ಮಂಡ್ಯದಲ್ಲಿ ನೀರಿನ ಸಮಸ್ಯೆ ಮಾತ್ರವಲ್ಲ, 'ಗಟ್ಟಿಗಿತ್ತಿ' ಸುಮಲತಾ ಮುಂದಿವೆ ಹಲವು ಸವಾಲುಗಳು!

ಮೊಟ್ಟ ಮೊದಲ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸುವ ಮೂಲಕ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಇತಿಹಾಸ ಬರೆದ ಹಿರಯ ನಟಿ ಸುಮಲತಕಾ ಅಂಬರೀಷ್ ಮುಂದಿನ ...
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್
ಮಂಡ್ಯ: ಮೊಟ್ಟ ಮೊದಲ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸುವ ಮೂಲಕ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಇತಿಹಾಸ ಬರೆದ ಹಿರಯ ನಟಿ ಸುಮಲತಕಾ ಅಂಬರೀಷ್ ಮುಂದಿನ ಹಾದಿ ಅಷ್ಟೊಂದು ಸುಗಮವಾಗಿಲ್ಲ.
ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಭಾರೀ ಮತಗಳ ಅಂತರದಿಂದ ಸೋಲಿಸಿ ಹೊಸ ಜೀವನ ಆರಂಭಿಸಿದ್ದಾರೆ, ರಾಜಕೀಯದಲ್ಲಿ ಅವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ, ಆದರೆ ಸುಮಲತಾ ಮುಂದೆ ಹಲವು ಸವಾಲುಗಳಿವೆ, ಹಾಗೆಯೇ ಮತದಾರರ ನಿರೀಕ್ಷೆ ಬಗ್ಗೆ ಅವರಿಗೆ ಅರಿವಿದೆ.
ರಾಜ್ಯದಲ್ಲಿ ಹಲವು ಕಡೆ ಬರ ಭೀಕರ ತಾಂಡವವಾಡುತ್ತಿದೆ, ಮೊದಲ ತಿಂಗಳ ಮುಂಗಾರು ಮಳೆ ಜನರಲ್ಲಿ ಸ್ವಲ್ಪ ಮಟ್ಟಿನ ವಿಶ್ವಾಸ ಮೂಡಿತ್ತು. ಆದರೆ ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳು ತಳ ಮಟ್ಟ ತಲುಪಿವೆ, ಈಗಾಗಲೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.ತಮ್ಮ ಬೆಳೆಗಳನ್ನು ರಕ್ಷಿಸಲು ನೀರು ಬಿಡುವಂತೆ ಮಂಡ್ಯ ಜಿಲ್ಲೆ ಜನತೆ ಆಗ್ರಹಿಸುತ್ತಿದ್ದಾರೆ.
ಸದ್ಯದ ಪರಿಸ್ಥಿತಿಗೆ ಸುಮಲತಾ ಅವರನ್ನು ಬೆಯ್ಯುವುದು ಸರಿಯಲ್ಲ, ರಾಜ್ಯ ಸರ್ಕಾರ ಕೇಂದ್ರ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮನವಿ ಸಲ್ಲಿಸಬೇಕು  ಎಂದು ರೈತ ಮೋರ್ಚಾ ಮುಖಂಡ ನಂಜುಂಡೇಗೌಡ ತಿಳಿಸಿದ್ದಾರೆ.
ಮಗನ ಸೋಲಿನ ನಂತರ ಸಿಎಂ ಕುಮಾರಸ್ವಾಮಿ ಇನ್ನೂ ಮಂಡ್ಯಕ್ಕೆ ಭೇಟಿ ನೀಡಿಲ್ಲ,ಹಾಗೂ ಸುಮಲತಾ ಅವರಿಗೆ ಸೌಜನ್ಯದ ಕರೆಯನ್ನು ಮಾಡಿಲ್ಲ,  ರೈತ ಸಮುದಾಯ ತಮ್ಮ ಹೊಸ ನಾಯಕಿ ಮುಂದೆ ಯಾವ ಹೆಜ್ಜೆ ಇಡುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದಾರೆ,
ನೀರಿನ ಸಮಸ್ಯೆ ಬಗ್ಗೆ  ಅರಿವಿರುವ ಸುಮಲತಾ ಈಗಾಗಲೇ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್  ಅವರನ್ನು ಭೇಟಿ ಮಾಡಿ, 2 ಟಿಎಂಸಿ ನೀರನ್ನು ಜಿಲ್ಲೆಯ ಜನತೆಯ ಬೆಳೆ ರಕ್ಷಿಸಲು ನೀಡುವಂತೆ ಮನವಿ ಮಾಡಿದ್ದಾರೆ, ಜೊತೆಗೆ ಈಗಾಗಲೇ ಮಂಜ್ಯ ಲೋಕಸಭೆ ಕ್ಷೇತ್ರದಲ್ಲಿ ಸಂಚರಿಸಿ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ,. 
ಹಿಂದಿನ ಸರ್ಕಾರದ ಅವಧಿಯಲ್ಲಿ ಆದ ರೈತರ ಆತ್ಮಹತ್ಯೆ ತೀವ್ರ ಬರಕ್ಕೆ ಸುಮಲತಾ ಹೊಣೆಯಲ್ಲ, ತಮ್ಮ ಪತಿ ಮಾಜಿ ಸಚಿವ ದಿವಂಗತ ಅಂಬರೀಷ್ ಅವರ ಆಸೆಯಂತೆ ಮಂಡ್ಯ ಜಿಲ್ಲೆ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಎಲ್ಲಾ ಹಳ್ಳಿಗಳಿಗೂ ಶುದ್ದ ಕುಡಿಯುವ ನೀರು, ಉತ್ತಮ ರಸ್ತೆ ಸಂಪರ್ಕ, ಗ್ರಾಮೀಣ ಸಾರಿಗೆ  ಸುಧಾರಣೆ, ಮಹಿಳೆಯರಿಗೆ ಉದ್ಯೋಗ, ಕೆರೆಗಳ ಸ್ವಚ್ಛತೆ, ಅಂತರ್ಜಲದ ನೀರಿನಮಟ್ಟ ಹಾಗೂ ಕುಡಿಯುವ ನೀರಿನ ಬಗ್ಗೆ ಈಗಾಗಲೇ ಸಭೆ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಉತ್ತಮ ದರ್ಜೆಯ ವರ್ಲ್ಡ್ ಕ್ಲಾಸ್ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವುದು ಸುಮಲತಾ ಮೊದಲ ಆದ್ಯತೆ. ಆ ಮೂಲಕ ಸಾಂಪ್ರಾದಾಯಿಕ ಕ್ರೀಡೆ ಕಬಡ್ಡಿ ಪ್ರೋತ್ಸಾಹಿಸಲು ನಿರ್ಧರಿಸಿದ್ದಾರೆ. ನಾನು ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ, ಮಂಡ್ಯ ಅಭಿವೃದ್ಧಿ ಬಗ್ಗೆ ನೀಲಿನಕ್ಷೆ ಸಿದ್ದ ಪಡಿಸಬೇಕಿದೆ ಎಂದು ತಿಳಿಸಿದ್ದಾರೆ.
ಮತದಾರರ ನಿರೀಕ್ಷೆ ಭಾರಿ ಪ್ರಮಾಣದಲ್ಲಿದೆ ಎಂದು ತಿಳಿದಿರುವ ಸುಮಲತಾ  ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳುವ ಸಲುವಾಗಿ ಎನ್ ಡಿ ಎ ಬೆಂಬಲಿಸುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com