ಶಾಸಕರ ರಾಜಿನಾಮೆ ಹಿಂದೆ ಪ್ರಧಾನಿ ಮೋದಿ, ಅಮಿತ್ ಶಾ ಕೈವಾಡವಿಲ್ಲ: ಬಿಜೆಪಿ ಪರ ಜಿಟಿ ದೇವೇಗೌಡ ಬ್ಯಾಟಿಂಗ್

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಮೈತ್ರಿ ಸರ್ಕಾರದಲ್ಲಿ ಅಭದ್ರತೆ ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ, ಅವರು ಯಾವುದೇ ಶಾಸಕರಿಂದ ....
ಜಿಟಿ ದೇವೇಗೌಡ
ಜಿಟಿ ದೇವೇಗೌಡ
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಮೈತ್ರಿ ಸರ್ಕಾರದಲ್ಲಿ ಅಭದ್ರತೆ ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ, ಅವರು ಯಾವುದೇ ಶಾಸಕರಿಂದ ರಾಜಿನಾಮೆ ಕೊಡಿಸಲು ಮುಂದಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಹೇಳಿಕೆ ನೀಡಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಿಗೆ ಶಾಕ್‌ ನೀಡಿದ್ದಾರೆ.
.
ಮೈಸೂರಿನಲ್ಲಿ ಮಾತನಾಡಿದ ಮೈತ್ರಿ ಸರ್ಕಾರದಲ್ಲಿ ಅಭದ್ರತೆ ಸೃಷ್ಟಿಸುವ ಕೆಲಸಕ್ಕೆ ಮೋದಿ, ಅಮಿತ್‌ ಶಾ ಅವರು ಕೈ ಹಾಕಿಲ್ಲ.ಅವರು ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ಕಾಶ್ಮೀರ ವಿಚಾರ, ಚೀನಾ ,ಅಮೆರಿಕಾದೊಂದಿಗಿನ ವಿಚಾರಗಳಲ್ಲಿ ಏನು ಮಾಡಬೇಕೆಂದು ಕೆಲಸ ಮಾಡುತ್ತಿದ್ದಾರೆ. ಜುಲೈ 5 ರಂದು ರೈತರ ಪರ ಬಜೆಟ್‌ ನೀಡುವುದಾಗಿ ಹೇಳಿದ್ದು, ಅದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ರಮೇಶ್‌ ಜಾರಕಿಹೊಳಿ  ಸರ್ಕಾರ ರಚನೆ ಆದಾಗಿನಿಂದ ರಾಜಿನಾಮೆ ಕೊಡುವುದಾಗಿ ಹೇಳುತ್ತಾ ಬಂದಿದ್ದರು,  ಹೀಗಾಗಿ ಆ ವಿಚಾರ ಮೊದಲೆ ತಿಳಿದಿತ್ತು ಆದರೆ ಪಾಪ, ಆನಂದ್‌ ಸಿಂಗ್‌ಗೆ ಏನು ಕಷ್ಟವಿತ್ತೋ ,ಅದನ್ನು ಕಾಂಗ್ರೆಸ್‌ ನಾಯಕರು ಸರಿ ಮಾಡುತ್ತಾರೆ ಎಂದರು. ಬಿಜೆಪಿ ಮೇಲೆ ಯಾರು ಕೆಸರು ಎರಚೊ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com