತು ಹಲ್ಲೆಗೆ ಮುಂದಾಗಿಲ್ಲ.ಕಳೆದ ಶಾಸಕಾಂಗ ಸಭೆಯ ವಿಚಾರಗಳಲ್ಲಿ ಇಬ್ಬರ ಮಧ್ಯೆ ಜಗಳ ನಡೆದದ್ದು ನಿಜ. ಅವರನ್ನು ಬಿಡಿಸಲು ಹೋಗಿ ಈ ಘಟನೆ ನಡೆಯಿತು. ಇದು ಬೇಕೆಂತಲೇ ಆದ ಘಟನೆಯಲ್ಲ, ಆಕಸ್ಮಿಕ ಪ್ರಮಾದ.  ಅವರ ಕುಟುಂಬಕ್ಕೆ ನೋವು ಆಗಿದ್ದರೆ ಮಾಧ್ಯಮಗಳ ಮುಖಾಂತರ ಇಲ್ಲವೇ ಸ್ವತಃ ಅವರ ಬಳಿಯೇ ಹೋಗಿ ಕ್ಷಮೆ ಕೇಳುತ್ತೇನೆ. ಆದರೆ ಮಾಧ್ಯಮಗಳಲ್ಲಿ ವೈಭವೀಕರಿಸಿ ಸುದ್ದಿ ಬಿತ್ತರಿಸಲಾಗಿದೆ. ಆನಂದ್ ಸಿಂಗ್ ಅವರು ನಡೆಯುತ್ತಾ ಹೋಗುತ್ತಿದ್ದಾಗ ಬಿದ್ದು ತಲೆಗೆ ಏಟಾಗಿದೆ. ಅದು ಬಿಟ್ಟರೆ ಬೇರೇನೂ ಆಗಿಲ್ಲ. ಅವರಿಗೆ ಮೊದಲೇ ಸ್ವಲ್ಪ ಆರೋಗ್ಯವಿರಲಿಲ್ಲ ಎಂದು ಹೇಳಿದ್ದಾರೆ.

ವೈಯಕ್ತಿಕವಾಗಿ ಆನಂದ್ ಸಿಂಗ್ ನನಗೆ ಅಣ್ಣನ ಸಮಾನ. ಅವರ ಕುಟುಂಬದ ಜತೆ ಬಹಳ ವರ್ಷಗಳಿಂದ ನಾನು ತುಂಬಾ ಆತ್ಮೀಯವಾಗಿದ್ದೇನೆ. ಪಕ್ಷಕ್ಕೆ ಮುಜುಗರ ಆಗುತ್ತದೆ ಎಂದು ನಾನು ಇಂದು ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡುತ್ತಿದ್ದೇನೆ. ನಾನು ನನ್ನ ಕುಟುಂಬ ಇಂದು ಹೋಗಿ ಆನಂದ್ ಸಿಂಗ್ ಬಳಿ ಕ್ಷಮೆ ಕೇಳುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com