ನಾನು ಇನ್ನೂ ಕಾಂಗ್ರೆಸ್ ನಲ್ಲಿದ್ದೇನೆ: ರಮೇಶ್ ಜಾರಕಿಹೊಳಿ

ಕಾಂಗ್ರೆಸ್ ನ ನಾಲ್ಕು ಅಸಮಾಧಾನಿತ ಶಾಸಕರಲ್ಲಿ ಮೂವರು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಳುಹಿಸಿರುವ ಶೋಕಾಸ್ ನೋಟೀಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ...

Published: 25th January 2019 12:00 PM  |   Last Updated: 25th January 2019 12:01 PM   |  A+A-


Ramesh Jarakiholi

ರಮೇಶ್ ಜಾರಕಿಹೊಳಿ

Posted By : SD SD
Source : Online Desk
ಬೆಂಗಳೂರು: ಕಾಂಗ್ರೆಸ್ ನ ನಾಲ್ಕು ಅಸಮಾಧಾನಿತ ಶಾಸಕರಲ್ಲಿ ಮೂವರು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಳುಹಿಸಿರುವ ಶೋಕಾಸ್ ನೋಟೀಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ ನಾಲ್ಕನೇ ಶಾಸಕ ಉಮೇಶ್ ಜಾಧವ್ ಮಾತ್ರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಕಳೆದ ಶುಕ್ರವಾರ ನಡೆದ ಸಿಎಲ್ ಪಿ ಸಭೆಗೆ ಗೈರಾಗಿದ್ದನ್ನು ಪ್ರಶ್ನಿಸಿ ಶೋಕಾಸ್ ನೋಟೀಸ್ ನೀಡಲಾಗಿತ್ತು.

ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನದಿಂದ ಶಾಸಕರನ್ನು ರಕ್ಷಿಸಲು ಹಾಗೂ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಎಲ್ಲಾ ಶಾಸಕರ ಸಭೆ ಕರೆಯಲಾಗಿತ್ತು, ಸಭೆಗೆ ನಾಲ್ವರು ಶಾಸಕರು ಗೈರಾಗಿದ್ದರು.

ರಮೇಶ್ ಜಾರಕಿಹೊಳಿ ತಮ್ಮ ಮಗಳ ಮದುವೆಗೆ ಸಿದ್ಧತೆ ನಡೆಸುತ್ತಿದ್ದು, ಪಕ್ಷ ತೊರೆಯುವ  ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ  ಎಂದು ಮೂಲಗಳು ತಿಳಿಸಿವೆ.

ಮಹೇಶ್ ಕುಮಟಳ್ಳಿ, ವೈಯಕ್ತಿಕ ಕಾರಣಕ್ಕಾಗಿ ಸಭೆಗೆ ಗೈರಾಗಿದ್ದಾರೆ ಎಂದು ಹೇಳಲಾಗಿದೆ, ಬುಧವಾರ ನಾಗೇಂದ್ರ ನೋಟೀಸ್ ಗೆ ಉತ್ತರಿಸಿದ್ದಾರೆ, ಕೋರ್ಟ್ ಕಾರಣದಿಂದಾಗಿ ತಾವು ಸಿಎಲ್ ಪಿ ಸಭೆಗೆ ಗೈರಾಗಿದ್ದಾಗಿ ತಿಳಿಸಿದ್ದಾರೆ ಜೊತೆಗೆ ತಾವು ಯಾವುದೇ ಬಿಜೆಪಿ ನಾಯಕರನ್ನು ಭೇಟಿಯಾಗಿಲ್ಲ ಎಂದು ತಿಳಿಸಿದ್ದಾರೆ.
Stay up to date on all the latest ರಾಜಕೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp