ಪ್ರವಾಸಿ ತಾಣ ಮೈಸೂರನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಸಂಸದ ಪ್ರತಾಪ್ ಸಿಂಹ ಯೋಜನೆ

ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕ್ಷೇತ್ರದ ಅಭಿವೃದ್ಧಿಗಾಗಿ ಒಂದು ಗೋಲ್ ಸೆಟ್ ...
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
ಮೈಸೂರು: ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕ್ಷೇತ್ರದ ಅಭಿವೃದ್ಧಿಗಾಗಿ ಒಂದು ಗೋಲ್ ಸೆಟ್ ಮಾಡಿಕೊಂಡಿದ್ದಾರೆ, ಮುಂದಿನ ಐದು ವರ್ಷಗಳಲ್ಲಿ ಮೈಸೂರನ್ನು ಪ್ರಸಿದ್ಧ ಪ್ರಮುಖ ತಾಣವಾಗಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿ ಯನ್ನು ವಾಸ್ತವವಾಗಿ ಜಾರಿಗೆ ತರುವುದು, ಹಾಗೂ ಬೆಂಗಳೂರು-ಕಣ್ಣೂರು ಎಕ್ಸ್ ಪ್ರೆಸ್ ಸೇವೆ ಪುನಾರಾರಂಭಿಸುವುದೂ ಹಾಗೂ ಮೈಸೂರು- ಕುಶಾಲನಗರ ಹೊಸ ಬ್ರಾಡ್ ಗೇಜ್ ರೈಲು ತರುವುದು ಸಿಂಹ ಅವರ ಪ್ರಮುಖ ಆಜೆಂಡಾವಾಗಿದೆ.
ಇತ್ತೀಚೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮೈಸೂರು-ಬೆಂಗಳೂರು ನಡುವೆ ನಿರಂತರ ವಿಮಾನ ಸಂಚಾರ  ಆರಂಭವಾಗಿದ್ದು, ಅದೇ ರೀತಿ ಗೋವಾ-ಮೈಸೂರು, ಗೋವಾ-ಕೊಚ್ಚಿಗೂ ವಿಮಾನ ಸಂಚಾರಕ್ಕೆ ಪ್ರತಾಪ್ ಸಿಂಹ ಯತ್ನಿಸುತ್ತಿದ್ದಾರೆ.
ಮೈಸೂರು ನಗರದಲ್ಲಿ ನಾಲ್ಕು ಸ್ಥಳಗಳಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸಲು ಪಣ ತೊಟ್ಟಿದ್ದಾರೆ. ಈಗ ಸದ್ಯ ಮೈಸೂರಿನಲ್ಲಿ ಒಂದೇ ಒಂದು ಕೇಂದ್ರೀಯ ವಿದ್ಯಾಲಯವಿದೆ. ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಹಾಗೂ ಸಂಪರ್ಕ ವನ್ನು ಮತ್ತಷ್ಟು ಸುಧಾರಿಸಲು ಮೊದಲ ಆದ್ಯತೆ ನೀಡಿರುವ ಪ್ರತಾಪ್ ಸಿಂಹ ಮೈಸೂರಿನಿಂದ ಪ್ರಮುಖ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲು ಪಣ ತೊಟ್ಟಿದ್ದಾರೆ.
ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ರಾಜಕಾರಣಿಯಾಗಿ ಬದಲಾಗಿದ್ದು ಇತಿಹಾಸ, 2014 ರಲ್ಲಿ ಬಿಜೆಪಿ ಕೊಡಗು-ಮೈಸೂರು ಕ್ಷೇತ್ರಕ್ಕೆ ಪ್ರಸಿದ್ದ ಅಂಕಣಕಾರರಾಗಿದ್ದ ಪ್ರತಾಪ್ ಸಿಂಹ ಅವರನ್ನು ಕಣಕ್ಕಿಳಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.  ಮಾಜಿ ಸಂಸದ ಎಚ್ ವಿಶ್ವನಾಥ್ ಅವರ ವಿರುದ್ಧ ಪ್ರತಾಪ್ ಸಿಂಹ ಸ್ಪರ್ಧಿಸಿದ್ದರು, ಫಲಿತಾಂಶ ಪ್ರಕಟವಾದಾಗ ಪ್ರತಾಪ್ ಸಿಂಹ ಗೆಲುವು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. 
