ಪಾದ್ರಿಯಾಗಲು ಹೊರಟಿದ್ದ ಜಾರ್ಜ್ ಫರ್ನಾಂಡಿಸ್ ಕರ್ನಾಟಕ ರಾಜಕೀಯದಿಂದ ದೂರವೇ ಉಳಿದಿದ್ದರು ಏಕೆ?

0ರ ದಶದಕದಲ್ಲಿ ಜಾರ್ಜ್ ಫರ್ನಾಂಡಿಸ್ ಬೆಂಗಳೂರು ಬಾಯ್ ಆಗಿದ್ದರು., ಅವರ ಪೋಷಕರಾದ ಜೆಜೆ ಫರ್ನಾಂಡಿಸ್ ಮತ್ತು ಅಲೈಸ್ ಎಂ ಫರ್ನಾಂಡಿಸ್ ....
ಜಾರ್ಜ್ ಫರ್ನಾಂಡಿಸ್
ಜಾರ್ಜ್ ಫರ್ನಾಂಡಿಸ್
ಬೆಂಗಳೂರು: 60ರ ದಶದಕದಲ್ಲಿ ಜಾರ್ಜ್ ಫರ್ನಾಂಡಿಸ್ ಬೆಂಗಳೂರು ಬಾಯ್ ಆಗಿದ್ದರು., ಅವರ ಪೋಷಕರಾದ ಜೆಜೆ ಫರ್ನಾಂಡಿಸ್ ಮತ್ತು ಅಲೈಸ್ ಎಂ ಫರ್ನಾಂಡಿಸ್ ಬೆಂಗಳೂರಿನಲ್ಲಿದ್ದರು, ತಮ್ಮ ತವರೂರಾದ ಮಂಗಳೂರಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು, 
ಜಾರ್ಜ್ ಅವರನ್ನು ಕ್ಯಾಥೊಲಿಕ್ ಪಾದ್ರಿ ಅವರ ಬಳಿ ಕಳಹುಸಿಲಾಗಿತ್ತು, ರೆಸಿಡೆನ್ಸಿ ರಸ್ಚೆಯಲ್ಲಿರುವ ಸೇಂಟ್ ಮೇರಿ ಮೇಜರ್ ಸೆಮಿನರಿಗೆ ಹೋಗುತ್ತಿದ್ದರು, ತತ್ವಶಾಸ್ತ್ರ ಅಧ್ಯಯನಕ್ಕಾಗಿ ಮಲ್ಲೇಶ್ವರಂ ನಲ್ಲಿರುವ ಸೇಂಟ್ ಪೀಟರ್ ಪ್ರೌಢಶಾಲೆಗೆ ಹೋಗುತ್ತಿದ್ದರು. 
ಒಂದು ವರ್ಷದ ತರಬೇತಿ ಮುಗಿದ ನಂತರ  ಉದ್ಯೋಗ ಹುಡುಗತ್ತಾ ಮುಂಬಯಿಗೆ ತೆರಳಿದರು, ಆದರೆ ಆಗಾಗ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ನಗರಕ್ಕೆ ಆಗಮಿಸುತ್ತಿದ್ದರು,
ಟ್ರೇಡ್ ಯೂನಿಯನ್ ಲೀಡರ್ ಆಗಿದ್ದ ಫರ್ನಾಂಡಿಸ್ ತಮ್ಮ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲಿಲ್ಲ, ನಗರಕ್ಕೆ ಆಗಮಿಸಿದಾಗ ಪಕ್ಷದ ಕಾರ್ಯಕರ್ತರ ಭೇಟಿ, ಸಭೆ ಮುಂತಾದವುಗಳಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು.
ರೈಲ್ವೆ ನೌಕರರ ಹೋರಾಟದ ಮುಂಚೂಣಿಯಲ್ಲಿದ್ದ ಜಾರ್ಜ್ 1975 ರಲ್ಲಿ ತುರ್ತು ಪರಿಸ್ಥತಿ ವಿರುದ್ಧ ಸಿಡಿದೆದ್ದರು .1976ರಲ್ಲಿ ಕೊಲ್ಕತ್ತಾದಲ್ಲಿ ಜಾರ್ಜ್ ಅವರ ಬಂಧನವಾಯಿತು. ಬಿಹಾರದಲ್ಲಿ ಅವರು ಸೆರೆಮನೆ ವಾಸ ಅನುಭವಿಸಿದರು, ಅದಾದ ನಂತರ ರಾಷ್ಟ್ರಮಟ್ಟದಲ್ಲಿ ದೊಡ್ಡ ನಾಯಕರಾಗಿ ಬೆಳೆದರು.
