ಬಳ್ಳಾರಿಯ ಕರಾಳ ರಾಜಕೀಯದ ಮುಖದ ಅನಾವರಣ: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೆ ಏನು ಕಾರಣ!

ಮತ್ತೊಬ್ಬರ ಬಾಯಿಗೆ ಆಹಾರವಾಗುವುದನ್ನು ತಪ್ಪಿಸಲು, ನಮ್ಮ ಶಾಸಕರನ್ನು ರೆಸಾರ್ಟ್ ನಿಂದ ವಾಪಸ್ ಬರಲು ಸೂಚಿಸಿದ್ದೇವೆ ಎಂದು ಕಾಂಗ್ರೆಸ್ ...
ಆನಂದ್ ಸಿಂಗ್, ಗಣೇಶ್ ಮತ್ತು ಭೀಮಾನಾಯ್ಕ್
ಆನಂದ್ ಸಿಂಗ್, ಗಣೇಶ್ ಮತ್ತು ಭೀಮಾನಾಯ್ಕ್
ಬೆಂಗಳೂರು: ಮತ್ತೊಬ್ಬರ ಬಾಯಿಗೆ ಆಹಾರವಾಗುವುದನ್ನು ತಪ್ಪಿಸಲು, ನಮ್ಮ ಶಾಸಕರನ್ನು ರೆಸಾರ್ಟ್ ನಿಂದ ವಾಪಸ್ ಬರಲು ಸೂಚಿಸಿದ್ದೇವೆ ಎಂದು ಕಾಂಗ್ರೆಸ್ ಪದಾದಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಬಿಡದಿಯ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ನಡುವೆ ನಡೆದ ಗಲಾಟೆಯೊಂದಿಗೆ ಬಳ್ಳಾರಿಯ ಕರಾಳ ರಾಜಕೀಯದ ಮುಖ ಮತ್ತೊಮ್ಮೆ ಅನಾವರಣವಾಗಿದೆ, 
ಬಳ್ಳಾರಿ ಹರಿಗಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ, ಬಳ್ಳಾರಿ ಗ್ರಾಮೀಣ ಶಾಸಕ ಬಿ, ನಾಗೇಂದ್ರ ಮತ್ತು ಕಂಪ್ಲಿ ಶಾಸಕ ಗಣೇಶ್ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಲು ಮುಂದಾಗಿದ್ದರು,
ಆದರೆ ಕಾಂಗ್ರೆಸ್ ಕೇಂದ್ರ ನಾಯಕರನ್ನು ಓಲೈಸುವ ಕಾರಣದಿಂದ ಆನಂದ್ ಸಿಂಗ್  ಈ ಮೂವರು ಬಿಜೆಪಿ ಸೇರುವ ಪ್ರಯತ್ನವನ್ನು  ಹಾಳುಮಾಡಿದ್ದಾರೆ ಎಂದು ಕೋಪಗೊಂಡ ಗಣೇಶ್ ಈ ರೀತಿ ಕಿತ್ತಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆನಂದ್ ಸಿಂಗ್ ಗೂಡಚಾರಿಕೆ ಕೆಲಸ ಮಾಡಿ, ತಾವು ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿರುವ ವಿಷಯವನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತು ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ವರದಿ ಮಾಡಿದ್ದಾರೆ ಎಂದು ಗಣೇಶ್ ಮತ್ತು ಭೀಮಾನಾಯ್ಕ ಆರೋಪಿಸಿದ್ದಾರೆ ಎಂದು ರೆಸಾರ್ಟ್ ನಲ್ಲಿರುವ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬಿಜೆಪಿ ಸೇರಲು ಈ ಇಬ್ಬರು ಡೀಲ್ ಮಾಡಿಕೊಂಡಿದ್ದರು, 50 ಕೋಟಿ ರು ಹಣ ಹಾಗೂ ಸಂಪುಟದಲ್ಲಿ ಸ್ಥಾನ ನೀಡಲು ಬಿಜೆಪಿ ತೀರ್ಮಾನಿಸಿತ್ತು. ತಮಗೆ ಅವಕಾಶವನ್ನು ತಪ್ಪಿಸಿದ್ದಕ್ಕೆ ಈ ಇಬ್ಬರು ಆನಂದ್ ಸಿಂಗ್ ಅವರನ್ನು ಬೈಯ್ಯುತ್ತಿದ್ದರು ಎಂದು ತಿಳಿದು ಬಂದಿದೆ.
2018ರ ವಿಧಾನ ಸಭೆ ಚುನಾವಣೆ ವೇಳೆ ಆನಂದ್ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು, ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಆನಂದ್ ಸಿಂಗ್, ಗಣೇಶ್ ಮತ್ತು ಭೀಮಾ ನಾಯಕ್ ಲಾಬಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com