ಹಾಸನ ಜಿಲ್ಲೆಯ ಸಕಲೇಶಪುರದವರಾದ ಪ್ರತಾಪ್ ಸಿಂಹ  ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ,ಸ್ನಾತಕೋತ್ತರ ಪದವಿ ಪಡೆದರು, ಅದಾದ ನಂತರ ವಿಜಯ ಕರ್ನಾಟಕ ದೈನಂದಿನ ಪತ್ರಿಕೆಗೆ 1999 ರಲ್ಲಿ ಸೇರಿದರು. ಟ್ರೈನಿಯಾಗಿದ್ದ ಪ್ರತಾಪ್ ಸಿಂಹ ಬರಹಗಳು ವಿಶ್ವೇಶ್ವಲರ ಭಟ್ಟರ ಗಮನ ಸೆಳೆದವು.  ಪ್ರತಾಪ್ ಸಿಂಹ ಬಲಪಂಥೀಯ ಪರ ಬರಹಗಳು ಹಿಂದೂ ಕಟ್ಟವಾದಿಗಳಿಗೆ ಇಡಿಸಿ ಅಭಿಮಾನಿಗಳು ಹೆಚ್ಚಾದರು, ಇದರ ಜೊತೆಗೆ ಎಡ ಪಂಥೀಯರ ಕೋಪಕ್ಕೂ ತುತ್ತಾದರು. ಭಯೋತ್ಪಾದಕ ಸಂಘಟನೆಗಳ ಹಿಟ್ ಲಿಸ್ಟ್ ನಲ್ಲಿ ಪ್ರತಾಪ್ ಸಿಂಹ ಹೆಸರು ಸೇರಿಕೊಂಡಿತ್ತು.
ಮೈಸೂರು-ಕೊಡಗು ಕ್ಷೇತ್ರಕ್ಕೆ ಬಿಜೆಪಿ ಹೊಸ ಮುಖಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ  ಪ್ರತಾಪ್ ಸಿಂಹ ಹೆಸರು ಕೇಳಿ ಬಂತು. ಇದಕ್ಕೆ ಹಲವು ಮಂದಿ ವಿರೋಧ ವ್ಯಕ್ತ ಪಡಿಸಿದ್ದರು. ಎರಡು ಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಸಿ.ಎಚ್ ವಿಜಯ ಶಂಕರ್ 2009 ರಲ್ಲಿ ಕಾಂಗ್ರೆಸ್ ಅಬ್ಯರ್ಥಿ ಎಚ್. ವಿಶ್ವನಾಥ್ ವಿರುದ್ಧ ಸೋಲನುಭವಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ತಮಗೆ ಸೀಟು ಸಿಗಬಹುದು ಎಂಬ ವಿಶ್ವಾಸದಲ್ಲಿದ್ದರು, ಆದರೆ ಮೊದಲ ಪಟ್ಟಿಯಲ್ಲಿ ವಿಜಯ ಶಂಕರ್ ಹೆಸರಿರಲಿಲ್ಲ, ಬಿಜೆಪಿ ಎರಡನೇ ಪಟ್ಟಿಯಲ್ಲಿ ಮೈಸೂರು-ಕೊಡಗು ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಹಾಗೂ ಹಾಸನ ಕ್ಷೇತ್ರಕ್ಕೆ ವಿಜಯ್ ಶಂಕರ್ ಅವರನ್ನು ಅಭ್ಯರ್ಥಿಗಳನ್ನಾಗಿಸಿ  ಪಟ್ಟಿ ಪ್ರಕಟಿಸಲಾಯಿತು. 
ಹೀಗಾಗಿ ಪ್ರತಾಪ್ ಸಿಂಹ ಅವರು ಮೈಸೂರಿಗೆ ಬಂದರು. ಮೊದಲ ಪ್ರಯತ್ನದಲ್ಲೆ ತಮ್ಮನ್ನು ಮುಕ್ತವಾಗಿ ಸ್ವಾಗತಿಸಿದ ಮೈಸೂರು ಜನತೆಗೆ ತಾವು ಋಣಿಯಾಗಿರುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com