ಬೆಂಗಳೂರಿಗರು ಬೆಂಬಲಿಸುತ್ತಾರೆಂಬ ಆತ್ಮ ವಿಶ್ವಾಸದಿಂದಿದ್ದ ಜಾರ್ಜ್ ಫರ್ನಾಂಡಿಸ್ 9184 ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದರು, ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಹಿರಿಯ ನಾಯಕ ಜಾಫರ್ ಷರೀಫ್ ವಿರುದ್ಧ ಜಾರ್ಜ್ ಸೋಲನುಭವಿಸಿದ್ದರು.
ಕ್ಷೇತ್ರ ಪುನರ್ ವಿಂಗಡನೆಗೂ ಮೊದಲು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶಾಂತಿನಗರ, ಶಿವಾಜಿನಗರ, ಭಾರತಿನಗರ, ಮತ್ತು ಜಯಮಹಲ್ ಗಳು ಸೇರಿದ್ದವು, ಇವುಗಳ ಜೊತೆಗೆ ನಾಲ್ಕು ಗ್ರಾಮೀಣ ಪ್ರದೇಶವಾದ ದೇವನಹಳ್ಳಿ, ಹೊಸಕೋಟೆ, ವರ್ತೂರು ಮತ್ತು ಯಲಹಂಕ ಕ್ಷೇತ್ರಗಳು ಉತ್ತರ ಕ್ಷೇತ್ರಕ್ಕೆ ಸೇರಿದ್ದವು, 
ಉತ್ತರ ಲೋಕಸಭೆ ಕ್ಷೇತ್ರದ 8 ರಲ್ಲಿ ಆರು ವಿಧಾನಸಭೆ ಕ್ಷೇತ್ರಗಳಲ್ಲಿ  ಜನತಾ ಪಾರ್ಟಿ ಶಾಸಕರಿದ್ದರು, ಜಾರ್ಜ್ ಬೆಂಬಲಕ್ಕೆ ಇಷ್ಟೆಲ್ಲಾ ಇದ್ದರೂ ಇಂದಿರಾಗಾಂದಿ ಹತ್ಯೆ ಕಾರಣ 1984ರ ಲೋಕಸಭೆ ಚುನಾವಣೆಯಲ್ಲಿ  ಕಾಂಗ್ರೆಸ್ 404 ಕ್ಷೇತ್ರಗಳಲ್ಲಿ ಜಯಬೇರಿ ಸಾಧಿಸಿ ದಾಖಲೆ  ಸೃಷ್ಟಿಸಿತು. 
ಈ ಚುನಾವಣೆಯಲ್ಲಿನ ಸೋಲು ಜಾರ್ಜ್ ಗೆ ಅಚ್ಚರಿ ಮೂಡಿಸಿತ್ತು. ತಮ್ಮ ಪಕ್ಷದ ನಾಯಕರು ತಮಗೆ ದ್ರೋಹ ಬಗೆದಿದ್ದಾರೆ ಎಂದು ಅವರು ಆರೋಪಿಸಿದ್ದರು. 
ಈ ಒಂದು ಆಘಾತದಿಂದಾಗಿ ಫರ್ನಾಂಡಿಸ್ ಕರ್ನಾಟಕ ರಾಜಕೀಯಕ್ಕೆ ಯಾವತ್ತೂ ಮರಳಲಿಲ್ಲ, ಕರ್ನಾಟಕದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲಿಲ್ಲ, ಆದರೆ ಕರ್ನಾಟಕ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಮತ್ತಿತತರರ ಜೊತೆ ಆತ್ಮೀಯ ಒಡನಾಟ ಹೊಂದಿದ್ದರು. 
ಅವರ ಸಹೋದರರಾದ ಲಾರೆನ್ಸ್ ಮತ್ತು ಮೈಕೆಲ್, ತುರ್ತು ಪರಿಸ್ಥಿತಿ ವೇಳೆ ಜೈಲು ಸೇರಿದ್ದರು, ನಂತರ ಜಾರ್ಜ್ ಅವರಿಂದ ಸ್ಫೂರ್ತಿ ಪಡೆದು ಶಾಸಕರಾಗಿ ಟ್ರೇಡ್ .ಯೂನಿಯನ್ ಮುಖಂಡರಾಗಿ ಇನ್ನೂ ಮುಂದುವರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com